ಮನಿ ಪ್ಲಾಂಟ್ ಅನ್ನು ನಿರ್ಲಕ್ಷಿಸಬೇಡಿ, ಇದರಿಂದ ಮನೆಗೆ ಆಗುವ ಲಾಭಗಳು ಅಷ್ಟಿಷ್ಟಲ್ಲ

ಮನುಷ್ಯನ ಜೀವನದಲ್ಲಿ ಪ್ರಮುಖವಾಗಿ ಪಾತ್ರ ವಹಿಸುವುದು ಹಣ. ಈ ಹಣ ವೆಂದರೆ ಹೆಣವು ಸಹ ಬಾಯಿ ಬಿಡುತ್ತದೆ ಅನ್ನುವ ಮಾತಿದೆ ಅಷ್ಟರ ಮಟ್ಟಿಗೆ ಹಣಕ್ಕೆ
ಮಹತ್ವವಿದೆ. ಕೆಲವರು ಹಗಲಿರುಳು ಸದಾ ಶ್ರಮಪಟ್ಟು ದುಡಿದರು ಕೂಡ ಕೈಯಲ್ಲಿ ಹಣ ಸ್ಥಿರವಾಗಿ ನಿಲ್ಲದೇ ನೀರಿನಂತೆ ಹರಿದು ಹೋಗುತ್ತದೆ, ಮಂಜಿನಂತೆ ಕರಗುತ್ತವೆ. ಸಂಸ್ಕೃತದಲ್ಲಿರುವಂತೆ ದನದ ಮೂಲ ಇದಂ ಜಗಂ ಎಂಬಂತೆ ಅಂದರೆ ಹಣವೊಂದಿದ್ದರೆ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂದರ್ಥ. ಲಕ್ಷ್ಮಿಯು ಒಂದೇ ಕಡೆ ಸ್ಥಿರವಾಗಿ ನಿಲ್ಲುವುದಿಲ್ಲ ಅವಳು ಚಂಚಲ ಮನಸ್ಸಿನವಳುಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ನಿಮ್ಮ ಮನೆಯಲ್ಲಿ ಸುಖ ಸಂಪತ್ತು ಇರಬೇಕಾದರೆ ನೀವು ದುಡಿದ ಹಣ ನಿಮ್ಮ ಕೈಯಲ್ಲಿ ಉಳಿತಾಯ ವಾಗಬೇಕಾದರೆ ಈ ಮನೀ ಪ್ಲಾಂಟನ್ನು ಬೆಳೆಸುವುದು ಉತ್ತಮವಾಗಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಈ ಮನೀ ಪ್ಲಾಂಟನ್ನು ಮನೆಯಲ್ಲಿ ಬೆಳಸುವುದರಿಂದ ನಿಮ್ಮ ಮನೆಯಲ್ಲಿ ಸಕಲ ಸಂಪತ್ತು ತುಂಬಿ ನಿಮ್ಮ ಮನೆಯ ಸಂಪತ್ತು ಸಮೃದ್ದಿಯಾಗುತ್ತದೆ. ಹಾಗಾದರೆ ಮನಿ ಪ್ಲಾಂಟನ್ನು ಹೇಗೆ ಬೆಳೆಸಬೇಕು ಅದರ ಹಾರೈಕೆ ಹೇಗೆ, ಅದನ್ನು ಇಡುವ ಸ್ಥಳ ಯಾವುದು ಎಂಬುದರ ಬಗ್ಗೆ ಅರಿವು ಇದ್ದರೆ ಇನ್ನೂ ಉತ್ತಮವಾಗಿರುತ್ತದೆ.

ಮನಿ ಪ್ಲಾಂಟನ್ನು ತಂದರೆ ಸಾಲದು ಅದನ್ನು ಆರೈಕೆ ಮಾಡಬೇಕು. ಮನೀ ಪ್ಲಾಂಟ್ ಸಸಿಗಳು ಸಮೃದ್ಧಿಯಾಗಿ ಬೆಳೆದಷ್ಟು ನಿಮ್ಮ ಮನೆಯ ಸಕಲ ಸಂಪತ್ತು ಸಮೃದ್ಧಿಯಾಗುತ್ತದೆ. ಪ್ಲಾಂಟನ್ನು ದಕ್ಷಿಣದಲ್ಲಿ ಉತ್ತರಾಭಿಮುಖವಾಗಿ ಇಡಬೇಕು. ಪೂರ್ವದಲ್ಲಿಯೂ ಸಹ ಇಟ್ಟರೆ ಉತ್ತಮ ಆದರೆ ಉತ್ತರ ಈಶಾನ್ಯ ಪೂರ್ವ ಭಾಗದಲ್ಲಿ ಮನೀಪ್ಲಾಂಟನ್ನು ಬೆಳೆಸಬಾರದು. ಮನೀಪ್ಲಾಂಟ್ ಸಸಿಗಳನ್ನು ಗಾಜಿನ ಬಾಟಿಲುಗಳಲ್ಲಿ, ಪ್ಲಾಸ್ಟಿಕ್ ಬಾಟಿಲುಗಳಲ್ಲಿ ಅಥವಾ ಮಣ್ಣಿನ ಕುಡಿಕೆಯಲ್ಲಿ ಬೆಳಸುವುದು ಉತ್ತಮ. ಈ ಸಸಿಗಳು ಮನೆಯಲ್ಲಿದ್ದರೆ ಋಣಾತ್ಮಕತೆಯು ದೂರವಾಗಿ ಧನಾತ್ಮಕತೆಯನ್ನು ನಿಮ್ಮ ಮನೆಯಲ್ಲಿ ತುಂಬುತ್ತದೆ.

ಮನೀಪ್ಲಾಂಟ್ ಆರೈಕೆ ವಿಚಾರವಾಗಿ ತಿಳಿಯುವುದಾದರೆ ಈ ಸಸಿಗಳಿಗೆ ಆಗಾಗ ನೀರನ್ನು ಹಾಕುತ್ತಿರಬೇಕು.ಅದರಲ್ಲಿ ಒಣಗಿದ ಎಲೆ ಬರದಂತೆ ನೋಡಿಕೊಳ್ಳಬೇಕು ಬಂದರೂ ಅದನ್ನು ತೆಗೆದು ಈ ಸಸಿಗಳು ಒಣಗದಂತೆ ನೋಡಿಕೊಳ್ಳುವುದು ಉತ್ತಮ. ಇದನ್ನು ಮನೆಯಲ್ಲಿ ಬೆಳೆಸಿದರೆ ಪುಣ್ಯ ಪುರುಷಾರ್ಥ ಪ್ರಾಪ್ತವಾಗುತ್ತದೆ. ಶುಭಮಂಗಳ ಫಲಿತಾಂಶ ನಿಮ್ಮದಾಗುತ್ತದೆ.

ಇನ್ನು ಈ ಮನಿ ಪ್ಲಾಂಟ್ ಬಳ್ಳಿಯು ಕೆಳಗಡೆಯಿಂದ ಮೇಲಕ್ಕೆ ಹರಡಬೇಕೆ ಹೊರತು ಮೇಲ್ಭಾಗದಿಂದ ಕೆಳಕ್ಕೆ ಇಳಿಯಬಾರದು. ಇದು ನಿಮ್ಮ ಆರ್ಥಿಕ ಮುಗ್ಗಟ್ಟನ್ನು ನಿರ್ಧರಿಸುವುದಾಗಿರುತ್ತದೆ. ಆದ್ದರಿಂದ ಮನೀಪ್ಲಾಂಟ್ ಸಸಿಯನ್ನು ಬೆಳೆಸುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆ ಆಗಿ ನಿಮ್ಮ ಮನೆಯಲ್ಲಿ ಸಕಲ ಸಂಪತ್ತು ಸಮೃದ್ದಿಯಾಗುತ್ತದೆ.

%d bloggers like this: