ಮೊದಲ ಎಲೆಕ್ಟ್ರಿಕ್ ದೊಡ್ಡ ಕಾರು ಬಿಡುಗಡೆ ಮಾಡಿದ ಐಷಾರಾಮಿ ಕಾರು ಕಂಪನಿ, ಒಂದು ಚಾರ್ಜಿಗೆ 425 ಕಿಲೋಮೀಟರ್ ಮೈಲೇಜ್

ಇತ್ತೀಚೆಗೆ ದೇಶಾದ್ಯಂತ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆಯೇ ಭಾರಿ ಸುದ್ದಿ ಆಗುತ್ತಿದೆ. ಅದರಲ್ಲಿಯೂ ದ್ವಿಚಕ್ರ ವಾಹನಗಳ ಅನೇಕ ಕಂಪನಿಗಳು ಇಂಧನ ಸಹಿತ ವಾಹನಗಳಂತೆ ಇಂಧನ ರಹಿತ ವಿದ್ಯುಚ್ಚಾಲಿತ ವಾಹನಗಳನ್ನು ತಯಾರು ಮಾಡುವುದಕ್ಕೆ ಉತ್ಸುಕವಾಗುತ್ತಿವೆ. ಏಕೆಂದರೆ ಕೇಂದ್ರ ಸರ್ಕಾರದಿಂದಲೂ ಕೂಡ ಈ ಎಲೆಕ್ಟ್ರಿಕ್ ವಾಹನಗಳಿಗ ಪ್ರೋತ್ಸಾಹ ಮತ್ತು ಉತ್ತೇಜನಕ್ಕಾಗಿ ಸಬ್ಸಿಡಿಯನ್ನು ಕೂಡ ನೀಡುತ್ತದೆ‌. ಮೋದಿ ಸರ್ಕಾರ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಬಿಎಸ್4 ವಾಹನಗಳನ್ನ ನಿಷೇಧ ಮಾಡಿ, ಬಿಎಸ್ 6ವಾಹನಗಳ ಉತ್ಪಾದನೆಗೆ ಆದೇಶ ಮಾಡಿದೆ. ಅದರಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ ದೇಶದ ಎಲ್ಲಾ ಮೋಟಾರು ವಾಹನ ತಯಾರಿಕೆ ಕಂಪನಿಗಳು ಬಿಎಸ್6 ವಾಹನಗಳನ್ನು ತಯಾರಿಸುತ್ತಿವೆ.

ದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಪರಿಸರ ಸ್ನೇಹಿ ವಿದ್ಯೂಚ್ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡುವ ಮೂಲಕ ಭಾರತ ಸರ್ಕಾರ ಮಹತ್ವದ ನಿರ್ಣಯವನ್ನು ಕೂಡ ತೆಗೆದುಕೊಂಡಿದೆ. ಇನ್ನೊಂದೆಡೆ ನಡುವೆ ಇಂಧನದ ಬೆಲೆ ಕೂಡ ದುಬಾರಿ ಆಗಿರುವ ಕಾರಣ ವಾಹನ ಸವಾರರು ಕೂಡ ಈ ಇಂಧನ ಸಹಿತ ವಾಹನಗಳ ಮೇಲೆ ನಿರುತ್ಸಾಹ ತೋರುತ್ತಿದ್ದಾರೆ. ಇಲ್ಲಿಯವರೆಗೆ ಅನೇಕ ದ್ವಿಚಕ್ರವಾಹನಗಳ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಲಾಂಚ್ ಮಾಡುವ ಮೂಲಕ ಸುದ್ದಿಯಾಗುತ್ತಿದ್ದವು. ಈಗಾಗಲೇ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬಂದಿದೆ. ಆದರೆ ದುಬಾರಿ ಐಷಾರಾಯಿ ಕಾರು ಎಲೆಕ್ಟ್ರಿಕ್ ಮಾದರಿಯಲ್ಲಿ ಬಂದಿರಲಿಲ್ಲ.

ಇದೀಗ ಆಟೋಮೊಬೈಲ್ ಕ್ಷೇತ್ರದ ಪ್ರಸಿದ್ದ ಕಾರು ಬಿಎಂಡಬ್ಲ್ಯೂ ಇಂಡಿಯಾ ಸಂಸ್ಥೆ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನ ಬಿಡುಗಡೆ ಮಾಡಲು ಸಜ್ಜು ಗೊಂಡಿದೆ. ಈ ಬಿಎಂಡಬ್ಲ್ಯು ಐ.ಎಕ್ಸ್ ಎಸ್ಯೂವಿ ಎಲೆಕ್ಟ್ರಿಕ್ ಕಾರು ಇದೇ ಡಿಸೆಂಬರ್ ತಿಂಗಳ 13ರಂದು ಮಾರುಕಟ್ಟೆಗೆ ಲಾಂಚ್ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಭಾರತ ದೇಶದಲ್ಲಿ ಇನ್ನು ಕೇವಲ ಮೂರೇ ತಿಂಗಳಿನಲ್ಲಿ ಬಿಎಂಡಬ್ಲ್ಯೂ ಸಂಸ್ಥೆಯಿಂದ ಮೂರು ಎಲೆಕ್ಟ್ರಿಕ್ ಎಸ್ಯುವಿ ಕಾರ್ ಗಳನ್ನು ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಮೊದಲನೇಯದಾಗಿ ಈ ಐಎಕ್ಸ್ ಎಸ್ಯೂವಿ ಕಾರು. ಮುಂದಿನ ವರ್ಷ 2022ರಲ್ಲಿ ಮಾರ್ಚ್ ತಿಂಗಳ ಅಂತ್ಯದ ಒಳಗೆ ಬಿಎಂಡಬ್ಲ್ಯೂ ಎಲೆಕ್ಟ್ರಿಕ್ ಮಿನಿ ಕೂಪರ್ ಲಾಂಚ್ ಮಾಡಲಿದ್ದೇವೆ.

ಜೊತೆಗೆ 2022ರ ಜೂನ್ ತಿಂಗಳ ಅಂತ್ಯದ ವೇಳೆಗೆ ಬಿಎಂಡಬ್ಲ್ಯೂ ಐಫೋರ್ ಲಕ್ಸುರಿ ಎಲೆಕ್ಟ್ರಿಕ್ ಸೆಡಾನ್ ಎಂಬ ವಿಭಿನ್ನ ಕಾರನ್ನು ಕೂಡ ಭಾರತದಲ್ಲಿ ಶೀಘ್ರವಾಗಿ ಲಾಂಚ್ ಮಾಡಲಿದ್ದೇವೆ ಎಂದು ಸಂಸ್ಥೆಯು ತಿಳಿಸಿದೆ. ಈಗಾಗಲೇ ಭಾರತದಲ್ಲಿ ಬಿಎಂಡಬ್ಲ್ಯೂ ಸಂಸ್ಥೆಯ ಕಾರುಗಳ ಡೀಲರ್ ಗಳನನ್ನು ಸಭೆ ಕರೆದು ಮಾತಾಡಿ ಬಿಎಂಡಬ್ಲ್ಯೂ ಸಂಸ್ಥೆಯ ಎಲೆಕ್ಟ್ರಿಕ್ ಕಾರಿನ ಮಾರುಕಟ್ಟೆ ಹೇಗೆ ಮಾಡಬೇಕು ಎಂಬುದನ್ನ ಚರ್ಚಿಸಲಾಗಿದೆಯಂತೆ. ಇನ್ನು ಇದೇ ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲು ಸಿದ್ದವಾಗಿರುವ ಬಿಎಂಡಬ್ಲ್ಯೂ ಎಲೆಕ್ಟ್ರಿಕ್ ಐಎಕ್ಸ್ ಎಸ್ಯೂವಿಯಲ್ಲಿ ಇರುವಂತಹ ಫೀಚರ್ ಗಳನ್ನು ತಿಳಿಯುವುದಾದರೆ ಇದರಲ್ಲಿ ಎಲೆಕ್ಟ್ರಿಕ್ ಪವರ್ ಟ್ರೇನ್ ಯಿದ್ದು, ಆಕ್ಸೆಲ್ ಮೇಲ್ಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಇರಲಿದೆ.

ಇದು ಆರ್ ವೀಲ್ ಡ್ರೈವ್ ಕಾರ್ಯಾಚರಣೆಗೆ ಸಹಾಯಕವಾಗಲಿದೆ. 76.6 ಕೆಡಬ್ಲ್ಯೂ ಎಚ್ ಬ್ಯಾಟರಿ ಒಳಗೊಂಡಿದ್ದು 322 ಬಿಎಚ್ಪಿ, 630 ಎನ್ಎಂ ನಷ್ಟು ಟಾರ್ಕ್ ಉತ್ಪಾದನೆ ಮಾಡಲಿದೆಯಂತೆ. ಈ ಬಿಎಂಡಬ್ಲ್ಯೂ ಎಲೆಕ್ಟ್ರಿಕ್ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಟ 425 ಕಿಮೀ ನಷ್ಟು ಕ್ರಮಿಸಬಹುದಾಗಿದೆಯಂತೆ. 2.3 ಕಿವ್ಯಾ ಗುಣಮಟ್ಟದ ಚಾರ್ಜಿಂಗ್ ಕೇಬಲ್, 7.4.ಕಿವ್ಯಾ 1ಫೇಸ್ ವಾಲ್ ಬಾಕ್ಸ್ ಚಾರ್ಜರ್ ಜೊತೆಗೆ 11 ಕಿವ್ಯಾ 3ಫೇಸ್ ವಾಲ್ ಬಾಕ್ಸ್ ಹೀಗೆ ಮೂರು ರೀತಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಆಯಾ ಬ್ಯಾಟರಿಗಳ ಸಾಮರ್ಥ್ಯದ ಆಧಾರದ ಮೇಲೆ ಒಂದು ಸುತ್ತಿನ ಚಾರ್ಜಿಂಗ್ ಸಮಯವನ್ನು ನಿರ್ಧರಿಸಬಹುದಾಗಿರುತ್ತದೆ. ಒಂದು ಸುತ್ತಿನ ಚಾರ್ಜಿಂಗ್ ಸಮಯ 25-36 ಗಂಟೆಗಳ ತನಕ ಮಾಡಿದರೆ ಗರಿಷ್ಟ 425 ಕಿಮೀ ನಷ್ಟು ದೂರ ಕ್ರಮಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

%d bloggers like this: