ಮುಕ್ತಾಯಗೊಳ್ಳುತ್ತಿದೆ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಾವ್ಯಾಂಜಲಿ. ಹಳೆ ಹೆಸರಿನ ಹೊಸ ಕಥೆಯೊಂದಿಗೆ ಬಂದ ಈ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಉದಯ ವಾಹಿನಿಯ ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿರುವ ಕಾವ್ಯಾಂಜಲಿ ಧಾರಾವಾಹಿ, ತನ್ನ ಕಥೆಯಲ್ಲಿನ ಸಾಕಷ್ಟು ತಿರುವುಗಳಿಂದ ಜನರನ್ನು ರಂಜಿಸುತ್ತಾ ಬಂದಿದೆ. ಈ ಧಾರವಾಹಿ ಕಥೆಗೆ ಹೊಸ ಹೊಸ ತಿರುವುಗಳನ್ನು ನೀಡಿ ಅತಿ ಹೆಚ್ಚು ಮೆಚ್ಚುಗೆಯನ್ನು ಗಳಿಸಿ ಜನಪ್ರಿಯಗೊಂಡಿತ್ತು. ಅತಿ ಹೆಚ್ಚು ಟಿಆರ್ಪಿ ಗಳಿಸುತ್ತಿದ್ದ ಈ ಧಾರಾವಾಹಿ ತನ್ನ ಜನಪ್ರಿಯತೆಯ ನಡುವೆಯೂ ಮುಕ್ತಾಯಗೊಳ್ಳುತ್ತಿದೆ. ತುಂಬು ಪರಿವಾರದ ಕಾವ್ಯಾಂಜಲಿ ಧಾರಾವಾಹಿ ಮುಕ್ತಾಯ ಗೊಳ್ಳುತ್ತಿರುವುದು ಈ ಧಾರಾವಾಹಿ ವೀಕ್ಷಕರಿಗೆ ದೊಡ್ಡ ಶಾಕ್ ನೀಡಿದೆ. ಹೌದು ವಿಶಿಷ್ಟವಾಗಿ ಪ್ರಸಾರವಾಗುತ್ತಿದ್ದ ಅಪ್ಪಟ ಕನ್ನಡ ಸೊಗಡಿನ ಧಾರವಾಹಿ ಕಾವ್ಯಾಂಜಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸುತ್ತಿದೆ.

ಸುಮಾರು ಎರಡು ವರ್ಷಗಳಿಂದ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರಾವಾಹಿಯು, ಉದಯ ವಾಹಿನಿಯ ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರ್ಶ ಹೆಗಡೆ ನಿರ್ದೇಶಿಸಿರುವ ಈ ಧಾರಾವಾಹಿಯಲ್ಲಿ ಇಬ್ಬರು ಸಹೋದರಿಯರ ನಡುವಿನ ಪ್ರೀತಿ, ಬಾಂಧವ್ಯದ ನಡುವೆ ಕಥೆ ಹೆಣೆಯಲಾಗಿತ್ತು. ಹೆಸರಿನಂತೆಯೇ ಸೊಗಸಾಗಿ ಕಥೆ ಮೂಡಿಬರುತ್ತಿತ್ತು. ಈ ಧಾರಾವಾಹಿಯ ಇನ್ನೊಂದು ವಿಶೇಷತೆ ಏನೆಂದರೆ ಇದು ಒಟ್ಟು ಐದು ಭಾಷೆಗಳಿಗೆ ರೀಮೇಕ್ ಆಗಿದೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂಜಲಿ ಪಾತ್ರಧಾರಿಯು ಇದುವರೆಗೂ ಮೂರು ಬಾರಿ ಬದಲಾಗಿದ್ದರೂ ಕೂಡ ತನ್ನ ಜನಪ್ರಿಯತೆಯನ್ನು ಹಾಗೆಯೇ ಈ ಧಾರವಾಹಿ ಉಳಿಸಿಕೊಂಡು ಬಂದಿದ್ದು ವಿಶೇಷ. ಧಾರಾವಾಹಿಯಲ್ಲಿ ಹಿರಿಯ ನಟಿ ಅಭಿನಯಾ, ನಟಿ ಮರೀನಾ ತಾರಾ, ವಿದ್ಯಾಶ್ರೀ ಜಯರಾಮ್, ದರ್ಶಕ್ ಗೌಡ, ಪವನ್ ರವೀಂದ್ರ ಹಾಗೂ ಅಕ್ಷತಾ ದೇಶಪಾಂಡೆ ಮುಂತಾದ ತಾರಾಗಣವಿದೆ.

ಈ ಧಾರಾವಾಹಿಯ ಮುಖ್ಯಪಾತ್ರವಾದ ಅಂಜಲಿ ಪಾತ್ರಕ್ಕೆ ಇದುವರೆಗೆ ಸುಶ್ಮಿತಾ ಭಟ್, ದೀಪಾ ಹಿರೇಮಠ್ ಮತ್ತು ಅಕ್ಷತಾ ದೇಶಪಾಂಡೆ ಈ ಮೂವರು ನಟಿಯರು ಬದಲಾದರೂ ಕೂಡ ಪ್ರಾರಂಭದಿಂದ ಇಂದಿನ ವರೆಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವುದು ಕಾವ್ಯಾಂಜಲಿ ಧಾರಾವಾಹಿ ಮತ್ತೊಂದು ವಿಶೇಷತೆ. ರೇಟಿಂಗ್ ನಲ್ಲಿ ಏರಿಳಿತ ಕಂಡರೂ ಕೂಡ ಕಾವ್ಯಾಂಜಲಿ ಧಾರಾವಾಹಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿತ್ತು. ಜನಪ್ರಿಯ ಧಾರಾವಾಹಿ ಟಿಆರ್ಪಿ ಕಾರಣದಿಂದ ಮುಕ್ತಾಯಗೊಳ್ಳುತ್ತಿದೆ ಎಂಬುವುದು ಆಶ್ಚರ್ಯಕರ ಸಂಗತಿ. ಈಗ ಕಾವ್ಯಾಂಜಲಿ ಧಾರಾವಾಹಿ ವೀಕ್ಷಕರಿಗೆ ನಿರಾಸೆಯುಂಟಾಗಿದೆ. ಈಗಾಗಲೇ ಧಾರಾವಾಹಿಯ ಅಂತಿಮ ದೃಶ್ಯಗಳ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

%d bloggers like this: