ರಾಕಿಂಗ್ ಸ್ಟಾರ್ ಯಶ್ ಅವರ ಸಂಭಾವನೆಯಲ್ಲಿ ಭಾರಿ ಏರಿಕೆ! ಬಹುಭಾಷೆಯಲ್ಲಿ ತೆರೆಕಂಡ ಕೆಜಿಎಫ್ ಚಿತ್ರ ಭರ್ಜರಿ ಯಶಸ್ಸು ಕಾಣುವ ಮೂಲಕ ರಾಕಿಂಗ್ ಸ್ಟಾರ್ ಯಶ್, ದೇಶದಾದ್ಯಂತ ಭಾರಿ ಜನಪ್ರಿಯರಾದರು. ಸದ್ಯದ ಮಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಮೊದಲಿಗರಾಗಿದ್ದಾರೆ. ಕೆಜಿಎಫ್ ಚಿತ್ರ ಬಿಡುಗಡೆಗೂ ಮುಂಚೆ ಯಶ್ ಅವರ ಸಂಭಾವನೆ ಒಂದು ಚಿತ್ರಕ್ಕೆ 5 ರಿಂದ 5.5 ಕೋಟಿಗಳಷ್ಟಿತ್ತು. ಇವರ ನಂತರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 4.5 ರಿಂದ 5.ಕೋಟಿ ರೂಪಾಯಿ ಹಾಗೇ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಸಂಭಾವನೆ ಕೂಡ 4.5 ರಿಂದ 5 ಕೋಟಿ ರೂಪಾಯಿ ಕಿಚ್ಚ ಸುದೀಪ್ 4.ರಿಂದ 4.5 ಕೋಟಿ ರೂ.ಸಂಭಾವನೆ ಪಡೆಯುತ್ತಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಸಂಭಾವನೆ ಮೊದಲಿಗಿಂತ ಎರಡು ಪಟ್ಟು ಹೆಚ್ಚಾಗಿದ್ದು, ಕೆಜಿಎಫ್ ಚಾಪ್ಟರ್ 1ಕ್ಕೇ ಬರೋಬ್ಬರಿ 11 ಕೋಟಿ ಸಂಭಾವನೆ ಪಡೆದಿದ್ದರು ಎಂದು ತಿಳಿದು ಬಂದಿದೆ.

ಆದರೆ ಇನ್ನೊಂದು ಅಚ್ಚರಿಯ ಸುದ್ದಿ ಅಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಯಶ್ ಅವರು ಬರೋಬ್ಬರಿ 30 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ, ಇದಲ್ಲದೆ ಈ ಚಿತ್ರ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿ ಅಧಿಕ ಗಳಿಕೆ ಕಂಡರೆ ಬಂದ ಆದಾಯದಲ್ಲಿ ಲಾಭಾಂಶ ಕೂಡ ಪಡೆಯಲಿದ್ದಾರೆ ಎಂದು ಚಿತ್ರತಂಡದ ಆಪ್ತ ವಲಯಗಳಲ್ಲಿ ಕೇಳಿಬಂದಿದೆ. ಇನ್ನು ಕೆಜಿಎಫ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಲ್ಲದೇ, ಆ ಚಿತ್ರದಲ್ಲಿ ನಟಿಸಿದ ನಟ ನಟಿಯರಿಗೆ ಹಲವು ತಂತ್ರಜ್ಞರ ಜೀವನದ ದಿಕ್ಕನ್ನೇ ಬದಲಾಯಿಸಿದೆ ಎನ್ನಬಹುದು. ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಸದ್ಯಕ್ಕೆ ಕೆಜಿಎಫ್2 ಚಿತ್ರದ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದು ಎಲ್ಲರ ಕೂತೂಹಲವಾಗಿದೆ.