ಕಳೆದ ತಿಂಗಳು ದಕ್ಷಿಣ ಭಾರತದಲ್ಲಿ ತಮಿಳು ಚಿತ್ರವೊಂದು ಭಾರಿ ಸುದ್ದಿ ಮಾಡಿತ್ತು, ಈ ಚಿತ್ರ ತಮಿಳು ಭಾಷೆಯ ಚಿತ್ರವಾಗಿದ್ದರೂ ಸಹ ಕನ್ನಡಿಗರಿಗೆ ಹೆಚ್ಚು ಅಚ್ಚುಮೆಚ್ಚು ಯಾಕೆಂದರೆ ಈ ಚಿತ್ರವೇ ಕನ್ನಡಿಗನೊಬ್ಬನ ಜೀವನ ಆಧಾರಿತ ಚಿತ್ರ. ಇದು ಕೇವಲ ತಮಿಳು ಭಾಷೆಯಲ್ಲಿ ಅಷ್ಟೇ ಅಲ್ಲ ಕನ್ನಡದ ಅವತರಣಿಕೆಯೂ ಸಹ ಬಿಡುಗಡೆಯಾಗಿತ್ತು ಹಾಗೂ ಭಾರೀ ಪ್ರಶಂಸೆ ಗಳಿಸಿದೆ. ಇದುವೇ ತಮಿಳು ನಟ ಸೂರ್ಯ ಅಭಿನಯಿಸಿರುವ ಸೂರರೈ ಪಟ್ರು. ಈ ಚಿತ್ರ ನಮ್ಮ ಕನ್ನಡಿಗನೊಬ್ಬನ ಸಾಧನೆ ಬಗ್ಗೆ ಇದೆ, ಹಾಸನದ ಹುಡುಗನೊಬ್ಬ ಬೆಳೆದು ದೊಡ್ಡ ವಿಮಾನ ಸಂಸ್ಥೆಯನ್ನೇ ಕಟ್ಟಿದ ಕಥೆ ಇದು.

ಈ ಕತೆಯ ಹೀರೋ ಡೆಕ್ಕನ್ ವಿಮಾನ ಸಂಸ್ಥೆಯ ಒಡೆಯ ನಮ್ಮ ಹಾಸನದ ಕ್ಯಾಪ್ಟನ್ ಗೋಪಿನಾಥ್. ಜಿಆರ್ ಗೋಪಿನಾಥ್ ಅವರು ವಿಜಯಪುರದ ಸೈನಿಕ ಶಾಲೆಯಲ್ಲಿ ಓದಿದವರು, ಹಲವಾರು ಅಡಚಣೆಗಳನ್ನು ಎದುರಿಸಿ ಯಶಸ್ಸು ಗಳಿಸಿದವರು. ಇವರ ಜೀವನಾಧಾರಿತ ಸೂರರೈ ಪೋಟ್ರು ಚಿತ್ರ 3 ವಾರಗಳ ಹಿಂದೆ ಅಮೆಜಾನ್ ಪ್ರೈಮ್ OTT ಬಿಡುಗಡೆಯಾಗಿದೆ ಹಾಗೂ ಇದಕ್ಕೆ ಎಲ್ಲ ಕಡೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.ಇದನ್ನು ಸ್ವತಹಾ ಗೋಪಿನಾಥ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದರು, ನಟ ಸೂರ್ಯ ಅವರ ಅಭಿನಯ ತುಂಬಾ ಜನರಿಗೆ ಖುಷಿ ಕೊಟ್ಟಿದೆ.

ಸೂರರೈ ಪೋಟ್ರು ಚಿತ್ರ ಕೇವಲ ಮೂರೇ ದಿನದಲ್ಲಿ ಬರೋಬ್ಬರಿ ಹನ್ನೊಂದು ಕೋಟಿಗೂ ಅಧಿಕ ಜನ ಈ ಚಿತ್ರವನ್ನು ನೋಡಿದ್ದಾರೆ. ಚಿತ್ರ ಸುಮಾರು 350 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿದೆ.ಸೂರ್ಯ ಅವರ ಸಿನಿ ಬದುಕಿನಲ್ಲಿ ಈ ಚಿತ್ರ ಅವರಿಗೆ ಅತ್ಯಂತ ಯಶಸ್ಸು ಹಾಗೂ ಹೆಸರು ತಂದುಕೊಟ್ಟ ಸಿನಿಮಾ ಆಗಿದೆ. ಒಟ್ಟಿನಲ್ಲಿ ಕನ್ನಡಿಗನ ಜೀವನಚರಿತ್ರೆ ಆಗಿರುವ ಈ ಚಿತ್ರ ತಮಿಳು ಭಾಷೆಯಲ್ಲಿ ಮೂಡಿಬಂದರು ಕನ್ನಡದ ಅವತರಣಿಕೆ ಇರುವುದು ನಮಗೆಲ್ಲ ಖುಷಿಕೊಟ್ಟಿದೆ, ಅಮೆಜಾನ್ ಪ್ರೈಮ್ ನಲ್ಲಿ ಕನ್ನಡದಲ್ಲಿಯೂ ಸಹ ನೀವು ಈ ಚಿತ್ರವನ್ನು ನೋಡಬಹುದು. ಒಂದು ಅದ್ಭುತ ಕನ್ನಡಿಗನು ಚಿತ್ರವನ್ನು ತಪ್ಪದೇ ಇವತ್ತೇ ನೋಡಿರಿ.

ಕೆಲ ತಿಂಗಳ ಹಿಂದೆ ಈ ಚಿತ್ರಕ್ಕೆ ತಮಿಳುನಾಡಿನಲ್ಲಿ ಥಿಯೇಟರ್ ಮಾಲೀಕರಿಂದ ದೊಡ್ಡ ವಿರೋಧವಾಗಿತ್ತು, ಕಾರಣ ಈ ಚಿತ್ರವನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡದೆ ಅಮೆಜಾನ್ ಪ್ರೈಮ್ ಅಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ. ತಮಿಳುನಾಡು ಚಿತ್ರಮಂದಿರದ ಸಂಘ ಸೂರ್ಯ ಅವರ ಮುಂದಿನ ಎಲ್ಲಾ ಚಿತ್ರಗಳನ್ನು ಬಹಿಸ್ಕರಿಸುವುದಾಗಿ ಹೇಳಿದ್ದರು, ಆದರೆ ಇದಕ್ಕೆಲ್ಲಾ ತಲೆಕೆಡಿಸ್ಕೊಳ್ಳದ ಸುರರೈ ಪೊಟ್ರೆ ಚಿತ್ರತಂಡ ತಾವು ಅಂದುಕೊಂಡಂತೆ ಅಮೆಜಾನ್ ಪ್ರೈಮ್ ಅಲ್ಲಿ ಬಿಡುಗಡೆ ಮಾಡಿ ಭರ್ಜರಿ ಯಶಸ್ಸನ್ನು ಗಳಿಸಿಕೊಂಡರು.