ಮೊದಲ ಬಾರಿಗೆ ಹೊಸ ವಿಭಿನ್ನ ಪಾತ್ರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಅವರು

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾದ ಟ್ರೇಲರ್ ರಿಲೀಸ್, ಆನೆ ಹೊಡೆಯೋಕೆ ಒಂದ್ ಬುಲೆಟ್ ಬೇಕು. ಬೆಟ್ಟ ಹೊಡೆಯೋಕೆ ಡೈನಾಮೆಟ್ ಸಾಕು. ಆದ್ರೇ ಈ ಸೂರ್ಯನ ಕಟ್ಟಾಕೋ ವೆಪನ್ ಇನ್ನೂ ಯಾರು ಹುಟ್ಟಿಲ್ಲ ಎಂಬ ಸರಣಿ ಡೈಲಾಗ್ ಹೊಂದಿರುವ ರೈಡರ್ ಚಿತ್ರದ ಟ್ರೈಲರ್ ಲಹರಿ ಮ್ಯೂಸಿ ಕ್ ಯೂಟ್ಯೂಬ್ ಚಾನೆಲ್ ನಲ್ಲಿ ಇಂದು ಡಿಸೆಂಬರ್ 16ರಂದು ರಿಲೀಸ್ ಆಗಿದೆ. ಮಾಸ್, ಲವ್, ಕಾಮಿಡಿ, ಎಮೋಶನ್ ದೃಶ್ಯ ಸನ್ನಿವೇಶಗಳನ್ನ ಒಳಗೊಂಡಿರುವ ಈ ರೈಡರ್ ಚಿತ್ರದ ಟ್ರೇಲರ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ರೈಡರ್ ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ ನಾಲ್ಕು ಗಂಟೆಯಲ್ಲಿ ಬರೋಬ್ಬರಿ ಆರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರು ರೈಡರ್ ಸಿನಿಮಾ ಇದೀಗ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ನಟ ನಿಖಿಲ್ ಕುಮಾರ್ ಅಭಿನಯದ ನಾಲ್ಕನೇಯ ಚಿತ್ರ ಈ ರೈಡರ್ ಸಿನಿಮಾ. ಈ ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಬ್ಯಾಸ್ಕೆಟ್ ಬಾಲ್ ಆಟಾಗಾರನಾಗಿ ಸೂರ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‌ಕ್ರೀಡೆ ಆಧಾರಿತ ಆಕ್ಷನ್ ಕಮ್ ಲವ್ ಡ್ರಾಮಾ ಕಥಾ ಹಂದರ ಹೊಂದಿರುವ ರೈಡರ್ ಸಿನಿಮಾಗೆ ಟಾಲಿವುಡ್ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ನಿರ್ದೇಶನ ಮಾಡಿರುವ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರಿಗೆ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆಯಂತೆ.

ಲಹರಿ ಮ್ಯುಸಿಕ್ ಟಿ ಸೀರಿಸ್ ಪ್ರೊಡಕ್ಷನ್ ಮತ್ತು ಶಿವನಂದಿ ಎಂಟರ್ಟೈನ್ ಮೆಂಟ್ಸ್ ಅಡಿಯಲ್ಲಿ ಸುನಿಲ್ ಗೌಡ ಬಂಡವಾಳ ಹೂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ನಟ ಗರುಡರಾಮ್ ಕೂಡ ನಟಿಸಿದ್ದು, ನಿಖಿಲ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಕಾಶ್ಮೀರ ಪರ್ದೇಶಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ, ಕಿಲ್ಲರ್ ಮಂಜು. ದತ್ತಣ್ಣ,ಅಚ್ಯೂತ್ ಕುಮಾರ್,ಚಿಕ್ಕಣ್ಣ ಅಭಿನಯಿಸಿದ್ದಾರೆ. ಈ ರೈಡರ್ ಸಿನಿಮಾಗೆ ಮ್ಯಾಜಿ಼ಕಲ್ ಕಂಪೋಸರ್ ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದು, ಶ್ರೀಶ ಕೂದುವಳ್ಳಿ ಅವರ ಕ್ಯಾಮೆರ ಕೈ ಚಳಕವಿದೆ.ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ಕುಮಾರ್ ಅವರ ರೈಡರ್ ಸಿನಿಮಾ ಅವರ ಅಭಿಮಾನಿಗಳಿಗೆ ಭಾರಿ ಕುತೂಹಲ ಮೂಡಿಸಿದೆ. ಟ್ರೇಲರ್ ನೋಡಿದ ಮೇಲಂತೂ ರೈಡರ್ ಚಿತ್ರ ಸಿನಿ ಪ್ರೇಕ್ಷಕರಿಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೇ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ರೈಡರ್ ಚಿತ್ರ ರೈಡ್ ಮಾಡಲಿದೆ.

%d bloggers like this: