ಮೂಗಿನ ಮೇಲೆ ಇರುವ ಕಪ್ಪು ಕಲೆಗೆ ಬೆಳ್ಳುಳ್ಳಿ ಇಂದ ಹೀಗೆ ಮಾಡಿ

ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಕೆಲವರಿಗೆ ಸಮಸ್ಯೆಗಳು ಚಿಕ್ಕದಾಗಿರಬಹುದು ಮತ್ತೆ ಕೆಲವರಿಗೆ ದೊಡ್ಡ ಸಮಸ್ಯೆಗಳು ಇರಬಹುದು. ಆದರೆ ಸಮಸ್ಯೆಗಳಿರುವುದು ಸ್ಪಷ್ಟ, ಆದರೆ ನಮ್ಮ ಬಾಹ್ಯ ಸೌಂದರ್ಯದಲ್ಲಿ ಸಮಸ್ಯೆಗಳಿದ್ದರೆ ಅವು ಮನಸ್ಸಿಗೆ ತುಂಬಾ ಕಿರಿಕಿರಿಯನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಯಾರಿಗೆ ಆದರೂ ಸರಿ ತಾವು ಹೊರಗೆ ಚೆನ್ನಾಗಿ ಕಾಣಬೇಕು ಎಂಬ ಬಯಕೆ ಸ್ವಲ್ಪ ಮಟ್ಟಿಗಾದರೂ ಇದ್ದೇ ಇರುತ್ತದೆ. ಅದರಲ್ಲೂ ಹುಡುಗಿಯರಲ್ಲಿ ಈ ಮನೋಭಾವನೆ ದಟ್ಟವಾಗಿರುತ್ತದೆ. ಆದರೆ ನಾವು ಎಷ್ಟೇ ಮುಖಕ್ಕಾಗಿ ಕಾಳಜಿಯನ್ನು ವಹಿಸಿದರು ಕೂಡ ಒಂದೊಂದು ವಿಶೇಷ ಸಮಸ್ಯೆಗಳು ಎದುರಾಗುತ್ತವೆ.

ಅಂತಹ ಸಮಸ್ಯೆಗಳಲ್ಲಿ ಮುಖ್ಯವಾದದ್ದು ಮೂಗಿನ ಮೇಲೆ ಆಗುವ ಬ್ಲಾಕೆಡ್ಸ್ ಮತ್ತು ರಂದ್ರಗಳು. ಇವು ಯಾವ ಕಾರಣಕ್ಕಾಗಿ ಆಗುತ್ತದೆ ಎಂಬುದು ಈಗ ಬೇಡವಾದ ವಿಷಯ. ಹೌದು ಬ್ಲ್ಯಾಕ್ ಹೆಡ್ಸ್ ಮತ್ತು ರಂದ್ರಗಳನ್ನು ತೆಗೆದುಹಾಕಲು ನಾವು ಹೇಳುವ ಒಂದು ಸಿಂಪಲ್ ವಿಧಾನವನ್ನು ಪಾಲಿಸಿ ಮತ್ತು ಶಾಶ್ವತವಾಗಿ ಅವುಗಳಿಂದ ಮುಕ್ತಿ ಪಡೆಯಿರಿ. ಈ ಬ್ಲಾಕ್ ಹೆಡ್ಸ್ ಗಳಿಗೆ ಕೆಲವರು ಹಲ್ಲುಜ್ಜುವ ಪೇಸ್ಟ್ ಅನ್ನು ಬಳಸಲು ಸಲಹೆ ನೀಡುತ್ತಾರೆ, ಆದರೆ ಅದ್ಯಾವುದರ ಅವಶ್ಯಕತೆ ಇಲ್ಲ. ಎಲ್ಲರ ಮನೆಯಲ್ಲಿ ಸಿಗುವ ಸಾಮಗ್ರಿಗಳಿಂದ ಸುಲಭವಾಗಿ ಮನೆಯಲ್ಲಿಯೇ ನಾವು ಹೇಳುವ ಪೇಸ್ಟನ್ನು ತಯಾರಿಸಿ ಮೂಗಿಗೆ ಹಚ್ಚಿದರೆ ಸಾಕು.

ಬನ್ನಿ ಹಾಗಿದ್ದರೆ ಪೇಸ್ಟನ್ನು ತಯಾರಿಸುವ ವಿಧಾನ ತಿಳಿಯಿರಿ. ಸ್ವಲ್ಪ ಬೆಳ್ಳುಳ್ಳಿಗಳನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಸುಲಿದು ಇಟ್ಟುಕೊಳ್ಳಿ. ಅದರ ಜೊತೆಗೆ ಸ್ವಲ್ಪ ಲವಂಗಗಳನ್ನು ಸೇರಿಸಿ ಪುಡಿ ಮಾಡಿರಿ. ಈ ಮಿಶ್ರಣಕ್ಕೆ ಒಂದು ಟಮಾಟೋದ ತಿರುಳನ್ನು ಸೇರಿಸಿ ನಯವಾದ ಪೇಸ್ಟ್ ಅನ್ನು ತಯಾರಿಸಿ. ಈ ತಯಾರಾದ ಪೇಸ್ಟನ್ನು ಬ್ಲಾಕ್ ಹೆಡ್ಸ್ ಮತ್ತು ರಂಧ್ರಗಳಿರುವ ಪ್ರದೇಶಕ್ಕೆ ನಯವಾಗಿ ಹಚ್ಚಿ. 15ರಿಂದ 20 ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಇಷ್ಟೇ ಮಾಡಿ ನೋಡಿ ಸಾಕು, ನಿಮಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತಿದ್ದ ಬ್ಲಾಕ್ ಹೆಡ್ ಮತ್ತು ರಂದ್ರಗಳು ಕ್ರಮೇಣ ಮಾಯವಾಗುತ್ತವೆ ಮತ್ತು ಮತ್ತೆ ನಿಮ್ಮತ್ತ ಸುಳಿಯುವುದಿಲ್ಲ.

%d bloggers like this: