ಮೊದಲ ಟೆಸ್ಟ್ ಪಂದ್ಯದಲ್ಲೇ ದಾಖಲೆ ಪುಟ ಸೇರಿದ ಶ್ರೇಯಸ್ ಐಯ್ಯರ್

ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ಭಾರತ ತಂಡದ ಶ್ರೇಯಸ್ ಅಯ್ಯರ್, ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯುಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ 105 ರನ್ ಗಳನ್ನು ಕಲೆ ಹಾಕುವ ಮೂಲಕ ಭಾರತಕ್ಕೆ ಬಲ ತುಂಬಿದ್ದಾರೆ. ಟೆಸ್ಟ್ ಪಂದ್ಯದ ಮೊದಲ ದಿನದಂದು ಕೈಲ್ ಜೀಮಿಸನ್ ಬೌಲಿಂಗ್ ದಾಳಿಯಿಂದ ಕಂಗೆಟ್ಟಿದ್ದ ನಾಯಕ ಅಜಿಂಕ್ಯ ರಹಾನೆ ತಂಡಕ್ಕೆ ಬೆಂಬಲವಾಗಿ ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಅವರು ನಿಂತುಕೊಂಡಿದ್ದರು. ಇನ್ನು ಮೊದಲ ದಿನದಲ್ಲಿ ಶ್ರೇಯಸ್ ಅಯ್ಯರ್ ಅವರು 75 ರನ್ ಗಳನ್ನು ಬಾರಿಸಿದ್ದ ಶ್ರೇಯಸ್ ಎರಡನೇ ದಿನದ ಆಟದಲ್ಲಿ ತಮ್ಮ ಬ್ಯಾಟಿಂಗ್ ವೈಖರಿಯನ್ನು ಮುಂದುವರಿಸಿ 157 ಎಸೆತಗಳಲ್ಲಿ 105 ರನ್ ಗಳನ್ನು ಗಳಿಸುವ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ.

ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ 16 ನೇ ಆಟಗಾರ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. 105 ರನ್ ಗಳಲ್ಲಿ ಶ್ರೇಯಸ್ ಅಯ್ಯರ್ ಅವರು ಹನ್ನೆರಡು ಬೌಂಡರಿ ಮತ್ತು ಎರಡು ಸಿಕ್ಸ್ ಗಳನ್ನು ಬಾರಿಸಿದ್ದಾರೆ. ಈ ಹಿಂದೆ ಕರ್ನಾಟಕದ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರು ಕೂಡ ಇದೇ ಕಾನ್ಪುರ ಮೈದಾನದಲ್ಲಿ 1969. ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಮಾಡಿದ್ದರು. ಇನ್ನು ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಅವರು ಮತ್ತೊಂದು ದಾಖಲೆ ಅಂದರೆ ತನ್ನ ಮೊದ ಟೆಸ್ಟ್ ಪಂದ್ಯದಲ್ಲಿ ನ್ಯುಜಿಲೆಂಡ್ ತಂಡದ ವಿರುದ್ದ ಶತಕ ಬಾರಿಸಿದ ಭಾರತದ ಮೂರನೇ ಆಟಗಾರ ಎಂಬ ದಾಖಲೆ ಮಾಡಿದ್ದಾರೆ.

ಶ್ರೇಯಸ್ ಅಯ್ಯರ್ ಅವರು ತಮ್ಮ ಚೊಚ್ಚಲ ಶತಕ ಸಿಡಿಸುವುದರ ಮೂಲಕ ತವರಿನಲ್ಲಿ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಇನ್ನು ಈ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ತಂಡ ದಿನದ ಅಂತ್ಯದವರೆಗೆ 57 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟ ವಿಲ್ಲದೆ 129 ರನ್ ಗಳನ್ನು ಕಲೆ ಹಾಕಿದೆ‌. ಟಾಮ್ ಲೇಥಮ್ ಮತ್ತು ವಿಲ್ ಯಂಗ್ ಜೊತೆಯಾಟದಲ್ಲಿ ಈ 129 ರನ್ ಬಂದಿದ್ದು ಇವರಿಬ್ಬರ ಜೊತೆಯಾಟ ಮುಂದುವರಿಯಲಿದೆ.

%d bloggers like this: