ಮೂತ್ರಸಂಭಂದಿ ಕಾಯಿಲೆಗಳಿಂದ ಬಳಲುತ್ತಿದ್ದರೆ ಇದನ್ನು ಪಾಲಿಸಿ ಆರಾಮವಾಗಿರಿ

ಮನುಷ್ಯನಿಗೆ ದಶಕಗಳು ಉರುಳಿದಂತೆ ಒಂದಲ್ಲ ಒಂದು ರೀತಿಯಾದ ಹೊಸ ಹೊಸ ತರಹದ ರೋಗಗಳು ಅಂಟಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ ಯಾವುದೇ ಕಲಬೆರಿಕೆಗಳಿಲ್ಲದೆ ತುಸು ತಿಂದರೂ ಕಸ ತಿನ್ನಬೇಡ ಎಂಬ ಗಾದೆ ಮಾತಿನಂತೆ ಹಿಂದಿನ ಜನ ಬಡತನ ಪರಿಸ್ಥಿತಿಯ ಜನ ಸ್ವಲ್ಪ ಆಹಾರ ಸೇವಿಸಿದರೂ ಅವರ ಆಹಾರ ಕಲಬೆರಕೆ ರಹಿತವಾಗಿರುತ್ತಿತ್ತು. ಜೊತೆಗೆ ಅದರ ಗುಣಮಟ್ಟ ಉತ್ಕೃಷ್ಟ ಮಟ್ಟದ್ದಾಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರಸ್ಥರು ಅತಿಹೆಚ್ಚಿನ ದುಡ್ಡಿನ ಆಸೆಗೆ ಬಿದ್ದು ವಿಷಪೂರಿತ ಕಲಬೆರಕೆ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಹಾಲು ಸಕ್ಕರೆ ಬೆಲ್ಲ ಸೇರಿದಂತೆ ಅನೇಕ ಪದಾರ್ಥಗಳು ಕಲಬೆರಿಕೆಗೆ ಒಳಪಡುತ್ತಿವೆ. ಇಂತಹ ಕಲಬೆರಕೆ ಆಹಾರ ಸೇವನೆಯಿಂದ ನಮ್ಮ ದೇಹದ ವಿವಿಧ ಭಾಗಗಳಿಗೆ ವಿವಿಧ ರೀತಿಯ ತೊಂದರೆಗಳು ಆಗುತ್ತವೆ. ಅದರಲ್ಲಿ ಸರ್ವೇಸಾಮಾನ್ಯವಾದದು ಮೂತ್ರ ಸಂಬಂಧಿ ಕಾಯಿಲೆ.

ನಮ್ಮ ಕೆಟ್ಟ ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಮೂತ್ರ ಸಂಬಂಧಿ ಕಾಯಿಲೆಗಳು ಬಹುಶಹ ಅನೇಕರಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರಲ್ಲಿ ಸರಿಯಾಗಿ ನೀರು ಕುಡಿಯದೇ ಇದ್ದಾಗ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಜನ ಇದಕ್ಕೆ ಹೆದರಿ ಆಸ್ಪತ್ರೆಗಳಿಗೆ ಮೊರೆಹೋಗುತ್ತಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ. ಆದರೆ ಇಷ್ಟು ಮಾಡುವ ಬದಲು ಮನೆಯಲ್ಲಿ ಸ್ವಲ್ಪ ಆಹಾರಪದ್ಧತಿಯನ್ನು ಬದಲಿಸಿಕೊಂಡರೆ ಸಾಕು ಇಂತಹ ಗಂಭೀರ ಸಮಸ್ಯೆಗಳಿಗೆ ಸುಲಭೋಪಾಯ ಪಡೆಯಬಹುದು. ಹೌದು ಹಲವು ಔಷಧಿ ಗುಣಗಳನ್ನು ಹೊಂದಿರುವ ಮೂಲಂಗಿಯನ್ನು ರುಬ್ಬಿ ಅದರ ರಸವನ್ನು ತೆಗೆದು ಪ್ರತಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸುಮಾರು 5 ರಿಂದ 6 ಚಮಚ ಸೇವಿಸಿದರೆ ಯಾವುದೇ ರೀತಿಯಾದಂತಹ ಮೂತ್ರ ಸಂಬಂಧಿ ಕಾಯಿಲೆಗಳು ಇದ್ದರೂ ಕೂಡ ವಾಸಿಯಾಗುತ್ತದೆ. ಜೊತೆಗೆ ಮೆಂತೆ ಸೊಪ್ಪು ಮತ್ತು ಹಾಗಲಕಾಯಿ ಇವುಗಳ ನಿರಂತರ ಸೇವನೆಯಿಂದ ಎಲ್ಲ ಮೂತ್ರ ಸಂಬಂಧಿ ಕಾಯಿಲೆಗಳು ಹೇಳಹೆಸರಿಲ್ಲದಂತೆ ನಿವಾರಣೆಯಾಗುತ್ತವೆ.

%d bloggers like this: