ಮುಂಗಡ ಟಿಕೆಟ್ ಬುಕ್ಕಿಂಗ್ ಅಲ್ಲೂ ಹೊಸ ದಾಖಲೆ, ಬೆಂಗಳೂರು ಒಂದರಲ್ಲೇ ಅಪ್ಪು ಅವರ ಜೇಮ್ಸ್ ಚಿತ್ರ ಗಳಿಸಿದ್ದು ಎಷ್ಟು ಗೊತ್ತೇ

ಜೇಮ್ಸ್ ಚಿತ್ರದ ಬಿಡುಗಡೆಗೆ ಎಲ್ಲೆಡೆ ಕೌಂಟ್ ಡೌನ್ ಶುರುವಾಗಿದೆ. ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಲಕ್ಷಗಟ್ಟಲೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಅನೇಕ ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ಒಂದು ಜಾತ್ರೆಯಂತೆ ಆಚರಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ಭಾರತದಾದ್ಯಂತ ಅಷ್ಟೇ ಅಲ್ಲದೆ, ವಿಶ್ವದಾದ್ಯಂತ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಾಗಲು ಸಜ್ಜಾಗಿದೆ. 15 ವಿದೇಶಗಳಲ್ಲಿ ನಮ್ಮ ಪವರ್ ಸ್ಟಾರ್ ಅವರ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ. ಜೇಮ್ಸ್ ಚಿತ್ರ ತುಂಬಾ ವಿಶೇಷವಾದ್ದರಿಂದ ಇದನ್ನು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದೇ ರಿಲೀಸ್ ಮಾಡಬೇಕು ಎಂಬ ಉದ್ದೇಶ ಬಹಳ ಹಿಂದಿನದಾಗಿತ್ತು.

ಅದರಂತೆಯೇ ಜೇಮ್ಸ್ ಚಿತ್ರತಂಡ ಹಗಲಿರುಳು ಶ್ರಮ ಪಟ್ಟು ಎಲ್ಲಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದೆ. ಪುನೀತ್ ರಾಜ್ ಕುಮಾರ್ ಅವರು ಚಿತ್ರದ ಚಿತ್ರೀಕರಣವನ್ನು ಕಂಪ್ಲೀಟ್ ಆಗಿ ಮುಗಿಸಿದ್ದರಾದರೂ ಕೆಲವು ಡಬ್ಬಿಂಗ್ ಕೆಲಸಗಳು ಬಾಕಿ ಇದ್ದವು. ಇದನ್ನು ನಟ ಶಿವರಾಜ್ ಕುಮಾರ್ ಅವರು ಪೂರ್ತಿ ಮಾಡಿದ್ದು, ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಜನತೆ ಕಾತುರದಿಂದ ಕಾದಿದೆ. ಜೇಮ್ಸ್ ಚಿತ್ರಕ್ಕಾಗಿ ಹಲವಾರು ಒಟಿಟಿ ಪ್ಲಾಟ್ ಫಾರಂಗಳು ಮುಂದೆ ಬಂದರೂ ನಿರ್ಮಾಪಕರು ಈ ಚಿತ್ರವನ್ನು ಬಿಟ್ಟುಕೊಟ್ಟಿಲ್ಲ. ಇನ್ನೂ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಮನೆಯಿಂದ ಹಿಡಿದು ಗಾಂಧಿನಗರದ ಥಿಯೇಟರ್ ವರೆಗೂ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವುಳ್ಳ ಮೆರವಣಿಗೆ ಹಾಗೂ ಪುನೀತ್ ರಾಜಕುಮಾರ್ ಅವರ ಸಮಾಧಿಯ ಮೇಲೆ ಪುಷ್ಪಾರ್ಚನೆ.

ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿರುವ ಥಿಯೇಟರ್ ಮುಂದೆ ಅತಿ ಎತ್ತರದ ಕಟೌಟ್ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ತಾವೇ ದುಡ್ಡುಹಾಕಿ ಆಯೋಜಿಸುತ್ತಿದ್ದಾರೆ. ಮೊದಲೇ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಜೇಮ್ಸ್ ಚಿತ್ರ ಪುನೀತ್ ಅವರ ನಿಧನದ ಮೇಲಂತೂ ಈ ಚಿತ್ರಕ್ಕೆ ತುಂಬಾ ಬೇಡಿಕೆ ಹೆಚ್ಚಾಗಿದೆ. ಜೇಮ್ಸ್ ಚಿತ್ರ ಮಾರ್ಚ್ 17ರಂದು ತೆರೆ ಕಾಣುತ್ತಿದ್ದು ಕೇವಲ ಒಂದೇ ಒಂದು ವಾರ ಮೊದಲೇ ಪ್ರೀ ಬುಕ್ಕಿಂಗ್ ಗಳು ಶುರುವಾಗಿವೆ. ಈ ಮೊದಲೇ ಚಿತ್ರತಂಡ ಯಾವ ಯಾವ ಥಿಯೇಟರ್ ಗಳಲ್ಲಿ ಜೇಮ್ಸ್ ಚಿತ್ರ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಕೂಡ ಹಂಚಿಕೊಂಡಿತ್ತು. ಜೇಮ್ಸ್ ಚಿತ್ರದ ಟಿಕೆಟ್ ಗಳನ್ನು ಬುಕ್ ಮೈ ಶೋ ಆಪ್ ಮೂಲಕ ಆನ್ ಲೈನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸಧ್ಯಕ್ಕೆ ಎರಡುನೂರು ಶೋಗಳ ಟಿಕೆಟ್ ಗಳನ್ನು ಮಾರಾಟಕ್ಕೆ ಇಡಲಾಗಿದೆ.

ಇದರಲ್ಲಿ ಈಗಾಗಲೇ ಕೆಲ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಇನ್ನೂ ಕೆಲವು ಶೋಗಳ ಟಿಕೆಟ್ ಗಳು ಫೀಲ್ಲಿಂಗ್ ಫಾಸ್ಟ್ ತೋರಿಸುತ್ತಿವೆ. ಮಾರ್ಚ್ 17ರಂದು ಮುಂಜಾನೆ 6ಗಂಟೆಗೆ ಜೇಮ್ಸ್ ವಿಶೇಷ ಶೋ ಏರ್ಪಡಿಸಲಾಗಿದೆ. ಇದನ್ನು ಕಣ್ತುಂಬಿಕೊಳ್ಳುವುದಕ್ಕೆ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಹೀಗಾಗಿ ಮುಂಜಾನೆ ಶೋಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಅನೇಕ ಶೋಗಳ ಟಿಕೆಟ್ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ಕರ್ನಾಟಕದಲ್ಲಿ ಒಟ್ಟು ಜೇಮ್ಸ್ ಚಿತ್ರದ 734 ಶೋಗಳು ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಇಲ್ಲಿಯವರೆಗೆ 475 ಶೋಗಳು ನಡೆಯಲಿವೆ ಹಾಗೂ ಇನ್ನೂ ಹೆಚ್ಚಾಗುವ ನೀರೀಕ್ಷೆಯಿದೆ. ಮೈಸೂರಿನಲ್ಲಿ ಒಟ್ಟು 62, ಕುಂದಾಪುರದಲ್ಲಿ 16, ಮಣಿಪಾಲ್ ನಲ್ಲಿ 15, ತುಮಕೂರಿನಲ್ಲಿ 14, ಮುಧೋಳ್ ನಲ್ಲಿ 6, ಹೀಗೆ ಕರ್ನಾಟಕದಾದ್ಯಂತ ಒಟ್ಟು 634 ಶೋ ಗಳು ನಡೆಯಲಿವೆ. ಇನ್ನು ಬೆಂಗಳೂರು ಒಂದರಲ್ಲೇ ಜೇಮ್ಸ್ ಚಿತ್ರವು ಮುಂಗಡ ಬುಕಿಂಗ್ ಮೂಲಕ ಎರಡು ಕೋಟಿ ಮೂವತ್ತು ಲಕ್ಷ ಗಳಿಕೆ ಮಾಡಿದ್ದು, ಬಿಡುಗಡೆ ದಿನದ ಹೊತ್ತಿಗೆ ಇನ್ನು ದೊಡ್ಡ ಮೊತ್ತ ಗಳಿಕೆ ಮಾಡಲಿದೆ.

%d bloggers like this: