ಮಾಡೆಲಿಂಗ್ ನತ್ತ ಮುಖ ಮಾಡಿದ ಸಾರಾ ತೆಂಡೂಲ್ಕರ್

ಅಪ್ಪ ಹಾಕಿದ ಆಲದ ಮರ ಅಂತ ಇಂದು ಬಹುತೇಕ ಯುವ ಸಮೂಹ ತಮ್ಮ ತಂದೆ ನಡೆಸುತ್ತಿದ್ದ ಬಿಝಿ಼ನೆಸ್ ಅಥವಾ ಅವರ ಫ್ಯಾಮಿಲಿ ನಡೆಸಿಕೊಂಡು ಬರುತ್ತಿರುವ ಉದ್ಯಮವನ್ನು ಮುನ್ನೆಡೆಸಿಕೊಂಡು ಹೋಗುತ್ತಾರೆ. ಇದರಲ್ಲಿ ಅವರಿಗೆ ಹೊಸ ಅನುಭವ ಏನೂ ದೊರೆಯುವುದಿಲ್ಲ. ಆ ಕ್ಷೇತ್ರಕ್ಕೆ ಅವರ ಕೊಡುಗೆ ಅಷ್ಟಕಷ್ಟೆ ಇರುತ್ತದೆ, ಆದರೆ ಇಲ್ಲಿ ಇಲ್ಲೊಬ್ಬರು ತನ್ನ ತಂದೆ ಭಾರತ ಕ್ರಿಕೆಟ್ ತಂಡದ ಖ್ಯಾತ ಅಟಗಾರ. ತನ್ನ ತಾಯಿ ವೈದ್ಯೆ ಆಗಿದ್ದರು ಕೂಡ ತಾನು ಮಾತ್ರ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಹೌದು ಕ್ರಿಕೆಟ್ ದೇವರು ಸಚಿನ್ ತೆಂಗ
ಡೂಲ್ಕರ್ ಮತ್ತು ಡಾ.ಅಂಜಲಿ ದಂಪತಿಗಳಿಗೆ ಅರ್ಜುನ್ ಮತ್ತು ಸಾರಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಮಗ ಅರ್ಜುನ್ ತಂದೆಯಂತೆ ಕ್ರಿಕೆಟ್ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ಸಾರಾ ತೆಂಡೂಲ್ಕರ್ ತನ್ನ ತಾಯಿ ಅಂಜಲಿ ಅವರಂತೆ ವೈದ್ಯೆರಾಗುತ್ತಾರೆ ಎಂದು ತಿಳಿದಿದ್ದರು. ಏಕೆಂದರೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಅವರು ಲಂಡನ್ನಿನ ವಿಶ್ವ ವಿಧ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ಆದರೆ ಸಾರಾ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಇಚ್ಚೆ ಇಲ್ಲದಂತೆ ಕಾಣಿಸುತ್ತಿದೆ. ಅದಕ್ಕೆ ಪೂರಕವಾಗಿ ಸಾರಾ ಅವರು ಉಡುಪುವೊಂದಕ್ಕೆ ರೂಪದರ್ಶಿಯಾಗಿ ಪೋಸ್ ನೀಡಿದ್ದಾರೆ. ಹೌದು ಸಾರಾ ತೆಂಡೂಲ್ಕರ್ ಅವರು ಸೆಲ್ಫ್ -ಪೋಟ್ರೇರ್ಟ್ ಎಂಬ ಇಂಟರ್ನ್ಯಾಶನಲ್ ಬ್ರ್ಯಾಂಡ್ ಬಟ್ಟೆಗೆ ಮಾಡೆಲ್ ಆಗಿದ್ದಾರೆ.

ಈ ಸೆಲ್ಫ್ ಪೋಟ್ರೇರ್ಟ್ ಬ್ರ್ಯಾಂಡ್ ಬಟ್ಟೆಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಜನಪ್ರಿಯ ವೇದಿಕೆ ಆಗಿರುವ ಅಜಿಯೋ ಲೂಕ್ಸ್ ನಲ್ಲಿ ಮಾತ್ರ ದೊರೆಯುತ್ತವೆ. ಸಾರಾ ತೆಂಡೂಲ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೋಬ್ಬರಿ 1.6ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೇಗೆ ತಾವು ಸೆಲ್ಫ್ ಪೋಟ್ರೇರ್ಟ್ ಬ್ರ್ಯಾಂಡ್ ಉಡುಗೆ ತೊಟ್ಟು ಮಿಂಚಿರುವ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಾರಾ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

%d bloggers like this: