ನಾಳೆ ಬೇರೆ ಊರಿಗೆ ಹೋಗುವ ಯೋಜನೆಯನ್ನು ಇಟ್ಟುಕೊಂಡವರು ಈ ವಿಷಯವನ್ನು ನೋಡಿ ಮೊದಲು

ರಾಜ್ಯದ ಜನತೆ ಎಲ್ಲರೂ ನಾಳೆಯಿಂದ ಮನೆ ಬಿಡುವ ಮೊದಲು ಸ್ವಲ್ಪ ಯೋಚನೆ ಮಾಡಿ ಬಿಡಬೇಕಾಗುತ್ತದೆ. ಹೌದು ರಾಜ್ಯದಾದ್ಯಂತ ನಾಳೆಯಿಂದ ಸಾರಿಗೆ ಸಿಬ್ಬಂದಿ ಅನಿರ್ದಿಷ್ಟ ಅವಧಿಯವರೆಗೆ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ರೈತ ಸಂಘದ ನಾಯಕರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ನಾಯಕತ್ವದಲ್ಲಿ ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆಯು ಒಂದು ಸೆಮಿ ಗೌರ್ಮೆಂಟ್ ರೀತಿಯ ಸಂಸ್ಥೆಯಾಗಿದ್ದು ಅಲ್ಲಿ ಕೆಲಸ ಮಾಡುವ ಸಾವಿರಾರು ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಭದ್ರತೆ ಮತ್ತು ಸಂಬಳದ ಸಮಸ್ಯೆಗಳಿರುವ ಕಾರಣ ತಮ್ಮನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂಬ ವಿಷಯಕ್ಕಾಗಿ ಈಗ ರಾಜ್ಯದ ಎಲ್ಲೆಡೆ ಸಾರಿಗೆ ಸಿಬ್ಬಂದಿ ಗಟ್ಟಿ ನಿರ್ಧಾರ ಮಾಡಿ ತಮ್ಮ ಹಕ್ಕಿಗಾಗಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ.

ಹೀಗಾಗಿ ನಾಳೆಯಿಂದ ಪ್ರತಿಯೊಬ್ಬರು ಯಾವುದೇ ಕೆಲಸಗಳಾಗಲಿ ಊರು ಬಿಟ್ಟು ಹೋಗುವ ಮೊದಲು ಸ್ವಲ್ಪ ಎಚ್ಚರಿಕೆಯಿಂದ ಇರಿ. ಮುಷ್ಕರದ ತೀವ್ರತೆಯನ್ನು ಕಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳು ಏನೇನು ಎಂಬುದರ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಸರ್ಕಾರವು ಸಾರಿಗೆ ನೌಕರರ ಬೇಡಿಕೆಗಳಿಗೆ ಯಾವ ರೀತಿ ಸ್ಪಂದಿಸುತ್ತದೆ ಏನು ನಿರ್ಧಾರ ಕೈಗೊಳ್ಳುತ್ತವೆ ಎಂಬುದು ಇನ್ನೂ ತಿಳಿಯದ ಸಂಗತಿ. ಒಟ್ಟಾರೆಯಾಗಿ ಸರಕಾರದ ನಿರ್ಧಾರದಿಂದ ಸಾರಿಗೆ ನೌಕರರು ತೃಪ್ತಿ ಕೊಳ್ಳುವರು ಅಥವಾ ಮತ್ತೆ ಆಕ್ರೋಶ ಮುಂದುವರಿಯಲಿದೆಯೆ ಎಂಬುದನ್ನು ಕಾದುನೋಡಬೇಕು.

%d bloggers like this: