ಮುಖಕ್ಕೆ ಈ ಹಿಟ್ಟನ್ನು ಬಳಸಿ, ಕೇವಲ ವಾರದಲ್ಲೇ ಮುಖ ಪಳಪಳ ಕಾಂತಿ ಬರುತ್ತದೆ

ನಿಮ್ಮ ಚರ್ಮದ ಬಣ್ಣ ನಿಮ್ಮನ್ನು ಕೀಳರಿಮೆಗೆ ತಳ್ಳುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ. ಅಂದಹಾಗೆ ಇದಕ್ಕೂ ಮೊದಲು ಈ ಸೌಂದರ್ಯದಿಂದ ಎಲ್ಲವನ್ನು ಅಳೆಯುವುದಕ್ಕಾಗಲ್ಲ ಸೌಂದರ್ಯದ ಹಿಂದೆ ಅಪಾಯವು ಕೂಡ ಅಡಗಿರುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ, ಹೌದು ಮುಖನೋಡಿ ಮಣೆ ಹಾಕಬಾರದು ಎಂಬ ಮಾತಿನಂತೆ ನಿಮ್ಮ ಮುಖಲಕ್ಷಣವನ್ನು ನೋಡಿ ಈ ವ್ಯಕ್ತಿ ಹೀಗೆ ಅಂತ ನಿರ್ಧರಿಸಬಾರದು ಆದರೆ ಇಂದಿನ ದಿನಮಾನಗಳಲ್ಲಿ ವ್ಯಕ್ತಿಯ ಬಟ್ಟೆ, ಬಣ್ಣಬಣ್ಣ ಮಾತುಗಳಿಗೆ ಅವರ ನಾಜೂಕಿನ ಮಾತಿಗೆ ಮರುಳಾಗಿ ಮೋಸ ಹೋಗುವವರೆ ಹೆಚ್ಚು ಅದಕ್ಕಾಗಿ ಹೇಳುವುದು ಸೌಂದರ್ಯದ ಹಿಂದೆ ಅಪಾಯವಿದೆ ಎಂದು ಕೆಲವರು ಸೌಂದರ್ಯವನ್ನೇ ಮೂಲ ಬಂಡವಾಳ ಮಾಡಿಕೊಂಡಿರುವವರು ಸಹ ನಮ್ಮ ನಡುವೆ ಇದ್ದಾರೆ.

ಹಾಗಂತ ನೀವು ಸುಂದರವಾಗಿ ಇನ್ನೊಬ್ಬರಿಗೆ ಮೋಸ ಮಾಡಬೇಕು ಎಂಬ ಉದ್ದೇಶವಲ್ಲ ಕೆಲವರಿಗೆ ತಮ್ಮ ರೂಪ ಬಣ್ಣ ಚೆನ್ನಾಗಿಲ್ಲ ಎಂಬ ಭಾವದಿಂದ ಎಷ್ಟೋ ಜನ ತಮ್ಮಲ್ಲಿ ಪ್ರತಿಭೆ ಇದ್ದರು ಕೂಡ ಆ ಒಂದು ಕೀಳಿರಮೆಯಿಂದ ತಮ್ಮ ಹೆಜ್ಜೆಯನ್ನ ಹಿಂದಿಡುತ್ತಾರೆ. ಇನ್ನು ಸಾಮಾನ್ಯವಾಗಿ ನಮ್ಮ ಹಿಂದೂ ಸಂಪ್ರಾದಾಯದ ಹಲವು ಹಬ್ಬಗಳಲ್ಲಿ ಎಣ್ಣೆಸ್ನಾನ ಮಾಡುವುದು ವಾಡಿಕೆಯಾಗಿದೆ, ಈ ಎಣ್ಣೆ ಸ್ನಾನ ಮಾಡುವುದರಿಂದ ದೇಹದ ಆಯಾಸದ ಜೊತೆಗೆ ಮೈಕಟ್ಟನ್ನು ಗರಿದೆರಿಸುತ್ತದೆ ಎಂದು ಹೇಳುತ್ತಾರೆ. ಇನ್ನು ಈ ಎಣ್ಣೆ ಸ್ನಾನವಾದ ನಂತರ ಕೆಲವರು ಬರಿ ಬಿಸಿ ನೀರಿನಿಂದ ಸ್ನಾನಮಾಡುತ್ತಾರೆ. ಇದರಿಂದ ಎಣ್ಣೆಯ ಜಿಡ್ಡು ಮೈಮೇಲೆಯೆ ಇರುತ್ತದೆ. ಕೆಲವರು ಸೋಪು ಶ್ಯಾಂಪು ಬಳಸುವುದುಂಟು ಈ ಸೋಪು ಶ್ಯಾಂಪು ಕೆಲವೊಮ್ಮೆ ದೇಹದೊಳಗೆ ಸೇರಿ ತೊಂದರೆ ಆಗಬಹುದು.

ಆದರೆ ಈ ಕಡಲೇ ಹಿಟ್ಟನ್ನು ಬಳಸುವುದರಿಂದ ಹಲವಾರು ನೈಸರ್ಗಿಕ ಉಪಯೋಗ ಪಡೆಯಬಹುದಾಗಿದೆ, ಜೊತೆಗೆ ಎಣ್ಣೆಯ ಜಿಡ್ಡನ್ನು ಸಂಪೂರ್ಣವಾಗಿ ತೆಗೆಯುತ್ತದೆ ಮತ್ತು ಚರ್ಮವು ಒಣಗದಂತೆ ಸುರಕ್ಷತೆಯಿಂದ ಕಾಪಾಡುತ್ತದೆ. ಜೊತೆಗೆ ಚರ್ಮದ ಸಮಸ್ಯೆಗಳಿಗೆ ರಾಮಬಾಣವಾಗಿ ಕಡಲೇಹಿಟ್ಟು ಪರಿಣಾಮ ಬೀರುತ್ತದೆ. ಅಲರ್ಜಿ ಇರುವವರು ಕಡಲೇ ಹಿಟ್ಟನ್ನು ಬಳಸಬೇಡಿ ಅದರ ಬದಲು ಸೀಗೆಕಾಯಿ ಅಥವಾ ಅಂಟ್ವಾಳ ಕಾಯಿ ಬಳಸುವುದು ಉತ್ತಮವಾಗಿದೆ.

%d bloggers like this: