ಬರೋಬ್ಬರಿ ಮೂರು ವರ್ಷಗಳ ನಂತರ ಮರಳಿ ಬಣ್ಣದ ಲೋಕಕ್ಕೆ ಬರುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟಿ ಹೌದು ಬಣ್ಣದ ಲೋಕದಲ್ಲಿ ಮಿಂಚಿ ಮರೆಯಾದವರು ಅನೇಕರು. ಅವರಲ್ಲಿ ನಟರಿಗಿಂತ ಹೆಚ್ಚು ನಟಿಯರೇ ಬಹಳ ಮಂದಿ. ಕೆಲವು ನಟಿಯರು ವೈಯಕ್ತಿಕ ಕಾರಣಗಳಿಂದಾಗಿ ಸಿನಿಮಾದಿಂದ ದೂರ ಉಳಿಯುತ್ತಾರೆ. ಇನ್ನೂ ಕೆಲವು ನಟಿಯರು ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿರಬೇಕಾದರೆ ಮದುವೆ ಆಗಿ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅದೇ ರೀತಿಯಾಗಿ ಮದುವೆಯಾದ ನಂತರ ಸಿನಿಮಾ ಲೋಕದಿಂದ ದೂರ ಇದ್ದವರು ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ.

ಹೌದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಪರಸ್ಪರ ಪ್ರೀತಿಸಿ 2017 ರಲ್ಲಿ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟರು. ಅನುಷ್ಕಾ ಶರ್ಮಾ ಅವರು ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದ ನಂತರ ತಮ್ಮ ಸಿನಿ ವೃತ್ತಿ ಬದುಕಿನಿಂದ ಅಂತರ ಕಾಯ್ದುಕೊಂಡರು. ನಟಿ ಅನುಷ್ಕಾ ಶರ್ಮಾ ಅವರು ಆ ಸಂಧರ್ಭದಲ್ಲಿ ಬಾಲಿವುಡ್ ರಂಗದ ಅಮೀರ್ ಖಾನ್, ಶಾರುಖ್ ಖಾನ್ ಅವರೊಟ್ಟಿಗೆ ನಟಿಸಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಅವರ ಅಭಿನಯದ ಪಿ.ಕೆ, ಸುಲ್ತಾನ್, ಸಂಜು, ರಬ್ ನೇ ಬನಾ ದಿ, ಎನ್.ಎಚ್. 10, ಬ್ಯಾಂಡ್ ಬಾಜಾ ಬಾರಾತ್ ಎಂಬಂತಹ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.



ಹೀಗೆ ಸಿನಿ ರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಮದುವೆಯಾಗಿ ಸಿನಿಲೋಕದಿಂದ ವಿರಾಮ ಪಡೆದುಕೊಂಡರು. ಬಳಿಕ ತಾಯಿಯಾಗಿ ಮಗಳು ವಮಿಕಾಳನ್ನು ಪೋಷಣೆ ಲಾಲಾನೆ ಪಾಲನೆ ಮಾಡಿ ತಾಯ್ತನ ಅನುಭವಿಸಿ ತಾಯಿಯ ಜವಬ್ದಾರಿ ನಿಭಾಯಿಸಿದ್ದಾರೆ ಅನುಷ್ಕಾ ಶರ್ಮಾ. ಇದೀಗ ಸುಮಾರು ಮೂರು ವರ್ಷಗಳ ನಂತರ ಮೂರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಹೌದು ಅದೂ ಕೂಡ ಒಟ್ಟಿಗೆ ಮೂರು ಚಿತ್ರಗಳಿಗೆ ಸಹಿ ಮಾಡುವ ಮೂಲಕ ಎಂಬುದು ಅಚ್ಚರಿ.



ಈ ಮೂರು ಚಿತ್ರಗಳ ಪೈಕಿ ಒಂದು ಓಟಿಟಿಗೇ ಅಂತಾನೇ ಮಾಡುತ್ತಿರುವ ಸಿನಿಮಾವಂತೆ. ಇನ್ನುಳಿದ ಎರಡು ಚಿತ್ರಗಳು ಬಿಗ್ ಬಜೆಟ್ ಚಿತ್ರಗಳಾಗಿದ್ದು ಬಿಗ್ ಸ್ಟಾರ್ಸ್ ಕಾಸ್ಟ್ ಹೊಂದಿರಲಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಬಾಲಿವುಡ್ ಸ್ಟಾರ್ ನಟಿಯಾಗಿ ಮಿಂಚಿದ್ದ ಅನುಷ್ಕಾ ಶರ್ಮಾ ಅವರು ಬಹುಧೀರ್ಘ ವರ್ಷಗಳ ನಂತರ ಬೆಳ್ಳಿ ಪರದೆಗೆ ಬರುತ್ತಿರುವುದು ಅವರ ಅಭಿಮಾನಿಗಳಿಗೆ ಸಂತೋಷದ ವಿಷಯವಾಗಿದೆ ಹಾಗು ಮತ್ತೆ ತೆರೆಯ ಮೇಲೆ ಅವರು ಹೇಗೆ ಮಿಂಚಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.