ಮೂರು ವರ್ಷದ ನಂತರ ಬಂದ್ರೂ‌ ಕೂಡಾ ಅದ್ದೂರಿಯಾಗಿ ಒಂದು ಹೆಜ್ಜೆ ಮುಂದಿಟ್ಟ ಧ್ರುವ ಸರ್ಜಾ

ಇತ್ತೀಚಿಗಷ್ಟೇ ನಿರ್ದೇಶಕ ಶಶಾಂಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕನ್ನಡ ಸಿನಿಮಾ ಮತ್ತು ಡಬ್ಬಿಂಗ್ ಸಿನಿಮಾಗಳ ಥಿಯೇಟರ್ ವಿಷಯವಾಗಿ ” ನುಗ್ಗಿ ಹೊಡೆಯುವುದು ಅಂದರೆ ಇದೇ, ಯಾವ ಡಬ್ಬಿಂಗ್ ಸಿನಿಮಾಗೂ ಒಂದು ಥಿಯೇಟರ್ ಕೂಡ ಸಿಗಬಾರದು. ಜೈ ಕನ್ನಡ ಸಿನಿಮಾ” ಎಂದು ಬರೆದುಕೊಂಡ ಸುದ್ದಿ ಎಲ್ಲೆಡೆ ಕಾಂಟ್ರವರ್ಸಿ ಕ್ರಿಯೇಟ್ ಮಾಡಿತ್ತು. ಕೆಲವರು ಈ ಟ್ವೀಟ್ ಗೆ ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದು ಕೆಲವರು ವ್ಯಂಗ್ಯವಾಡಿದ್ದಾರೆ. ಅದೇನೇ ಇರಲಿ, ನಮ್ಮ ನಾಡಿನಲ್ಲಿ ಕನ್ನಡ ಸಿನಿಮಾಗಳಿಗಿಂತ ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಪರಭಾಷಾ ಚಿತ್ರಗಳು ಹೆಚ್ಚು ಹೆಚ್ಚು ರಿಲೀಸ್ ಆಗುತ್ತಿರುವುದು ಬೇಸರದ ಸಂಗತಿ.

ಕನ್ನಡಿಗರಿಗಿಂತಲೂ ನೆರೆಯ ರಾಜ್ಯದ ಜನರು ನಮ್ಮ ನಾಡಿನಲ್ಲಿ ವಾಸವಾಗಿರುವುದೇ ಇದಕ್ಕೆ ಪರೋಕ್ಷ ಕಾರಣವೂ ಇರಬಹುದು. ಹಾಗಂತ ನಮ್ಮ ಕನ್ನಡ ಜನತೆಯ ಭಾಷಾ ಪ್ರೇಮಕ್ಕೆ ಏನೂ ಕೊರತೆಯಿಲ್ಲ. ಕನ್ನಡ ಸಿನಿಮಾಗಳಿಗೋಸ್ಕರ ಕನ್ನಡ ಭಾಷೆಗೋಸ್ಕರ ಅದೆಷ್ಟೋ ಜನರು ಇಂದಿಗೂ ಎಲೆಮರೆಕಾಯಿಯಂತೆ ಹೋರಾಡುತ್ತಲೇ ಇದ್ದಾರೆ. ಆಗೆಲ್ಲ ಕನ್ನಡ ನೆಲದಲ್ಲಿಯೇ ಕನ್ನಡ ಸಿನಿಮಾಗಳ ರಿಲೀಸ್ ಗೆ ಥಿಯೇಟರಗಳು ಸಿಗುತ್ತಿರಲಿಲ್ಲ.

ಕನ್ನಡ ಸಿನಿಮಾಗಳಿಗಿಂತ ಪರಭಾಷಾ ಚಿತ್ರಗಳದ್ದೇ ರಾಜ್ಯಭಾರವಾಗಿ ಬಿಟ್ಟಿತ್ತು. ಪರಭಾಷಾ ಚಿತ್ರಗಳ ರಿಲೀಸ್ ನಂತರ ಉಳಿದ ಥಿಯೇಟರಗಳಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. “ಏನು ಬದಲಾಗಿದೆ ಎಲ್ಲವೂ ಇದ್ದ ಹಾಗೆ ಇದೆಯಲ್ಲ” ಎಂದುಕೊಳ್ಳುತ್ತಿದ್ದೀರಾ ಹಾಗೆಂದುಕೊಳ್ಳುತ್ತಿದ್ದರೆ ಮುಂದೆ ಓದಿ. ನಮ್ಮ ಸ್ಯಾಂಡಲವುಡನ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಕ್ರಿಯೇಟ್ ಮಾಡಿದ ಹವಾ ನಮಗೆಲ್ಲರಿಗೂ ಗೊತ್ತೇ ಇದೆ.

ಕೆಜಿಎಫ್ ಚಾಪ್ಟರ್ 1 ಸಿನಿಮಾ ಭಾರತದಲ್ಲಿ ಸುಮಾರು 1800 ರಿಂದ 2000 ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಅತೀ ಹೆಚ್ಚು ಸುದ್ದಿ ಮಾಡಿತ್ತು. ಹಾಗೂ ನಮ್ಮ ಕರ್ನಾಟಕದಲ್ಲಿ 350 ಥಿಯೇಟರಗಳಲ್ಲಿ ರಿಲೀಸ್ ಆಗಿತ್ತು. ಹಾಗೆಯೇ ಬಾಹುಬಲಿ ಸಿನಿಮಾ ಜಗತ್ತಿನಾದ್ಯಂತ 9000 ಥಿಯೇಟರಗಳಲ್ಲಿ ಭಾರತದಾದ್ಯಂತ 6500 ಥಿಯೇಟರಗಳಲ್ಲಿ ಹಾಗೂ ನಮ್ಮ ಕರ್ನಾಟಕದಲ್ಲಿ 150 ಥಿಯೇಟರಗಳಲ್ಲಿ ರಿಲೀಸ್ ಆಗಿತ್ತು. ಕೆಜಿಎಫ್ ಚಾಪ್ಟರ್ 1 ಮತ್ತು ಬಾಹುಬಲಿ ಸಿನಿಮಾಗಳು ಜಗತ್ತಿನಾದ್ಯಂತ ಅತಿ ಹೆಚ್ಚು ಸದ್ದು ಮಾಡಿದ ಹಾಗೂ ಏಕಕಾಲದಲ್ಲಿ ಅತಿ ಹೆಚ್ಚು ಥಿಯೇಟರಗಳಲ್ಲಿ ರಿಲೀಸ್ ಆಗಿ ದಾಖಲೆ ಬರೆದಿದ್ದವು.

ಇದೀಗ ನಮ್ಮ ಕನ್ನಡದ ಮತ್ತೊಬ್ಬ ಸ್ಟಾರ್ ನಟರಾದ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಎಲ್ಲ ಸಿನಿಮಾ ದಾಖಲೆಗಳನ್ನು ಮುರಿಯಲು ಸಜ್ಜಾಗಿದೆ. ಹೌದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿಯಾಗಿರುವ ರಶ್ಮಿಕಾ ಮಂದಣ್ಣ ಅಭಿನಯದ ಮಾಸ್ ಚಿತ್ರ ಪೊಗರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಇತ್ತೀಚೆಗೆ ಕನ್ನಡ ಚಿತ್ರಗಳು ಪರಭಾಷೆಯಲ್ಲೂ ರಿಲೀಸ್ ಆಗಿ ಸದ್ದು ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಎಲ್ಲ ಭಾಷೆಯ ಚಿತ್ರರಂಗವು ನಮ್ಮ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡುತ್ತಿವೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಕರಾಬು ಹಾಡಿನಿಂದಲೇ ಅತಿ ಹೆಚ್ಚು ಪ್ರೇಕ್ಷಕರ ಮನೆಗೆದ್ದು ಕೆಲವೇ ಗಂಟೆಗಳಲ್ಲಿ ಅತಿ ಹೆಚ್ಚು ವ್ಯೂಸ್ ಮತ್ತು ಲೈಕ್ಸ್ ಪಡೆದು ದಾಖಲೆ ಮಾಡಿದ ಅದೇ ಪೊಗರು ಚಿತ್ರ ಸಾವಿರಕ್ಕೂ ಅಧಿಕ ಥೀಯೇಟರ್ ಗಳಲ್ಲಿ ರಿಲೀಸ್ ಆಗಲು ಸಜ್ಜಾಗಿ ಮತ್ತೊಂದು ದಾಖಲೆ ನಿರ್ಮಿಸುತ್ತಿದೆ. ನಮ್ಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಾಡಿದ್ದು ಕೆಲವೇ ಚಿತ್ರಗಳಾದರೂ ಎಲ್ಲವೂ ಭರ್ಜರಿ ಯಶಸ್ಸು ಕಂಡ ಚಿತ್ರಗಳಾಗಿವೆ. ಅದೇನೇ ಇರಲಿ ಮೂರು ವರ್ಷಗಳ ನಂತರ ದ್ರುವ ಅವರ ಸಿನಿಮಾ ರಿಲೀಸ್ ಆಗುತ್ತಿದ್ದರೂ ಅವರು ಕ್ರಿಯೇಟ್ ಮಾಡಿದ ಕ್ರೇಜ್ ಗೆ ಏನೂ ಕಡಿಮೆಯಿಲ್ಲ. ಇದೇ ರೀತಿ ಎಲ್ಲ ಕನ್ನಡ ಚಿತ್ರಗಳೂ ಅತೀ ಹೆಚ್ಚು ಯಶಸ್ಸುಗಳಿಸಿ ದಾಖಲೆ ನಿರ್ಮಿಸಲಿ ಎಂಬುದೇ ಕನ್ನಡಿಗರೆಲ್ಲರ ಆಶಯ.

%d bloggers like this: