ಮುಖದ ಸೌಂದರ್ಯವನ್ನು ಹೆಚ್ಚಿಸುತ್ತಾ ಸೋಂಪು ಕಾಳಿನ ಫೇಶಿಯಲ್? ಹೌದು ಅಂತಿದ್ದಾರೆ ಸೋಂಪು ಬಳಕೆ ಮಾಡಿ ಉತ್ತಮ ಫಲಿತಾಂಶ ಪಡೆದ ಮಹಿಳೆಯರು, ಜೀರಿಗೆ ರೀತಿಯಲ್ಲಿಯಿರುವ ಹಸಿರುಬಣ್ಣದ ಈ ಸೋಂಪು ಸೌಂದರ್ಯವರ್ಧಕವಾಗಿ ಮಾರ್ಪಾಟ್ಟಾಗಿದೆ. ಸಾಮಾನ್ಯವಾಗಿ ಹೋಟೇಲ್ ಗಳಲ್ಲಿ ಊಟದ ನಂತರ ಈ ಸೋಂಪು ತಿನ್ನುವುದಕ್ಕೆ ಅಂತ ಟೇಬಲ್ ಗಳಲ್ಲಿ ಇಟ್ಟಿರುತ್ತಾರೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯಲೆಂದು ಅದೇ ರೀತಿಯಾಗಿ ಮುಖದ ಕಾಂತಿಯನ್ನು ಹೆಚ್ಚಿಸುವುದಕ್ಕಾಗಿಯೂ ಈ ಸೋಂಪನ್ನು ಬಳಕೆ ಮಾಡುತ್ತಾರೆ, ಸೋಂಪುವಿನಲ್ಲಿ ಆಂಟಿಆಕ್ಸಿಡೆಂಟ್ ಅಂಶವಿದ್ದು ಇದು ಚರ್ಮದ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ.

ಹದಿಹರೆಯದವರಲ್ಲಿ ವಯೋಮಾನದ ಅನುಗುಣವಾಗಿ ಮುಖದ ಮೇಲೆ ಮೊಡವೆ ಆಗುವುದು ಸಹಜ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಸೋಂಪನ್ನು ಬಳಸಿ ಮನೆಯಲ್ಲಿಯೇ ಮಾಡಬಹುದಾದ ಪರಿಹಾರಗಳಿವೆ. ಸೋಂಪುಕಾಳನ್ನು ಪುಡಿಮಾಡಿ ಅದನ್ನು ಮುಖಕ್ಕೆ ಹಚ್ಚಿ ತೊಳೆದರೆ ಮುಖದ ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ, ಅದೇ ರೀತಿಯಾಗಿ ಸೋಂಪನ್ನು ಪುಡಿಮಾಡಿ ಅದಕ್ಕೆ ಒಂದಷ್ಟು ಮೊಸರು, ಜೇನುತುಪ್ಪ ಸೇರಿಸಿ ಪೇಸ್ಟ್ ರೀತಿಯಲ್ಲಿ ಮಾಡಿಟ್ಟುಕೊಂಡು ಮುಖಕ್ಕೆ ಹಚ್ಚಿ ಅರ್ಧ ತಾಸು ಬಿಟ್ಟು ತೊಳೆದರೆ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.