ಮುಖ್ಯ ವಿಷಯ, ಕೊರೊನ ಬಂದು ಹೋದ ಬಳಿಕ ನೀವು ಮಾಡಲೇಬೇಕಾದ ಕೆಲಸಗಳು

ಕೊರೋನ ವೈರಸ್ ನಿಂದ ರಕ್ಷಣೆ ಮಾಡಿಕೊಳ್ಳಲು ನಮಗೆ ವಿವಿಧ ರೀತಿಯ ಉಪಾಯಗಳು ಮತ್ತು ಅಸ್ತ್ರಗಳು ನಮಗೆ ತಿಳಿದಿವೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಭೌತಿಕ ಅಂತರ ಹೀಗೆ ಇಷ್ಟೆಲ್ಲಾ ಇದ್ದು ಕೂಡ ಅಜಾಗರೂಕತೆಯಿಂದಲೋ ಏನೋ ಕೊರೋನ ನಮ್ಮ ಭಾದಿಸಿಬಿಟ್ಟರೆ ಅದರಿಂದ ಪಾರಾಗಲು ಮನೌಷಧಿ ಉಪಚಾರ, ಆಸ್ಪತ್ರೆಗಳಲ್ಲಿ ವೈದ್ಯರು ನೀಡೋ ಮಾತ್ರೆಯ ಜೊತೆಗೆ ಒಂದಷ್ಟು ದಿವಸ ಐಸೋಲೇಷನ್ ಅಲ್ಲಿ ಇದ್ದು ಹೇಗೋ ಆರೋಗ್ಯ ಸುಧಾರಿಸಿದಾಗ ತದನಂತರ ನಾವು ಯಾವರೀತಿಯಲ್ಲಿ ಆಹಾರ ಕ್ರಮ ಪಾಲಿಸಬೇಕು, ಏನೆಲ್ಲಾ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಹೆಚ್ಚು ಜನ ತಿಳಿದಿರುವುದಿಲ್ಲ. ನಿಮಗೆ ಕೊರೋನ ಬಂದು ತದನಂತರ ನೀವೇನಾದರು ಚೇತರಿಸಿಕೊಂಡಿದ್ದಲ್ಲಿ ಕೊಂಚ ಎಚ್ಚರವಾಗಿರಬೇಕು. ನಿಮಗೆ ಧೂಮಪಾನ, ಮಧ್ಯಪಾನ ಮಾಡುವ ಹವ್ಯಾಸವಿದ್ದರೆ ತಕ್ಷಣ ಅದನ್ನು ಸಾಧ್ಯವಾದಷ್ಟು ನಿಯಂತ್ರಿಸಿ ಅದರ ದಾಸ್ಯದಿಂದ ಮುಕ್ತವಾದರೆ ಇನ್ನೂ ಒಳಿತು. ಉಸಿರಾಟ ಸಮಸ್ಯೆ ಇದ್ದವರು ಈ ಚಟದಿಂದ ಹೊರಬರಲೇಬೇಕು.

ಇದರ ಜೊತೆಗೆ ಒಂದಷ್ಟು ಆಹಾರ ಕ್ರಮದಲ್ಲಿ ಬದಲಾವಣೆ ಅತ್ಯಗತ್ಯ ಬೆಳಿಗ್ಗೆ ಎಂಟು ಗಂಟೆ ಮುಂಚೆ ಸೂರ್ಯನ ಕಿರಣಗಳು ನಿಮ್ಮ ದೇಹವನ್ನು ಸ್ಪರ್ಶಿಸುವಂತೆ ಒಂದಷ್ಟು ಸಮಯ ಬಿಸಿಲಿನಲ್ಲಿ ಕಾಯಿರಿ ಮತ್ತೆ ಇಳಿ ಸಂಜೆಯಲ್ಲಿ ಅಂದರೆ ಸುಮಾರು ಐದು ಗಂಟೆ ನಂತರ ಬರುವ ಬಿಸಿಲಿಗೆ ಮೈಯೊಡ್ಡುವುದಕ್ಕೆ ರೂಢಿ ಮಾಡಿಕೊಳ್ಳಿ. ಬಿಸಿಲು ಕಾಯುವುದರಿಂದ ನಾವು ಸೇವಿಸುವ ಆಹಾರದಲ್ಲಿ ಕ್ಯಾಲ್ಸಿಯಂ ಇರುತ್ತದೆ, ಈ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆ ನಡೆಯುವುದೇ ಬಿಸಿಲು ಕಾದಾಗ. ಇನ್ನು ನೀವು ಸೇವಿಸುವ ಆಹಾರದಲ್ಲಿ ಮೀನು ಕಡ್ಡಾಯವಾಗಿರಿಸಿ ಕಾರಣ ಮೀನಿನಲ್ಲಿ ವಿಟಮಿನ್ ಡಿ ಇರುತ್ತದೆ. ಜೊತೆಗೆ ಹಾಲಿನ ಉತ್ಪನ್ನ ಗಳಾದ ಚೀಸ್, ಹಾಲು, ಮೊಸರನ್ನು ಕ್ರಮಬದ್ದವಾಗಿ ಸೇವಿಸುತ್ತಾ ಸರಿಯಾದ ಸಮಯಕ್ಕೆ ನಿಯಮಬದ್ದವಾಗಿ ಊಟ ಮಾಡಿ. ಹಾಲನ್ನು ಸೇವಿಸುವಾಗ ಅದಕ್ಕೆ ಒಂದು ಚಿಟಿಕಿ ಅರಿಶಿನ ಮಿಶ್ರಣಮಾಡಿ ಸೇವಿಸಿ, ಹಾಗೆ ತರಕಾರಿಯನ್ನು ಎತೇಚ್ಛವಾಗಿ ಸೇವಿಸಿದರೆ ದೇಹದ ಆರೋಗ್ಯದ ಜೊತೆಗೆ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

%d bloggers like this: