ಮುಂಬೈ ಇಂಡಿಯನ್ಸ್ ತಂಡದ ಪಾಲಾದ ಆರ್ಸಿಬಿಯ ಪ್ರಮುಖ ಆಟಗಾರ

ಐಪಿಎಲ್ ಎಂದರೆ ಸಾಕು ಅದು ಮನೋರಂಜನೆಯ ಮಹಾಪೂರ ಎಂಬುದು ಎಲ್ಲರಿಗೂ ಗೊತ್ತೆ ಇದೆ. 13ಆವೃತ್ತಿ ಗಳಿಂದಲೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿ ಕೊಂಡು ಬರುತ್ತಿರುವ ಈ ಚುಟುಕು ಕ್ರಿಕೆಟ್ ಕದನ ಕ್ರಿಕೆಟ್ ಅನ್ನು ಇಷ್ಟಪಡದವರಿಗು ಸಹ ಇಷ್ಟ ಪಡುವಂತೆ ಮಾಡಿದೆ. ಇತ್ತೀಚಿಗೆ ಕೋರೋಣದ ಎಲ್ಲಾ ಆತಂಕಗಳನ್ನು ಮೆಟ್ಟಿನಿಂತು ಐಪಿಎಲ್ನ 13ನೇ ಆವೃತ್ತಿ ದುಬೈ ದೇಶದಲ್ಲಿ ಮುಕ್ತಾಯಕಂಡಿತು. ಅದರಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಬಾರಿ ಫೈನಲ್ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ 5ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈಗ ನಾವು ಹೇಳಹೊರಟಿರುವ ವಿಷಯವೇನೆಂದರೆ ಕಳೆದ ಮೂರು ಆವೃತ್ತಿಗಳಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಭಾರತ ಕ್ರಿಕೆಟ್ ತಂಡದ ಹಿರಿಯ ಬ್ಯಾಟ್ಸಮನ್ ಮತ್ತು ವಿಕೆಟ್ ಕೀಪರ್ ಆದಂತಹ ಪಾರ್ಥಿವ್ ಪಟೇಲ್ ಅವರು ದಿಡೀರನೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಟವಾಡಿದ್ದ ಪಾರ್ಥಿವ್ ಇದೀಗ ಆರ್ಸಿಬಿಗೆ ಗುಡ್ ಬೈ ಹೇಳಿ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬರೋಬ್ಬರಿ ಸತತ 18ವರ್ಷಗಳಿಂದ ಕ್ರಿಕೆಟಿಗ ಆಗಿ ಸೇವೆಸಲ್ಲಿಸುತ್ತಿರುವ ಪಾರ್ಥೀವ ಅವರಿಗೆ ಕ್ರಿಕೆಟ್ನ ಅದ್ಭುತ ಜ್ಞಾನವಿದೆ. ಹೀಗಾಗಿ ಮುಂಬರುವ ವೃತ್ತಿಗಾಗಿ ಉತ್ತಮ ತಂಡವನ್ನು ಕಟ್ಟಲು ನೆರವಾಗುವ ಉದ್ದೇಶದಿಂದ ಪಾರ್ಥಿವ್ ಅವರು ಬಹಳ ಸಹಾಯ ಮಾಡಲಿದ್ದಾರೆ ಎಂದು ಇತ್ತೀಚಿಗೆ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮಾತನಾಡಿದರು.

ಉತ್ತಮ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಪಾರ್ಥಿವ್ ಪಟೇಲ್ ಅವರಿಗೆ 13ನೆಯ ಸೀಸನ್ನಲ್ಲಿ ಆರ್ಸಿಬಿ ತಂಡ ಯಾವುದು ಅವಕಾಶಗಳನ್ನು ನೀಡಲಿಲ್ಲ ಅದಕ್ಕೆ ಮುಖ್ಯ ಕಾರಣ ಕೆಲವು ಬಂದಿಗಳಲ್ಲಿ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತರೆ ಮತ್ತೆ ಕೆಲವು ಪಂದ್ಯಗಳಲ್ಲಿ ಫಿಲಿಪ್ಸ್ ಎಂಬ ಉದಯೋನ್ಮುಖ ಆಟಗಾರ ನಿರ್ವಹಿಸಿದನು. ಈ ಹಿಂದೆಯೂ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಪಾರ್ಥಿವ್ ಪಟೇಲ್ 2015 ಹಾಗೂ 2017ರಲ್ಲಿ ಮುಂಬೈ ತಂಡ ಪ್ರಶಸ್ತಿಯನ್ನು ಮುತ್ತಿದಾಗ ಆತಂಡದ ಸದಸ್ಯರು ಭಾಗವಹಿಸಿದ್ದರು ಪಾರ್ಥಿವ್ ಪಟೇಲ್. ಸೇರುತ್ತಿರುವುದು ತುಂಬಾ ಖುಷಿ ನೀಡುತ್ತಿದೆ ಮತ್ತು ತಂಡ ಹಿಂದೆ ಚಾಂಪಿಯನ್ ಆಗಿದ್ದಾಗ ಅದರ ಭಾಗವಾಗಿತದ್ದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.

%d bloggers like this: