ಮುಂದಿನ ಸೀಸನ್ನಿಗೆ RCB ತಂಡದಿಂದ ಈ 4 ಆಟಗಾರರನ್ನು ಕೈ ಬಿಡುವುದು ಬಹುತೇಕ ಗ್ಯಾರಂಟಿ

ಕಳೆದ ಹದಿಮೂರು ವರ್ಷಗಳಿಂದಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಈ ಕೋರೋಣ ಹೆಮ್ಮಾರಿ ಆತಂಕದ ನಡುವೆಯೂ 2020ರ ಐಪಿಎಲ್ ಸೀಸನ್ ಅನ್ನು ಅರಬ್ ದೇಶದಲ್ಲಿ ವ್ಯವಸ್ಥಿತವಾಗಿ ನಡೆಸಲಾಯಿತು. 2020ರ ಐಪಿಎಲ್ ಅನ್ನು ಉತ್ತಮವಾಗಿಯೇ ಆರಂಭಿಸಿದ್ದ ನಮ್ಮ ಆರ್ಸಿಬಿ ತಂಡ ಅಂತಿಮ ಪಂದ್ಯಗಳಲ್ಲಿ ಸತತವಾಗಿ ಸೋಲನ್ನು ಅನುಭವಿಸಿ ಕೊನೆಯದಾಗಿ ಕ್ವಾಲಿಫೈಯರ್ಟು ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಈ ವರ್ಷವೂ ನಿರಾಸೆ ಮೂಡಿಸಿತು. ಇದೇ ನಡುವೆ ಮುಂದಿನ 14ನೇ ಸೀಸನ್ ಇದೇ ಮಾರ್ಚ್ ಎಪ್ರಿಲ್ ನಲ್ಲಿ ಭಾರತದಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ. ಹೀಗಾಗಿ ಇರುವ ಅಲ್ಪಾವಧಿಯಲ್ಲಿ ಪ್ರಬಲ ತಂಡವನ್ನು ಕಟ್ಟಲು ಆರ್ಸಿಬಿ ಫ್ರಾಂಚೈಸ್ ಯೋಜನೆ ರೂಪಿಸುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕವನ್ನು ಬಲಿಷ್ಠ ಮಾಡಬೇಕಾಗಿದೆ ಎಂದು ಆರ್ಸಿಬಿ ತಂಡದ ನಿರ್ದೇಶಕರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಎಬಿಡಿ ವಿಲಿಯರ್ಸ್ ಅಂತಹ ವಿಶ್ವಶ್ರೇಷ್ಠ ಆಟಗಾರರಿದ್ದರು ಕೂಡ ಅವರಿಗೆ ಉಳಿದ ಆಟಗಾರರ ಸರಿಯಾದ ಬೆಂಬಲ ಸಿಗದೇ ಆರ್ಸಿಬಿ ಸೋಲನ್ನು ಅನುಭವಿಸುತ್ತಿದೆ. ಮೊದಲನೆಯದಾಗಿ ಬಲಗೈ ವೇಗದ ಬೌಲರ್ ಉಮೇಶ್ ಯಾದವ್, ಈ ಸೀಸನ್ ನಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಇವರು ಆಡಿದ್ದು ಆದರೆ ನೀಡಿದ್ದು ಬರೋಬ್ಬರಿ 83 ರನ್. ಸಾಕಷ್ಟು ಅನುಭವ ಇದ್ದರೂ ಕೂಡ ಉಮೇಶ್ ಅವರಿಂದ ಉತ್ತಮ ಪ್ರದರ್ಶನ ಮೂಡಿಬರುತ್ತಿಲ್ಲ ಹೀಗಾಗಿ ಉಮೇಶ್ ಅವರನ್ನು 2021ರ ಐಪಿಎಲ್ ಮುಂಚಿತವಾಗಿಯೇ ಕೈ ಬಿಡುವ ಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಎರಡನೆಯದಾಗಿ ಡೇಲ್ ಸ್ಟೇನ್, ಒಂದು ಕಾಲದಲ್ಲಿ ವಿಶ್ವದ ಎಲ್ಲರ ಬ್ಯಾಟ್ಸ್ಮನ್ಗಳಿಗೆ ಭಯ ಹುಟ್ಟಿಸುತ್ತಿದ್ದ ಈ ಸ್ಟಾರ್ ಆಟಗಾರ ಈಗ ತಮ್ಮ ಲಯವನ್ನೇ ಕಳೆದುಕೊಂಡಿದ್ದಾರೆ. ವಿಕೆಟ್ ಅಷ್ಟೇ ಅಲ್ಲ ಅವರಿಂದ ಒಳ್ಳೆಯ ಎಕಾನಮಿ ರೇಟ್ ಕೂಡ ನಿರ್ವಹಿಸಲಾಗುತ್ತಿಲ್ಲ. ಹೀಗಾಗಿ ಅವರನ್ನು ಕೂಡ ತಂಡದಿಂದ ಕೈ ಬಿಡುವ ಉದ್ದೇಶವಿದೆ ಎನ್ನಲಾಗುತ್ತಿದೆ.

ಮೂರನೆಯದಾಗಿ ಪಾರ್ಥಿವ್ ಪಟೇಲ್. ಭಾರತ ತಂಡದ ಬಹಳ ಅನುಭವಿ ಆಟಗಾರರಾದ ಆರಂಭಿಕ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಅವರಿಗೆ ಈ ಬಾರಿಯ ಸೀಸನ್ ನಲ್ಲಿ ಆಡುವ ಅವಕಾಶ ಸಿಗಲಿಲ್ಲ, ಅವರಿಗೆ ಬದಲಿಗೆ ಎಬಿ ಡಿವಿಲಿಯರ್ಸ್ ಅವರೇ ಬಹುತೇಕ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಿದರು. ಈ ಸೀಸನ್ ನಲ್ಲಿ ಅವರಿಗೆ ಅವಕಾಶ ಕೊಡದೆ ಇರುವುದನ್ನು ಗಮನಿಸಿದರೆ 2021ರ ಐಪಿಎಲ್ ಪಂದ್ಯಾವಳಿಗಳಿಗೆ ಆರ್ಸಿಬಿ ತಂಡ ಅವರನ್ನು ಕೈಬಿಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ. ನಾಲ್ಕನೆಯದಾಗಿ ಪವನ್ ನೇಗಿ, ಈ ಎಡಗೈ ಆಲ್-ರೌಂಡರ್ ಪವನ್ ನೇಗಿ ಅವರಿಗೆ ಕೂಡ ವಿರಾಟ್ ಕೊಹ್ಲಿ ಈ ಸೀಸನ್ ನಲ್ಲಿ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಕೊಡಲಿಲ್ಲ. ತನಗೆ ಸಿಕ್ಕ ಅವಕಾಶಗಳಲ್ಲಿ ಸ್ವಲ್ಪಮಟ್ಟಿನ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ತಂಡದಲ್ಲಿ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಉತ್ತಮವಾಗಿ ಬೌಲಿಂಗ್ ನಿರ್ವಹಣೆ ಮಾಡುತ್ತಿರುವುದರಿಂದ ನೇಗಿ ಅವರಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮುಂದಿನ ಹರಾಜಿನ ವೇಳೆಗೆ ಅವರನ್ನು ಕೂಡ ಫ್ರಾಂಚೈಸಿ ಕೈಬಿಡುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಸೀಸನ್ನ ಅನ್ನುವಷ್ಟರಲ್ಲಿ ಬಲಿಷ್ಠ ತಂಡ ಕಟ್ಟಲು ಫ್ರಾಂಚೈಸ್ ಮುಂದಾಗಿದೆ.

%d bloggers like this: