ಮೊನ್ನೆ 4 ಕೋಟಿ ಬೆಲೆಯ ಐಷಾರಾಮಿ ಕಾರು, ಇಂದು 12 ಲಕ್ಷ ಬೆಲೆಯ ಸ್ಪೋರ್ಟ್ಸ್ ಬೈಕ್ ಖರೀದಿಸಿದ ಸ್ಟಾರ್ ನಟ

ಈ ಬೈಕ್ ಮತ್ತು ಕಾರ್ ಕ್ರೇಜ಼್ ಭಾರತೀಯ ಸಿನಿಮಾ ರಂಗದ ಅನೇಕ ನಟರಿಗೆ ಸಕತ್ತಾಗಿಯೇ ಇದೆ. ಸಿನಿಮಾದಲ್ಲಿ ತಮ್ಮ ನೆಚ್ಚಿನ ಹೀರೋಗಳು ಸೂಪರ್ ಬೈಕ್ ಮೇಲೆ ಸಾಹಸಮಯ ಎಂಬಂತೆ ರೋಮಾಂಚನವಾಗಿ ಬೈಕ್ ಓಡಿಸುತ್ತಾ ಬರುತ್ತಿದ್ದರೆ ಚಿತ್ರ ಮಂದಿರಗಳಲ್ಲಿ ಅವರ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಜೈಕಾರ ಹರ್ಷೋದ್ಗಾರ ಮುಗಿಲು ಮುಟ್ಟಿರುತ್ತದೆ. ಕೆಲವು ಸಿನಿಮಾ ನಟರಿಗೆ ಬೈಕ್ ರೇಸ್ ಎಂಬುದು ಕೇವಲ ಚಿತ್ರದ ಸನ್ನಿವೇಶಗಳಿಗೆ ಮಾತ್ರ ಸೀಮಿತ ಆಗಿರುವುದಿಲ್ಲ. ನಿಜ ಜೀವನದಲ್ಲಿ ಕೂಡ ಅನೇಕ ನಟರಿಗೆ ಸೂಪರ್ ಬೈಕ್ ಅಂದರೆ ತುಂಬಾ ಅಚ್ಚು ಮೆಚ್ಚಾಗಿರುತ್ತವೆ. ತಮಿಳಿನ ಸ್ಟಾರ್ ನಟ ಅಜಿತ್ ಅವರಿಗೆ ಕಾರ್ ಗಳಿಗಿಂತ ಬೈಕ್ ಕ್ರೇಜ಼್ ಹೆಚ್ಚು ಇಷ್ಟ. ಹಾಗಾಗಿಯೇ ಅವರು ತಮ್ಮ ಇಷ್ಟದ ಬೈಕ್ ಏರಿ ಹೆಲ್ಮೆಟ್ ಧರಿಸಿಕೊಂಡು ಯಾರಿಗೂ ತಿಳಿಯದಂತೆ ಸಿಕ್ಕ ಸಿಕ್ಕ ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ರೈಡ್ ಮಾಡುತ್ತಾರೆ.

ಇದು ಅವರಿಗೆ ಒಂದು ರೀತಿಯ ವಿಶಿಷ್ಟ ಸಂತೋಷ ಅಂತೆ. ಇದಕ್ಕೆ ನಮ್ಮ ಕನ್ನಡ ನಟರಾದ ಚಾಲೇಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಕೂಡ ಹೊರತಾಗಿಲ್ಲ. ದರ್ಶನ್ ಆಗಾಗ ತಮ್ಮ ಸ್ನೇಹಿತರ ಜೊತೆ ಜಾಲಿ ಲಾಂಗ್ ಟ್ರಿಪ್ ಗಾಗಿ ಬೈಕ್ ರೈಡ್ ಇಷ್ಟ ಪಡುತ್ತಾರೆ. ಅದರಂತೆ ಇದೀಗ ಬಾಲಿವುಡ್ ಸ್ಟಾರ್ ನಟ ಶಾಹೀದ್ ಕಪೂರ್ ಅವರು ಐಷಾರಾಮಿ ದುಬಾರಿ ಬೆಲೆಯ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಖರೀದಿ ಮಾಡಿದ್ದಾರೆ. ಇತ್ತೀಚೆಗೆ ತಾನೇ ತಮ್ಮ 41 ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಐಷಾರಾಮಿ ಕಾರ್ ಖರೀದಿಸಿ ಸುದ್ದಿ ಆಗಿದ್ದ ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಇದೀಗ ದುಬಾರಿ ಬೆಲೆಯ ಬೈಕ್ ವೊಂದನ್ನುಖರೀದಿ ಮಾಡಿ ಮತ್ತೇ ಸುದ್ದಿ ಆಗಿದ್ದಾರೆ.

ಈ ಡುಕಾಟಿ ಸ್ಕ್ರಾಂಬರ್ 1100 ಸಿಸಿ ಬಿವಿನ್ ಎಂಜಿನ್ ಆಯ್ಕೆ ಹೊಂದಿದ್ದು, 7,500 ಆರ್.ಪಿ.ಎಂ ನಲ್ಲಿ ಗರಿಷ್ಠ 83 ಬಿಎಸ್.ಪಿ. ಮತ್ತು 4750 ಆರ್ಪಿಎಂ ನಲ್ಲಿ 88 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆಯಂತೆ. ಈ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಜಸ್ಟ್ 3.7ಸೆಕೆಂಡುಗಳಲ್ಲಿ ನೂರು ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆಯಂತೆ. ಇನ್ನು ಈ ಬೈಕ್ 1100 15 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿದೆ. ನಟ ಶಾಹಿದ್ ಕಪೂರ್ ಖರೀದಿ ಮಾಡಿರುವ ಈ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಭಾರತೀಯ ಮಾರುಕಟ್ಟೆಯ ಶೋರೂಮಿನಲ್ಲಿ ಬರೋಬ್ಬರಿ 11ಲಕ್ಷದಿಂದ 13.7 ಲಕ್ಷ ರೂಗಳ ವರೆಗೆ ಲಭ್ಯವಾಗಲಿದೆಯಂತೆ.

ಇನ್ನು ನಟ ಶಾಹೀದ್ ಕಪೂರ್ ಅವರು ತಮ್ಮ 41ನೇ ವರ್ಷದ ಜನ್ಮದಿನ ಪ್ರಯುಕ್ತ ಕಿಂಗ್ ಆಫ್ ಲಕ್ಸುರಿ ಕಾರ್ ಅಂತಾನೇ ಹೆಸರಾಗಿರುವ ಮರ್ಸಿಡಿಸ್ ಮೇಬ್ಯಾಕ್ ಎಸ್580 ಎಂಬ ದುಬಾರಿ ಬೆಲೆಯ ಕಾರು ಖರೀದಿ ಮಾಡಿ ಬಿಟೌನ್ ನಲ್ಲಿ ಸಖತ್ ಸುದ್ದಿಯಲ್ಲಿದ್ದರು. ಇದೀಗ ಡುಕಾಟಿ ಸ್ಕ್ರಾಂಬ್ಲರ್ 1100ಬೈಕ್ ಖರೀದಿ ಮಾಡುವ ಮೂಲಕ ಮತ್ತೆಗಮನ ಸೆಳೆದಿದ್ದಾರೆ. ವಿಶೇಷ ಅಂದರೆ ನಟ ಶಾಹಿದ್ ಕಪೂರ್ ಅವರು ಹೆಲ್ಮೆಟ್ ಧರಿಸಿಕೊಂಡು ಈ ಬೈಕ್ ನಲ್ಲಿ ಮುಂಬೈನ ಪ್ರತಿಷ್ಟಿತ ರಸ್ತೆಗಳಲ್ಲಿ ಸುತ್ತಾಡಿದ್ದಾರಂತೆ. ಆದರೆ ಇವರು ಬೈಕ್ ನಲ್ಲಿ ಸುತ್ತಾಡುತ್ತಿರುವುದು ಕೆಲವರಿಗೆ ತಿಳಿದರೂ ಬಹುತೇಕರಿಗೆ ಇವರು ಯಾರೆಂಬುದು ಗೊತ್ತಾಗಲಿಲ್ಲವಂತೆ.

%d bloggers like this: