ಮೂರೇ ದಿನದಲ್ಲಿ ಮಾರುಕಟ್ಟೆಗೆ ಬರುತ್ತಿದೆ ಮಾರುತಿ ಸುಜುಕಿ ಅವರ ಬಹುನಿರೀಕ್ಷಿತ ಎಸ್.ಯು.ವಿ ಕಾರು

ಇದೇ ಜುಲೈ 20ಕ್ಕೆ ಆಟೋಮೊಬೈಲ್ ಕ್ಷೇತ್ರದ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರು ಅಂದರೆ ಅದು ಮಾರುತಿ ಸುಜುಕಿ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಪಡೆದುಕೊಂಡಿದ್ದು, ಗ್ರಾಹಕರ ಮನ ಗೆದ್ದಿವೆ. ಈಗಾಗಲೇ ದೇಶಾದ್ಯಂತ ಮಾರುತಿ ಸುಜುಕಿ ಕಂಪನಿ ಕಾರುಗಳು ಜನಪ್ರಿಯವಾಗಿದೆ. ಇದೀಗ ಅದರ ಪಟ್ಟಿಗೆ ಮತ್ತೊಂದು ಕಾರು ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಹೌದು ಇದು ಕಾರು ಪ್ರಿಯರಿಗೆ ಕುತೂಹಲ ಮತ್ತು ಸಂತಸದ ಸುದ್ದಿಯಾಗಿದೆ. ಮಾರುತಿ ಸುಜುಕಿಯು ಪರಿಚಯಿಸುತ್ತಿರುವ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್ಯುವಿ ಕಾರಿನ ಟೀಸರ್ ರಿಲೀಸ್ ಅಗಿದ್ದು, ಈ ಕಾರಿಗೆ ಕಾರು ಪ್ರಿಯರು ಫಿಧಾ ಆಗಿದ್ದಾರೆ. ಹಾಗಾಗಿ ಈಗಾಗಲೇ ಈ ಕಾರಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಮಾರುತಿ ಸುಜುಕಿ ವಿಟಾರಾ ಎಸ್ಯುವಿ ಕಾರು ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಪೋಕ್ಸ್ ವ್ಯಾಗನ್ ಟೈಗನ್ ಮತ್ತು ಸಿ ಸೆಗ್ಮೆಂಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಈ ಮಾರುತಿ ವಿಟಾರಾ ಕಾಂಪ್ಯಾಕ್ಟ್ ಎಸ್ಯುವಿ ಕಾರು ಸ್ಲೋಪಿಂಗ್ ರೂಫ್ ಲೈನ್ ಹೊಂದಿದ್ದು, ಎಲ್ ಇ.ಡಿ ಹೆಡ್ ಲ್ಯಾಂಪ್ ಗಳು ಮತ್ತು ಡಿ ಆರ್ ಎಲ್ ಗಳು, ಫಾಗ್ ಲ್ಯಾಂಪ್ ಹೌಸಿಂಗ್ ರಚನೆಯನ್ನೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್ಯುವಿ ಕಾರು ಆಕರ್ಷಣೀಯವಾಗಿದ್ದು, ಭಾರತೀಯ ಕಾರು ಮಾರುಕಟ್ಟೆಯಲ್ಲಿ ಭಾರಿ ಹೈಪ್ ಹುಟ್ಟಿಸಿದೆ. ಯಾಕಂದ್ರೇ ಈ ಕಾರಿನಲ್ಲಿ ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರುಗಳಿಗಿಂತ ಹೆಚ್ಚಾಗಿ ಹತ್ತು ಹಲವು ಫೀಚರ್ ಗಳನ್ನು ಹೊಂದಿದೆ. ಇದರಲ್ಲಿ ಸಿಕ್ಸರ್ ಅರ್ಕಾಮಿಸ್ ಆಡಿಯೊ ಸಿಸ್ಟಮ್ , 9ಇಂಚಿನ ಟಚ್ ಸ್ಕ್ರಿಪ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಹೆಡ್ ಅಪ್ ಡಿಸ್ ಪ್ಲೇ, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳಿವೆ. ಇದರ ಜೊತೆಗೆ ಆಂಡ್ರಾಯ್ಡ್ ಆಟೋ ಅಂಡ್ ಆಪಲ್ ಕಾರ್ ಪ್ಲೇ ಮತ್ತು ಲೆಥೆರೆಟ್ ಸೀಟ್ ಕೂಡ ಇವೆ. ಅತ್ಯಾಧುನಿಕ ಫೀಚರ್ ಗಳಾಗಿ ಸರೌಂಡ್ ಪಾರ್ಕಿಂಗ್ ವ್ಯೂ ಮಾನಿಟರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್.

ಅಡ್ವಾನ್ಸ್ ಕಂಟ್ರೋಲಿಂಗ್ ಕೆಪಾಸಿಟಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನ ಈ ಮಾರುತಿ ವಿಟಾರಾ ಕಾರು ಹೊಂದಿದೆ. ಇನ್ನು ಈ ಕಾರಿನಲ್ಲಿ ಎರಡು ಮಾದರಿಗಳಿವೆ. ಗ್ರ್ಯಾಂಡ್ ವಿಟಾರಾ ಮತ್ತು ಗ್ರ್ಯಾಂಡ್ ವಿಟಾರಾ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈ ಬ್ರಿಡ್ ಎಂಬುದಾಗಿದೆ. ಇವು 103 ‌ಬಿಎಚ್ಪಿ ಪವರ್ ಮತ್ತು 137 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಈ ಎಂಜಿನ್ ಅನ್ನು ಫೈವ್ ಸ್ಪೀಡ್ ಮ್ಯಾನ್ಯುವಲ್ ಅಂಡ್ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ವಿಶೇಷತೆವುಳ್ಳ ಮಾರುತಿ ಸುಜುಕಿ ವಿಟಾರಾ ಎಸ್ಯುವಿ ಕಾರನ್ನ ಗ್ರಾಹಕರು ಆನ್ಲೈನ್ ಅಥವಾ ಅಧಿಕೃತ ಡೀಲರ್ಶಿಪ್ ಗಳಲ್ಲಿ 11,000 ರೂಗಳನ್ನು ಮುಂಗಡವಾಗಿ ಪಾವತಿಸುವ ಮೂಲಕ ಕಾಯ್ದಿರಿಸಬಹುದಾಗಿದೆ. ಇದರ ಜೊತೆಗೆ ಈ ಕಾರನ್ನು ನೆಕ್ಸಾ ಪ್ರೀಮಿಯಂ ಡೀಲರ್ ಶಿಪ್ ನೆಟ್ ವರ್ಕ್ ಮೂಲಕವೂ ಕೂಡ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

%d bloggers like this: