ಮುಖ್ಯಮಂತ್ರಿ ಯೆಡಿಯೂರಪ್ಪ ಅವರಿಗೆ ವಿಶೇಷ ಮನವಿ ಮಾಡಿದ ನಟ ಅನಿರುದ್ಧ್

ಚಿತ್ರ ನಟ ಅನಿರುದ್ದ್ ತೆರೆದ ಕಾಲುವೆ ಮುಚ್ಚಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ. ಜೊತೆ ಜೊತೆ ಧಾರಾವಾಹಿ ಖ್ಯಾತಿಯ ನಟ ಅನಿರುದ್ದ್ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಾಕ ಜಾಲತಾಣದ ಮೂಲಕ ಹಲವಾರು ವಿಚಾರಗಳು ಮತ್ತು ಪ್ರದೇಶಗಳ ಕುಂದುಕೊರತೆ, ಸಮಸ್ಯೆಗಳ ಬಗ್ಗೆ ಮಾತಾನಾಡುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಅನಿರುದ್ದ್ ಅವರು ಕರ್ನಾಟಕ ರಾಜ್ಯದಲ್ಲಿ ಇರುವ ತೆರೆದ ಕಾಲುವೆಗಳನ್ನು ಮುಚ್ಚಿ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಇದರಿದ ಗುಜರಾತ್ ರಾಜ್ಯದಲ್ಲಿ ಮಾಡಿರುವ ಸೌರಫಲಕ ಅಳವಡಿಕೆ ಮಾಡಿಕೊಂಡು ವರ್ಟಿಕಲ್ ವಿಧಾನದಲ್ಲಿ ಕೃಷಿಯ ಜೊತೆಗೆ ವಿದ್ಯುತ್ ಉತ್ಪಾದನೆ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.

ಹೌದು ರಾಜ್ಯದಲ್ಲಿರುವ ಹಲವಾರು ತೆರೆದ ಕಾಲುವೆಗಳನ್ನು ಮುಚ್ಚಿ ಸಮತಟ್ಟಾದ ಭೂಮಿಯನ್ನಾಗಿ ಪರಿವರ್ತನೆ ಮಾಡಿ ಅದಕ್ಕೆ ಎರಡೂ ಬದಿಯಲ್ಲಿ ತಡೆಯಾಗಿ ಪೆನ್ಸಿಂಗ್ ರೂಪಕೊಟ್ಟು ಸೌರ ಫಲಕಗಳನ್ನು ಅಳವಡಿಸುವುದರಿಂದ ಒಂದೆಡೆ ವಿದ್ಯುತ್ ಉತ್ಪಾದನೆ ಕೂಡ ಆಗುತ್ತದೆ. ಮತ್ತೊಂದೆಡೆ ರೈತರಿಗೆ ಅನುಕೂಲವಾಗಿ ಅದೇ ತೆರೆದ ಕಾಲುವೆಯನ್ನು ಸಮತಟ್ಟಾಗಿಸಿ ಭೂಮಿಯಲ್ಲಿ ವರ್ಟಿಕಲ್ ರೀತಿಯಾಗಿ ಕೃಷಿ ಬೆಳೆಗಳನ್ನು ಬೆಳೆಯಬಹುದು, ಇದರ ಬಗ್ಗೆ ರಾಜ್ಯ ಸರ್ಕಾರ ಈ ಗುಜರಾತ್ ನಲ್ಲಿ ಮಾಡಿದ ಪ್ರಯೋಗವನ್ನು ಪರಾಮರ್ಶಿಸಿ ರಾಜ್ಯದಲ್ಲಿಯು ಸಹ ಈ ರೀತಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಈ ಯೋಜನೆ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ನಟ ಅನಿರುದ್ದ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

%d bloggers like this: