ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಆಗಲಿದೆ ವೋಕ್ಸ್‌ವ್ಯಾಗನ್‌ ಅವರ ಬಹು ನಿರೀಕ್ಷಿತ ಕಾರು

ವೈಶಿಷ್ಟ್ಯತೆ ಕಾರುಗಳಲ್ಲಿ ಒಂದಾಗಿರುವ ಫೋಕ್ಸ್ ವ್ಯಾಗನ್ ಕಾರು ಸಂಸ್ಥೆಯಿಂದ ಮಾರ್ಚ್ ತಿಂಗಳಿನಲ್ಲಿ ಹೊಸ ಮಾದರಿಯ ಕಾರು ಲಾಂಚ್ ಆಗಲಿದೆ. ಇದು ಕಾರು ಪ್ರಿಯರಿಗೆ ಸಂತಸದ ವಿಚಾರವಾಗಿದೆ. ಹೌದು ಕಳೆದ ಕೆಲವು ತಿಂಗಳಿನಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಹೊಸ ದ್ವಿಚಕ್ರ ಮತ್ತು ಕಾರುಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿವೆ. ಅದರಂತೆ ಹೊಸದಾಗಿ ಲಾಂಚ್ ಆಗುತ್ತಿರುವ ವಾಹನಗಳಿಗೆ ಉತ್ತಮವಾದ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಈ ಸ್ಪರ್ಧೆ ಪೈಪೋಟಿ ಎಲ್ಲಾ ಕ್ಷೇತ್ರದಲ್ಲಿಯೂ ಹೆಚ್ಚಾಗುತ್ತಿದೆ. ಅದೇ ರೀತಿಯಾಗಿ ಆಟೋ ಮೊಬೈಲ್ ಕ್ಷೇತ್ರ ಕಾರು ತಯಾರಕಾ ಕಂಪನಿಗಳು ಕೂಡ ತಮ್ಮ ಪ್ರಬಲ ಪೈಪೋಟಿ ಕಂಪನಿಗಳ ಕಾರುಗಳಿಗಿಂತ ತಮ್ಮ ಕಂಪನಿಯ ಕಾರುಗಳು ಬಹಳ ವಿಶಿಷ್ಟವಾಗಿ ವಿಭಿನ್ನವಾಗಿ ಇರಬೇಕು.

ಗ್ರಾಹಕರಿಗೆ ಕಾರು ಚಲಾಯಿಸುವವರ ಸ್ನೇಹಿಯಾಗಿ ರಬೇಕು ಎಂದು ಭಾರಿ ಉತ್ಸಾಹದಿಂದಲೇ ಕಾರು ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಅದರಂತೆ ಪ್ರತಿಷ್ಟಿತ ಕಾರು ಸಂಸ್ಥೆಗಳಲ್ಲಿ ಒಂದಾದ ಫೋಕ್ಸ್ ವ್ಯಾಗನ್ ಇಂಡಿಯಾ ಕಂಪನಿ ಕೂಡ ಮಿಡ್ ಸೈಜ್ ಸೆಡಾನ್ ಕಾರನ್ನ ಭಾರತದಲ್ಲಿ ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದೆ. ಹೌದು ಫೋಕ್ಸ್ ವ್ಯಾಗನ್ ಮಿಡ್ ಸೈಜ್ ಸೆಡಾನ್ ಕಾರು ಮಾರ್ಚ್ 8ರಂದು ಲಾಂಚ್ ಆಗಲಿದೆಯಂತೆ. ಇತ್ತೀಚೆಗೆ ತಾನೇ ಫೋಕ್ಸ್ ವ್ಯಾಗನ್ ವಿರ್ಟಸ್ ಕಾರಿನ ಟಾಪ್ ಎಂಡ್ ಮಾದರಿಯ ಜಿಟಿ ವೇರಿಯೆಂಟ್ ಔಟ್ ಲುಕ್ ಟೀಸರ್ ಲಾಂಚ್ ಆಗಲಿದೆ. ಈ ಫೋಕ್ಸ್ ವ್ಯಾಗನ್ ವಿರ್ಟಸ್ ಕಾರು ಇದೇ ಮೇ ತಿಂಗಳನಲ್ಲಿ ಹೊರ ದೇಶದಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದೆ. ಈ ಕಾರಿನ ಹೊರ ಭಾಗವು ನೋಡಲು ಅತ್ಯಾಕರ್ಷಕವಾಗಿದ್ದು.

ಎಲ್.ಇ.ಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಎಲ್ ಆಕಾರದ ಡಿ.ಆರ್.ಎಲ್ ಗಳೊಂದಿಗೆ ಈ ಕಾರು ಎಂಕ್ಯೂಬಿ ಪ್ಲಾಟ್ ಫಾರ್ಮ್ ಆಧಾರಿತವಾಗಿ ತಯಾರಿಸ್ಪಲ್ಟಿದೆ. ಇನ್ನು ಈ ಫೋಕ್ಸ್ ವ್ಯಾಗನ್ ವಿರ್ಟಸ್ ಅಡ್ವಾನ್ಸ್ಡ್ ಕಾರು ವಿ ಡಬ್ಲ್ಯೂ1.0 ಮತ್ತು 1.5 ಲೀಟರಿನ ಇಂಜಿನ್ ಆಯ್ಕೆಗಳನ್ನು ಹೊಂದಿದ್ದು, 5500 ಆರ್.ಪಿ.ಎಂ ನಲ್ಲಿ 108 ಬಿ.ಎಚ್.ಪಿ ಪವರ್ ಮತ್ತು 1750 ಆರ್ಪಿಎಂ ನಲ್ಲಿ 175 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಅದರಂತೆ ಇದೇ ಮಾರ್ಚ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ವಿರ್ಟಸ್ ಕಾಂಪ್ಯಾಕ್ಟ್ ಕಾರು ಆಕರ್ಷಕ ವಿನ್ಯಾಸವೊಂದಿದ್ದು, ಇದರಲ್ಲಿ ಇನ್ಫೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಟೂಲ್ಸ್, ವೈರ್ ಲೆಸ್ ಫೋನ್ ಚಾರ್ಜರ್, ಡ್ಯೂಯಲ್ ಏರ್ ಬ್ಯಾಗ್ ಸೇರಿದಂತೆ ಇನ್ನಿತರ ಅಡ್ವಾನ್ಸ್ಡ್ ಫೀಚರ್ ಗಳನ್ನೊಳಗೊಂಡಿದೆಯಂತೆ. ಮೂಲಗಳ ಪ್ರಕಾರ ಇದರ ಬೆಲೆಯೂ ಹತ್ತು ಲಕ್ಷ ಇರಲಿದೆ ಎಂದು ತಿಳಿದು ಬಂದಿದೆ.

%d bloggers like this: