ಮುಗಿಲೆತ್ತರಕ್ಕೆ ಏರಿದ ನಟಿಯ ಸಂಭಾವನೆ, ಒಂದೇ ಚಿತ್ರಕ್ಕೆ 20 ಕೋಟಿ‌ ಸಂಭಾವನೆ ಪಡೆದ ಸ್ಟಾರ್ ನಟಿ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟರಿಗೆ ಬಹು ಮುಖ್ಯ ಪ್ರಾಧಾನ್ಯತೆ ನೀಡಲಾಗುತ್ತದೆ. ತೆರೆಯ ಮೇಲೆ ನಟರೇ ಹೆಚ್ಚು ಅವಧಿ ಕಾಣಿಸಿಕೊಳ್ಳುತ್ತಾರೆ. ಅದರ ಜೊತೆಗೆ ಸಂಭಾವನೆ ವಿಚಾರದಲ್ಲಂತೂ ಅವರೇ ಸಾಟಿ. ಅಷ್ಟರ ಮಟ್ಟಿಗೆ ನಟಿಯರಿಗಿಂತ ಹೆಚ್ಚು ಮಹತ್ವವನ್ನು ನಟರು ಪಡೆದಿರುತ್ತಾರೆ, ಪಡೆಯುತ್ತಿದ್ದಾರೆ. ಆದರೆ ಬಾಲಿವುಡ್ ಈ ಖ್ಯಾತ ನಟಿ ನಾವು ಕೂಡ ಯಾರಿಗೂ ಕಡಿಮೆ ಇಲ್ಲ. ಒಬ್ಬ ಸ್ಟಾರ್ ನಟ ಯಾವ ಮಟ್ಟಿಗೆ ಕ್ರೇಜ಼್ ಹೊಂದಿರುತ್ತಾರೆ ಅಷ್ಟೇ ಸಿನಿಮಾ ಕ್ರೇಜ಼್ ನಾವ್ ಕೂಡ ಸೃಷ್ಟಿಸಬಹುದು ಎಂಬುದನ್ನು ನಟಿ ಆಲಿಯಾ ಭಟ್ ಸಾಬೀತು ಮಾಡಿದ್ದಾರೆ. ಹೌದು ನಟಿ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಕಳೆದ ಫೆಬ್ರವರಿ 25ರಂದು ದೇಶಾದ್ಯಂತ ಬಿಡುಗಡೆಯಾಗಿದೆ.

ಈ ಸಿನಿಮಾ ಸಿನಿ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಅದರ ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಮಟ್ಟದಲ್ಲಿ ಗಳಿಕೆ ಮಾಡಿದೆ. ಹೌದು ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ರಿಲೀಸ್ ಆದ ಎರಡೇ ವಾರದಲ್ಲಿ ಬರೋಬ್ಬರಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿದೆ. ಮಹಿಳಾ ಪ್ರಧಾನ ಸಿನಿಮಾ ಕೂಡ ಕೋಟಿ ಕೋಟಿ ಲೂಟಿ ಮಾಡಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಈ ಹಿಂದೆ ಚಿತ್ರ ರಿಲೀಸ್ ಆಗುವ ಮುನ್ನ ಖ್ಯಾತ ನಟಿ ಕಂಗನಾ ರಣಾವತ್ ಅಪಹಾಸ್ಯ ಮಾಡಿದ್ದರು.

ಇದೀಗ ಚಿತ್ರದ ಯಶಸ್ಸು ಕಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ಈ ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಾಂತನು ಮಹೇಶ್ವರಿ, ಅಜಯ್ ದೇವಗನ್, ಹುಮಾ ಖುರೇಷಿ, ವಿಜಯ್ ರಾಝ್, ಇಂದಿರಾ ತಿವಾರಿ, ಸೀಮಾ ಪಾಹ್ವಾ ಇನ್ನಿತರರು ಅಭಿನಯಿಸಿದ್ದಾರೆ. ನಟಿ ಆಲಿಯಾ ಭಟ್ ಅವರ ಅಭಿನಯಕ್ಕೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ಭಾರಿ ಸುದ್ದಿ ಆಗುತ್ತಿರುವುದು ನಟಿ ಆಲಿಯಾ ಭಟ್ ಈ ಚಿತ್ರದ ನಟನೆಗೆ ಬರೋಬ್ಬರಿ ಇಪ್ಪತ್ತು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮೂಲಕ. ಇದೇ ಚಿತ್ರದಲ್ಲಿ ನಟಿಸಿರುವ ನಟ ಅಜಯ್ ದೇವಗನ್ ಅವರು ಹನ್ನೊಂದು ಕೋಟಿ ಸಂಭಾವನೆ ಪಡೆದಿದ್ದಾರೆ.

%d bloggers like this: