ಮೊಟ್ಟೆಯ ಬಿಳಿ ಮತ್ತು ಹಳದಿ ಭಾಗ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ, ಇದನ್ನು ಓದಿ

ಅನೇಕರು ಹೇಳುತ್ತಾರೆ ಮೊಟ್ಟೆ ಹಳದಿ ಭಾಗ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಅದನ್ನು ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಅಧಿಕವಾಗುವುದು ಎಂದು. ಅದೇ ರೀತಿ ಕೆಲವರು ಮೊಟ್ಟೆ ತಿನ್ನುವಾಗ ಹಳದಿಯನ್ನು ಬಿಸಾಡಿ ಕೇವಲ ಮೇಲಿನ ಬಿಳಿಯ ಭಾಗವನ್ನಷ್ಟೇ ತಿನ್ನುತ್ತಾರೆ. ಆದರೆ ಯಾವ ಭಾಗ ಎಷ್ಟು ಒಳ್ಳೆಯದು ಮತ್ತು ಅದರ ಉಪಯೋಗಗಳು ಏನು ಎಂಬುದನ್ನು ನೀವೇ ಓದಿ.

ಮೊಟ್ಟೆ ದೇಹಕ್ಕೆ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅದರ ಅರ್ಥ ಇಡೀ ಮೊಟ್ಟೆ ಒಳ್ಳೆಯದು ಎಂದು ಹೊರತಾಗಿ ಮೇಲಿನೆ ಬಿಳಿಯ ಭಾಗ ಅಷ್ಟೇ ಅಲ್ಲ. ಅನೇಕ ತಜ್ಞರು ಹೇಳುವಂತೆ ಇಡೀ ಮೊಟ್ಟೆಯನ್ನು ಪೂರ್ಣವಾಗಿ ಸೇವಿಸಿದರೆ ಮಾತ್ರ ಅದು ಒಳ್ಳೆಯದು. ಬಹುತೇಕ ಜನರಲ್ಲಿ ಹಳದಿ ಭಾಗದ ಬಗ್ಗೆ ತಪ್ಪಾದ ಅಭಿಪ್ರಾಯವಿದೆ. ಹಾಗೆ ನೋಡಿದರೆ ಮೊಟ್ಟೆ ಹಳದಿ ಭಾಗದ ಉಪಯೋಗ ತುಂಬಾನೇ ಇದೆ.

ಅದು ನಮ್ಮ ದೇಹದಲ್ಲಿ ಹಾನಿಗೊಳಗಾದ ಸ್ನಾಯುಗಳನ್ನು ಬೇಗ ಸರಿಪಡಿಸುವಲ್ಲಿ ತುಂಬಾ ನೆರವಾಗುತ್ತದೆ. ಅದು ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸುವುದಿಲ್ಲ ಬದಲಾಗಿ ಕಡಿಮೆ ಮಾಡುತ್ತದೆ ಹಾಗೂ ಹಾಗೆ ಇರುವಂತೆ ನೋಡಿಕೊಳ್ಳುತ್ತದೆ. ಮೊಟ್ಟೆ ಬಿಳಿ ಭಾಗದಲ್ಲಿ ಪ್ರೋಟಿನ್ ಮಾತ್ರ ಇರುತ್ತದೆ ಅದೇ ಒಂದು ವೇಳೆ ನಾವು ಸಂಪೂರ್ಣ ಮೊಟ್ಟೆಯನ್ನು ಸೇವಿಸಿದರೆ ಪ್ರೋಟೀನ್ ಜೊತೆಗೆ ಅನೇಕ ಪೋಷಕಾಂಶಗಳು ಒಟ್ಟಿಗೆ ಸಿಗುತ್ತವೆ.

ಕ್ಯಾಲರಿ ಅಂಶವನ್ನು ಗಮನಿಸುವುದಾದರೆ ಹಳದಿ ಭಾಗಕ್ಕಿಂತ ಬಿಳಿಯ ಭಾಗದಲ್ಲಿ ಕ್ಯಾಲರಿ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಎಲ್ಲಾ ಅಂಶಗಳನ್ನು ಗಮನಿಸಿದರೆ ದೇಹಕ್ಕೆ ಮೊಟ್ಟೆ ಎರಡು ಭಾಗಗಳ ಅವಶ್ಯಕತೆ ಇದೆ ಎಂದು ಅರ್ಥವಾಗುತ್ತದೆ.

%d bloggers like this: