ಮೂರು ಭಾಷೆಯಲ್ಲಿ ತಯಾರಾಗುತ್ತಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಸಿನಿಮಾದ ಟೀಸರ್ ಲಾಂಚ್, ಚಂದನವನದಲ್ಲಿ ಪೊಲೀಸ್ ಪಾತ್ರಗಳ ಮೂಲಕವೇ ಅಪಾರ ಜನಪ್ರಿಯತೆ ಪಡೆದ ನಟ ಅಂದರೆ ಅದು ಡೈನಾಮಿಕ್ ಸ್ಟಾರ್ ದೇವರಾಜ್. ಹೌದು ದೇವರಾಜ್ ಅವರು 90 ಮತ್ತು ಎರಡು ಸಾವಿರ ದಶಕದಲ್ಲಿ ಭಾರಿ ಬೇಡಿಕೆಯಲ್ಲಿದ್ದ ನಟರು. ಅಂತೆಯೇ ಇಂದಿಗೂ ಕೂಡ ಪೋಷಕ ಪಾತ್ರಗಳಲ್ಲಿ ಅದರಲ್ಲಿಯೂ ಪೊಲೀಸ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸಿನಿಮಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಇವರ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೂ ಕೂಡ ತನ್ನ ತಂದೆಯವರಿಗೆ ಬರುತ್ತಿದ್ದಂತಹ ಪೊಲೀಸ್ ಪಾತ್ರಗಳು ಅರಸಿ ಬರುತ್ತಿವೆ.

ಈ ಹಿಂದೆ ಎರಡು ಚಿತ್ರಗಳಲ್ಲಿ ಪ್ರಜ್ವಲ್ ದೇವರಾಜ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಮಾಫಿಯಾ ಎಂಬ ಚಿತ್ರದಲ್ಲಿ ಸೂಪರ್ ಕಾಪ್ ಆಗಿ ನಟಿಸುತ್ತಿದ್ದಾರೆ. ಈ ಮಾಫಿಯಾ ಚಿತ್ರಕ್ಕೆ ಮಮ್ಮಿ ಸಿನಿಮಾ ಖ್ಯಾತಿಯ ಲೋಹಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಮಾಫಿಯಾ ಸಿನಿಮಾದ ಒಂದಷ್ಟು ಚಿತ್ರೀಕರಣ ನಡೆಯುತ್ತಿದೆ. ಇದರ ನಡುವೆ ಮಾಫಿಯಾ ಚಿತ್ರತಂಡ ಮಾಸ್ ಲುಕ್ ಇರುವ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದೀಗ ಟೀಸರ್ ಕೂಡ ಲಾಂಚ್ ಆಗಿದೆ. ಟೀಸರ್ ಅಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಖಡಕ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.



ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಮಾಫಿಯಾ ಟೀಸರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೂಪ್ ಸೀಳಿನ್ ಅವರ ಬ್ಯಾಗ್ರೌಂಡ್ ಮ್ಯೂಸಿಕ್ ಸಖತ್ ಕ್ಯೂರಿಯಾಸಿಟಿ ಆಗಿದೆ. ಇನ್ನು ವಿಶೇಷ ಅಂದರೆ ಈ ಮಾಫಿಯಾ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರೊಟ್ಟಿಗೆ ಅವರ ತಂದೆ ನಟ ದೇವರಾಜ್ ಅವರು ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಮಾಫಿಯಾ ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆಯಂತೆ. ಹಾಗಾಗಿ ಮಯೇ ಈ ಮಾಫಿಯಾ ಚಿತ್ರದ ಟೀಸರ್ ಅನ್ನು ಕನ್ನಡದಲ್ಲಿ ಆಕ್ಷನ್ ಪ್ರಿನ್ಸ್ ಧೃವಸರ್ಜಾ, ನೀನಾಸಂ ಸತೀಶ್, ರಿಷಭ್ ಶೆಟ್ಟಿ ಲಾಂಚ್ ಮಾಡಿದರೆ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಮಾಫಿಯಾ ಸಿನಿಮಾದ ಟೀಸರ್ ಲಾಂಚ್ ಮಾಡಿ ಪ್ರೋತ್ಸಾಹ ನೀಡಿದ್ದಾರೆ.



ಅದೇ ರೀತಿಯಾಗಿ ತಮಿಳಿನ ಖ್ಯಾತ ನಟ ಸತ್ಯ ರಾಜ್ ಅವರು ಮಾಫಿಯಾ ಸಿನಿಮಾದ ತಮಿಳಿನ ಅವತರಣೆಯ ಟೀಸರ್ ಲಾಂಚ್ ಮಾಡಿದ್ದಾರೆ. ಇನ್ನು ಮಾಫಿಯಾ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ನಟಿ ಅಧಿತಿ ಪ್ರಭುದೇವ ಅವರು ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಒರಟ ಸಿನಿಮಾ ಖ್ಯಾತಿಯ ನಟ ಪ್ರಶಾಂತ್, ಸಾಧು ಕೋಕಿಲ ಮತ್ತು ಇನ್ನೊಂದಷ್ಟು ಕಲಾವಿದರು ನಟಿಸುತ್ತಿದ್ದಾರೆ. ಮಾಫಿಯಾಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ತರುಣ್ ಛಾಯಾಗ್ರಹಣ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾಸ್ತಿ ಡೈಲಾಗ್ ಬರೆಯುತ್ತಿದ್ದಾರೆ.