ನಮ್ಮ ಕನ್ನಡ ಚಿತ್ರೋದ್ಯಮದ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಚಿತ್ರಕಥೆ ಬರಹಗಾರರು ತಮ್ಮ ಅದ್ಭುತ ಕಲ್ಪನಾ ಶಕ್ತಿಯಿಂದ ಉತ್ತಮ ಕಥೆಗಳನ್ನು, ಅವುಗಳನ್ನು ನಿರ್ದೇಶಕರು ವಿಭಿನ್ನ ರೀತಿಯಲ್ಲಿ ತೆರೆಮೇಲೆ ತರುವುದು, ಸಂಗೀತ ನಿರ್ದೇಶಕರು ಹೊಸ ಬಗೆಯ ಹೊಸ ಪ್ರಯತ್ನದಿಂದ ವಿಭಿನ್ನ ಮ್ಯೂಸಿಕ್ ಗಳನ್ನು ಮಾಡುವುದು, ನೃತ್ಯ ನಿರ್ದೇಶಕರು ನಾಯಕ ನಟರುಗಳ ಕೈಯಿಂದ ಹೊಸಬಗೆಯ ಸ್ಟೆಪ್ಸ್ ಗಳನ್ನು ಹಾಕಿಸುವುದು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ನಟ ನಟಿಯರು ತಮ್ಮ ಪ್ರತಿಶತ ನೂರಕ್ಕೆ ನೂರನ್ನು ಚಿತ್ರಕ್ಕೆ ಒಪ್ಪಿಸುವುದು ಹೀಗೆ ಒಂದು ಚಿತ್ರದ ಪ್ರತಿಯೊಂದು ವಿಭಾಗದಲ್ಲಿಯೂ ಕನ್ನಡ ಚಿತ್ರರಂಗದ ಸದಸ್ಯರು ಪ್ರಯತ್ನ ಮೀರಿ ಇಷ್ಟಪಟ್ಟು ಕೆಲಸ ಮಾಡುತಿರುವ ಕಾರಣದಿಂದಲೇ ನಮ್ಮ ಚಿತ್ರರಂಗ ಉಳಿದ ಚಿತ್ರಗಳೊಡನೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಹಾಗೆಯೆ ಯೂಟ್ಯೂಬ್ ಮಾಧ್ಯಮದಲ್ಲಿ ಕೇವಲ ಬಾಲಿವುಡ್ ಮತ್ತು ಕೆಲವು ತಮಿಳು ತೆಲುಗು ಚಿತ್ರದ ದೃಶ್ಯಗಳು ಹಾಡುಗಳಷ್ಟೇ ಅತಿ ಹೆಚ್ಚಿನ ಸಂಖ್ಯೆಯ ನೋಡುಗರನ್ನು ಹೊಂದಲು ಸಾಧ್ಯ ಎಂಬ ಮಾತಿತ್ತು. ಆದರೆ ಈಗ ಚಿತ್ರಣ ಬದಲಾಗಿದೆ. ನಮ್ಮ ಕನ್ನಡ ಚಿತ್ರದ ಹಾಡುಗಳು ಸಹ ಯೂಟ್ಯೂಬ್ನಲ್ಲಿ ದೇಶಾದ್ಯಂತ ಸದ್ದು ಮಾಡುತ್ತಿವೆ. ಶರಣ್ ನಟನೆಯ ರಾಂಬೊ ಚಿತ್ರದ ಚುಟು ಚುಟು ಹಾಡು ಯೂಟ್ಯೂಬ್ ನಲ್ಲಿ 100ಮಿಲಿಯನ್ ನೋಡುಗರನ್ನು ಹೊಂದಿದ ಮೊದಲ ಕನ್ನಡ ಹಾಡಾಗಿತ್ತು.

ಆದರೆ ಇದೀಗ ಧ್ರುವ ಸರ್ಜಾ ಅಭಿನಯದ ನಂದಕಿಶೋರ್ ನಿರ್ದೇಶನದ ಇನ್ನೇನು ಬಿಡುಗಡೆಯಾಗಲು ಸಜ್ಜಾಗಿರುವ ಪೊಗರು ಚಿತ್ರದ ಕರಾಬು ಎಂಬ ಹಾಡು ಬರೋಬ್ಬರಿ 175 ಮಿಲಿಯನ್(17.5ಕೋಟಿ) ನೋಡುಗರನ್ನು ಹೊಂದುವ ಮೂಲಕ ದಾಖಲೆ ಬರೆದಿದೆ. ಹೌದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಡಿದ ಸಿನಿಮಾಗಳು ಬೆರಳೆಣಿಕೆಯಷ್ಟು ಇರಬಹುದು ಆದರೆ ಅವರ ಯಾವೊಂದು ಚಿತ್ರವೂ ಸಾಧಾರಣ ಸಹಿತ ಆಗಿಲ್ಲ ಬದಲಾಗಿ ಎಲ್ಲವೂ ಬ್ಲಾಕ್ಬಸ್ಟರ್ ಗಳೆ ಆಗಿವೆ. ಈಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿದ್ದು 2021ರಲ್ಲಿ ತೆರೆಗೆ ಅಪ್ಪಳಿಸಲಿದೆ.

ಈ ಚಿತ್ರದ ಕರಾಬು ಹಾಡು ಕೆಲವು ತಿಂಗಳ ಹಿಂದೆಯಷ್ಟೇ ಯೂಟ್ಯೂಬ್ ಮಾಧ್ಯಮದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡಿಯಾದಾಗ ನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಹಾಡು ಇದೀಗ ಭರ್ಜರಿಯಾಗಿ 175 ಮಿಲ್ಲಿಯನ್ ವಿವರ್ಸ್ ಹೊಂದಿದೆ. ಈ ವಿಷಯದಿಂದ ಸಂತಸಗೊಂಡ ಧ್ರುವ ಸರ್ಜಾ ತಮ್ಮ ಟ್ವೀಟರ್ ಖಾತೆಯ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಮೊದಲಿನಂತೆ ಕನ್ನಡ ಇಂಡಸ್ಟ್ರಿ ಬಾವಿಯಲ್ಲಿನ ಕಪ್ಪೆ ಆಗಿಲ್ಲ ಬದಲಾಗಿ ಸಮುದ್ರಕ್ಕಿಳಿದು ತಿಮಿಂಗಲಿನಂತೆ ಮುನ್ನುಗ್ಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.