ಮುಂದಿನ ವರ್ಷ ಈ ರಾಶಿಯವರಿಗೆ ಸಾಕಷ್ಟು ಅದೃಷ್ಟ ಹಾಗು ಕಹಿ ಅನುಭವಗಳು

ಹೊಸ ವರ್ಷ 2021ಕ್ಕೆ ಇನ್ನು ಕೆಲವು ದಿನಗಳು ಬಾಕಿಯಿವೆ, 2020 ಎಲ್ಲರ ಜೀವನದಲ್ಲಿ ಕಷ್ಟಗಳ ಕಾರ್ಮೋಡ ಹಲವರ ಬದುಕಲ್ಲಿ ಕತ್ತಲೆಯನ್ನು ಮೂಡಿಸಿತ್ತು. ಅವರವರ ಜಾತಕಫಲ, ರಾಶಿಚಕ್ರಗಳ ಅನುಗುಣವಾಗಿ ಅವರ ಭವಿಷ್ಯ ನಿರ್ಧರಿತವಾಗಿರುತ್ತದೆ. ರಾಶಿ ಚಕ್ರಗಳಲ್ಲಿ ಪ್ರಥಮ ರಾಶಿಯಾಗಿರುವ ಮೇಷ ರಾಶಿಯವರ ಜೀವನ ಮುಂದಿನ ವರ್ಷ ಹೇಗಿದೆ ಎಂಬುದನ್ನು ತಿಳಿಯುವುದಾದರೆ. 2021ಕ್ಕೆ ಮೇಷ ರಾಶಿಯವರಿಗೆ ಒಂದಷ್ಟು ಒಂದಷ್ಟು ಶುಭ ಮತ್ತೊಂದಷ್ಟು ಕಹಿ ಅನುಭವ ಆಗುವ ಸಾಧ್ಯತೆ ಕಂಡು ಬರುತ್ತದೆ. ಇವರಿಗೆ ವೃತ್ತಿ ಜೀವನದಲ್ಲಿ ಉತ್ತಮ ವಾಗಿದ್ದರೂ ಸಹ ಹಣಕಾಸಿನ ವಿಚಾರದಲ್ಲಿ ಭಾರಿ ತೊಂದರೆ ಅನುಭವಿಸಬಹುದು. ನಿಮಗೆ ಮೇಲಾಧಿಕಾರಿಗಳಿಂದ ಕಿರುಕುಳ ಹೆಚ್ಚಾಗುವ ಸಂಭವವಿದೆ.

ಮೇಷ ರಾಶಿಯವರು 2021ರ ಫೆಬ್ರವರಿಯಿಂದ ಮಾರ್ಚ್ ಮದ್ಯದ ವರೆಗೆ ಆದಷ್ಟು ಎಚ್ಚರದಿಂದ ಇರಬೇಕು, ನಿಮ್ಮ ಜೀವನದ ಮೇಲೆ ಶನಿಗ್ರಹ ಮತ್ತು ಮಂಗಳ ಗ್ರಹವು ನೇರ ಫ್ರಭಾವ ಬೀರುವುದರಿಂದ ನಿಮ್ಮ ಕುಟುಂಬದಿಂದ ನಿಮಗೆ ಸಹಕಾರ ಸಿಗುವುದಿಲ್ಲ. ಇನ್ನು ನಿಮ್ಮ ಶ್ರಮದಿಂದ ವ್ಯಾಪಾರ ಲಾಭದಾಯಕವಾಗಿ ನಡೆಯಲಿದೆ. ಜೊತೆಗೆ ವಿದೇಶಿ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಧನಲಾಭ ಆಗುತ್ತದೆ. ಆರೋಗ್ಯದ ವಿಚಾರವಾಗಿ ಕುಟುಂಬದ ಸದಸ್ಯರಲ್ಲಿ ಅನಾರೋಗ್ಯ ಪೀಡಿತರು ಯಾರಾದರು ಇದ್ದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಆದರೆ ನಿಮ್ಮ ಮಕ್ಕಳ ವಿಧ್ಯಾಭ್ಯಾಸದಲ್ಲಿ ಹೆಚ್ಚು ಗಮನ ವಹಿಸಬೇಕು.

ಇಲ್ಲವಾದಲ್ಲಿ ವಿಧ್ಯಾ ನಾಶ ಆಗುವ ಸಾಧ್ಯತೆ ಹೆಚ್ಚಾಗಿದೆ, ಇನ್ನು ಅವಿವಾಹಿತರಿಗೆ ಮದುವೆ ಆಗುವ ಯೋಗವಿದೆ.ಮುಂದಿನ ವರ್ಷ ಮದುವೆ ಆಗಲು ನಿಮಗೆ ಸೂಕ್ತ ಸಮಯವಾಗಿದೆ. ನಿಮ್ಮ ಸಂಗಾತಿಯು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಒಟ್ಟಾರೆಯಾಗಿ 2021ಮೇಷ ರಾಶಿಯವರಿಗೆ ಅನುಕೂಲ ಮತ್ತು ಅನಾನುಕೂವ ಎರಡೂ ಇದ್ದು ಮಿಶ್ರಫಲ ದೊರೆಯುತ್ತದೆ ಮತ್ತು ಸೆಪ್ಟೆಂಬರ್ ಅಂತ್ಯದಲ್ಲಿ ಯಾವುದಾದರೊಂದು ರೂಪದಲ್ಲಿ ಅದೃಷ್ಟ ಲಭಿಸುತ್ತದೆ ಎಂದು ಜ್ಯೊತಿಷ್ಯಶಾಸ್ತ್ರದ್ಲಲಿ ಎನ್ನಲಾಗಿದೆ.

%d bloggers like this: