ಮೊದಲ ಬಾರಿಗೆ ತನ್ನ ಗರ್ಲ್ ಫ್ರೆಂಡ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆಎಲ್ ರಾಹುಲ್

ಅಚ್ಚರಿ ಮೂಡಿಸಿದ ಟೀಮ್ ಇಂಡಿಯಾದ ಖ್ಯಾತ ಆಟಗಾರ ಕೆ.ಎಲ್.ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ. ಹೌದು ಈ ಜೋಡಿ ರಿಲೇಶನ್ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಬಗ್ಗೆ ಎಲ್ಲಿಯೂ ಕೂಡ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿರಲಿಲ್ಲ. ಇನ್ನು ಇದೇ ಮೊದಲ ಬಾರಿಗೆ ರೆಡ್ ಕಾರ್ಪೇಟ್ ಮೇಲೆ ಜೋಡಿಯಾಗಿ ಕೈ ಕೈ ಹಿಡಿದುಕೊಂಡು ಜೊತೆಯಾಗಿ ನಡೆದುಕೊಂಡು ಬಂದು ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನೆಲ್ಲಾ ಅಚ್ಚರಿಗೊಳಿಸಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ನಟರಾದ ಕನ್ನಡಿಗ ಸುನೀಲ್ ಶೆಟ್ಟಿ ಅವರ ಪುತ್ರ ಅಹನ್ ಶೆಟ್ಟಿ ಅವರು ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

ಇತ್ತೀಚೆಗೆ ಅಹನ್ ಶೆಟ್ಟಿ ಅವರ ಚೊಚ್ಚಲ ಅಭಿನಯದ ತಡಪ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಈ ಪ್ರೀಮಿಯರ್ ಶೋ ಗೆ ಬಾಲಿವುಡ್ ನ ಅನೇಕ ಸ್ಟಾರ್ಸ್ ಕೂಡ ಆಗಮಿಸಿದ್ದರು. ಅಂತೆಯೇ ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಕೂಡ ಬಂದಿದ್ದಾರೆ. ಇವರು ಹಾಗೇ ಸುಮ್ಮನೆ ಬಂದಿದ್ದರೆ ಸುದ್ದಿ ಆಗುತ್ತಿರಲಿಲ್ಲ. ಆದರೆ ಈ ಜೋಡಿಗಳು ಪರಸ್ಪರ ಕೈ ಹಿಡಿದು ರೆಡ್ ಕಾರ್ಪೆಟ್ ಮೇಲೆ ನಡೆದು ಬಂದರು. ಇದು ಎಲ್ಲರಿಗೂ ಭಾರಿ ಅಚ್ಚರಿಯಾಗಿ ಕಾಣಿಸಿತು. ಇಷ್ಟು ದಿನಗಳ ಕಾಲ ಈ ಜೋಡಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ಥಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಈ ಜೋಡಿ ಎಲ್ಲಿಯೂ ಕೂಡ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ.

ಇವರಿಬ್ಬರ ಪ್ರೀತಿ ಪ್ರೇಮದ ಬಗ್ಗೆ ನಟ ಸುನೀಲ್ ಶೆಟ್ಟಿ ಅವರಿಗೆ ಮೊದಲೇ ತಿಳಿದಿತ್ತು. ಇವರಿಬ್ಬರ ಮದುವೆಯ ಬಗ್ಗೆಯೂ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಇನ್ನು ಇತ್ತೀಚೆಗೆ ನಡೆದ ಟಿ ಟ್ವೆಂಟಿ ವಿಶ್ವ ಕಪ್ ಕ್ರಿಕೆಟ್ ನಲ್ಲಿ ರಾಹುಲ್ ರೋಚಕ ಅರ್ಧ ಶತಕ ಸಿಡಿಸಿದಾಗ ನಟಿ ಅಥಿಯಾ ಶೆಟ್ಟಿ ವೀಕ್ಷಕರ ಗ್ಯಾಲರಿಯಲ್ಲಿಯೇ ಕುಣಿದು ಕುಪ್ಪಳಿಸಿದ್ದರು. ಇನ್ನು ಇತ್ತೀಚೆಗೆ ನಟಿ ಅಥಿಯಾ ಶೆಟ್ಟಿ ಅವರ ಹುಟ್ಟು ಹಬ್ಬದಂದು ಕೆ ಎಲ್.ರಾಹುಲ್ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಅಥಿಯಾ ಶೆಟ್ಟಿ ಅವರೊಂದಿಗೆ ಇರುವ ಫೋಟೋವೊಂದನ್ನ ಶೇರ್ ಮಾಡಿ ವಿಶ್ ಯೂ ಹ್ಯಾಪಿ ಬರ್ಡೇ ಮೈ ಹಾರ್ಟ್ ಎಂದು ಬರೆದು ಪೋಸ್ಟ್ ಮಾಡಿದ್ದರು. ಇದಕ್ಕೆ ನಟಿ ಅಥಿಯಾ ಶೆಟ್ಟಿ ಕೂಡ ವೈಟ್ ಹಾರ್ಟ್ ಇಮೋಜಿಯೊಂದನ್ನ ರಿಯಾಕ್ಟ್ ಮಾಡಿದ್ದರು. ಹೀಗೆ ತೆರೆ ಮರೆಯಲ್ಲಿಯೇ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಸಾರ್ವಜನಿಕವಾಗಿ ಆತ್ಮೀಯವಾಗಿ ಗುರುತಿಸಿಕೊಂಡಿದ್ದಾರೆ.

%d bloggers like this: