ಮೊಟ್ಟೆಯ ಹಳದಿ ಭಾಗ ತಿನ್ನಬೇಕಾ ಬೇಡವಾ ಎಂಬುದಕ್ಕೆ ಉತ್ತರ

ಇಂದಿನ ಆಧುನಿಕತೆಯ ಜೀವನದಲ್ಲಿ ಪೌಷ್ಠಿಕಾಂಶ ಆಹಾರ ಎನ್ನುವುದು ಸತ್ಯಕ್ಕೆ ದೂರವಾದ ಮಾತು, ಇಂದು ಬೆಳೆಯುವ ಪ್ರತಿಯೊಂದು ಆಹಾರ ಧಾನ್ಯಗಳಲ್ಲಿ ರಾಸಾಯನಿಕ ಔಷಧಿಯನ್ನು ಸಿಂಪಡಿಸಿರುತ್ತಾರೆ. ಇನ್ನು ಉತ್ತಮವಾದ ಆರೋಗ್ಯಕರ ಆಹಾರವನ್ನು ನಿರೀಕ್ಷೆ ಮಾಡುವುದು ಅಸಾಧ್ಯವಾಗಿದೆ, ಇಂದು ನಾವು ಸೇವಿಸುತ್ತಿರುವ ಜಂಕ್ ಫುಡ್ ಗಳಿಂದ ನಮ್ಮ ದೇಹದಲ್ಲಿ ಬೇಡವಾದ ಕೊಬ್ಬಿನ ಅಂಶಗಳು ಶೇಖರಣೆಯಾಗುತ್ತವೆ. ಇದರಿಂದ ಮನುಷ್ಯನ ದೇಹದ ಗಾತ್ರ ವ್ಯತಿರಿಕ್ತ ರೂಪ ಪಡೆಯುತ್ತದೆ.

ಕೆಲವರಿಗೆ ಸೊಂಟದ ಭಾಗ ಅಂದರೆ ಹೊಟ್ಟೆಯ ಕೆಳಭಾಗದಲ್ಲಿ ಬೊಜ್ಜು ಶೇಖರಣೆಯಾಗುತ್ತದೆ ಇದು ಮಹಿಳೆ ಮತ್ತು ಪುರುಷರಲ್ಲಿ ಕಂಡು ಬರುತ್ತದೆ, ಈ ಬೊಜ್ಜಿನಾಂಶ ಹೃದಯಾಘಾತಕ್ಕೆ ಕಾರಣವಾಗಬಹುದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಆರೋಗ್ಯವಂತ ದೇಹಕ್ಕಾಗಿ ವ್ಯಾಯಾಮ, ಯೋಗಾಸನದ ಮೊರೆ ಹೋಗುತ್ತಿದ್ದರು. ಆದರೆ ಇಂದಿನ ಜಮಾನದ ಯುವಕರು ದೇಹವನ್ನು ಸಧೃಡವಾಗಿಟ್ಟುಕೊಳ್ಳಲು ದೇಹ ದಂಡಿಸಲು ಜಿಮ್ ಗಳನ್ನು ಅವಲಂಬಿಸಿರುತ್ತಾರೆ.

ಜಿಮ್ ಗೆ ಹೋಗುತ್ತಿರುವವ‌ರಾದರೆ ನಿಮ್ಮಜಿಮ್ ಟ್ರೈನರ್ ಆಹಾರ ಕ್ರಮದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಲು ಸಲಹೆ ನೀಡುತ್ತಾರೆ. ಬೆಳಿಗ್ಗೆ ಜಿಮ್ ಗೆ ಹೋಗುವ ಮುಂಚೆ ಚುಕ್ಕಿ ಬಾಳೆಹಣ್ಣನ್ನು ಸೇವಿಸಲು ಸಲಹೆ ನೀಡುತ್ತಾರೆ. ಜೊತೆಗೆ ಮುಖ್ಯವಾಗಿ ಈ ಮೊಟ್ಟೆಯ ಹಳದಿ ಭಾಗವನ್ನು ತಿನ್ನುಬಾರದು ಎಂದು ಹೇಳುತ್ತಾರೆ. ಆದರೆ ಈ ಮೊಟ್ಟೆಯಲ್ಲಿರುವ ಹಳದಿ ಭಾಗದಿಂದ ನಿಮ್ಮ ದೇಹಕ್ಕೆ ಆಗುವ ತೊಂದರೆ ಏನು ಎಂಬುದನ್ನು ನೀವು ತಿಳಿದುಕೊಂಡಿರುವುದಿಲ್ಲ. ಅದರ ಬಗ್ಗೆ ನೀವು ತಿಳಿದುಕೊಳ್ಳುವುದು ಉಪಯುಕ್ತವಾಗಿದೆ. ಮೊಟ್ಟೆಯ ಬಿಳಿಭಾಗದಲ್ಲಿ ಒಂದು ಮೊಟ್ಟೆಯ ಸೇವನೆಯಿಂದ 17 ಗ್ರಾಂ ಕ್ಯಾಲೋರಿ ಅಂಶವಿದ್ದರೆ, 4 ಗ್ರಾಂ ನಷ್ಟು ಪ್ರೊಟೀನ್ ಅಂಶ ಇರುತ್ತದೆ.

ಕೆಲವು ಬಾಡಿಬಿಲ್ಡರ್ ಗಳು ಪ್ರತಿನಿತ್ಯ ಹತ್ತು ಮೊಟ್ಟೆಯನ್ನು ಸೇವಿಸಿದರೆ 40 ಗ್ರಾಂನಷ್ಟು ಪ್ರೋಟೀನ್ ದೇಹ ಸೇರುತ್ತದೆ. ಆದರೆ ಮೊಟ್ಟೆಯ ಹಳದಿ ಭಾಗವನ್ನು ಸೇವಿಸಿದರೆ 60 ಗ್ರಾಂ ನಷ್ಟು ಪ್ರೋಟೀನ್ ಮತ್ತು 78 ಗ್ರಾಂ ನಷ್ಟು ಕ್ಯಾಲೋರಿ ದೇಹದಲ್ಲಿ ಸಂಗ್ರಹವಾಗುತ್ತದೆ. ಹೌದು ಮೊಟ್ಟೆಯಲ್ಲಿರುವ ಹಳದಿ ಭಾಗವನ್ನು ಸೇವಿಸುವುದರಿಂದ ಕೆಲವರಿಗೆ ಆಹಾರವನ್ನು ಅರಗಿಸಿಕೊಳ್ಳಲು ಸಮಸ್ಯೆ ಇದ್ದವರಿಗೆ ವಾಯು ಸೆಳೆತ ಮತ್ತು ಇತರೆ ದೈಹಿಕ ಸಮಸ್ಯೆ ಕಾಡುತ್ತದೆ ಆದ್ದರಿಂದ ನಿಮ್ಮ ಜಿಮ್ ತರಬೇತುದಾರು ನಿಮಗೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನಬಾರದು ಎಂದು ಸಲಹೆ ಸೂಚನೆ ನೀಡುತ್ತಾರೆ.

%d bloggers like this: