ಮೋಜು ಮಸ್ತಿ ಮಾಡುವ ನಟರ ನಡುವೆ ಈ ಕನ್ನಡ ನಟ ಹೊಸ ವರ್ಷವನ್ನು ಕಳೆದದ್ದು ದೇವಸ್ಥಾನದಲ್ಲಿ

ಕನ್ನಡ ಚಿತ್ರರಂಗದ ನಟರಲ್ಲಿ ಯಾವುದೇ ಪಾತ್ರ ಕೊಟ್ಟರು ಅದನ್ನು ಲೀಲಾಜಾಲ ನಟಿಸಬಲ್ಲ ಬೆರಳಣಿಕೆ ನಟರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು, ನಟ ಜಗ್ಗೇಶ್ ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಒಲವು ಹೊಂದಿದವರಾಗಿದ್ದು ಗುರು ರಾಘವೇಂದ್ರಸ್ವಾಮಿ ಅವರ ಪರಮಭಕ್ತರು. ರಾಯರ ಅಪ್ಪಣೆಯಿಲ್ಲದೆ ಯಾವುದೇ ಕಾರ್ಯ, ನಿರ್ಧಾರಗಳನ್ನು ತೆಗೆದುಕೊಳ್ಳದ ಜಗ್ಗೇಶ್ ಈ 2021 ಹೊಸ ವರ್ಷವನ್ನು ಮಂತ್ರಾಲಯದ ರಾಯರ ಮಠದಲ್ಲಿ ದಿನಪೂರ್ತಿ ಕಳೆದಿದ್ದಾರೆ. ನಟ ಜಗ್ಗೇಶ್ ಹೊಸ ವರ್ಷದ ಆಚರಣೆಯ ರೀತಿ ರಿವಾಜುಗಳಿಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಹೊಸ ವರ್ಷ ಅಂದಾಕ್ಷಣ ಇಂದಿನ ಯುವಪೀಳಿಗೆ ನೈಟ್ ರೌಂಡ್ಸ್, ಪಬ್ಬು ಬಾರು ಎಂದು ತಿರುಗಾಡುವ ಪರಿಪಾಠ ಬೆಳೆಸಾಕೊಂಡಿದ್ದಾರೆ.

ಪರದೇಶಿಯ ಅರ್ಥವಿಲ್ಲದ ಸಂಪ್ರದಾಯಗಳನ್ನ ಆಚರಿಸುವ ಯುವ ಪೀಳಿಗೆ ಭಾರತೀಯ ಸಂಪ್ರದಾಯದ ಹಬ್ಬ ಹರಿದಿನಗಳ ಆಚರಣೆ ಅದರ ಮಹತ್ವ ಅರಿಯುವುದರಲ್ಲಿ ಎಡವಿದ್ದಾರೆ಼. ಸಾಮಾನ್ಯವಾಗಿ ಜಗ್ಗೇಶ್ ತಮ್ಮ ಹುಟ್ಟು ಹಬ್ಬ ಮತ್ತು ಹೊಸ ವರ್ಷದಂದು ಪ್ರತಿ ವರ್ಷ ರಾಯರ ಸಾನಿಧ್ಯಕ್ಕೆ ಭೇಟಿಕೊಟ್ಟು ರಾಯರ ದರ್ಶನ ಪಡೆದು ಧ್ಯಾನ ಮಾಡುತ್ತಾರೆ. ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ, ತಾವು ಮಂತ್ರಾಲಯಕ್ಕೆ ಭೇಟಿಕೊಟ್ಟ ಖುಷಿಯ ಕ್ಷಣಗಳ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿ ಗುರುಭ್ಯೋನಮಃ ಶುಭಮಸ್ತು ಎಂದು ಬರೆದುಕೊಂಡಿದ್ದರು.

ಈ ಫೋಟೋಗೆ ಅಭಿಮಾನಿಯೊಬ್ಬ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದ ಹೊಸ ವರ್ಷದ ಆಸಕ್ತಿ ನಮ್ಮ ಯುಗಾದಿ ಹಬ್ಬದ ಆಚರಣೆಯಲ್ಲಿ ಇರುವುದಿಲ್ಲ ಎಂದು ಕಮೆಂಟ್ ಮಾಡಿದ್ದ ಇದಕ್ಕೆ ಜಗ್ಗೇಶ್ ಪತಂಗ ಬೆಂಕಿಯ ಬಗ್ಗೆ ಅರಿವಿಲ್ಲದೆ ಅದನ್ನು ಪ್ರೀತಿಸಿ ಚುಂಬಿಸಲು ಹೋಗಿ ಅಂತ್ಯವಾಗುತ್ತದೆ, ಆ ಪತಂಗವನ್ನು ಬೆಂಕಿಯ ಬಳಿ ಹೋಗದಂತೆ ತಡೆದರೆ ಅದಕ್ಕೆ ಕೇಳುವ ಅರಿವಿದೆಯೇ ಆಧುನಿಕ ಜಗತ್ತಿನ ಆಕರ್ಷಣೆ ಸೆಳೆತದ ಅನುಭವ ಬದುಕಿನ ಭಯಭಕ್ತಿ ಗುರು ಹಿರಿಯರ ಬಂಗಾರದಂತಹ ಮಾತುಗಳು ಹೆಚ್ಚು ಹೇಳಲು ಹೊರಟರೆ ನಮ್ಮ ದುಡ್ಡು ನಮ್ಮಿಷ್ಟ ಎನ್ನುವರು ಎಂದು ವಿಸ್ತಾರವಾಗಿ ಮನನೊಂದು ಪ್ರತಿಕ್ರಿಯೆ ನೀಡಿದ್ದಾರೆ.

%d bloggers like this: