ನವೆಂಬರ್ 30ನೇ ತಾರಿಖು ನಾಳೆ ಸೋಮವಾರದಂದು ಹಲವು ವಿಶೇಷಗಳು ಜರುಗುವ ದಿನವಾಗಿದೆ, ಒಂದೆಡೆ ಚಂದ್ರಗ್ರಹಣ ಮತ್ತೊಂದೆಡೆ ವಿಷ್ಣು ದೀಪೋತ್ಸವ, ಜೊತೆಗೆ ನಾಳೆ ಗುರುನಾನಾಕ್ ಜಯಂತಿ ಹೀಗೆ ಹಲವು ವೈಶಿಷ್ಟ್ಯ ಕಾರ್ತಿಕ ಸೋಮವಾರದ ಹುಣ್ಣಿಮೆ ದಿನದಂದು ಕೆಲವರಿಗೆ ಶುಭವಾದರೆ, ಕೆಲವರಿಗೆ ಗ್ರಹಚಾರಗಳ ಆಧಾರದ ಮೇಲೆ ಒಂದಷ್ಟು ಅಡ್ಡ ಪರಿಣಾಮ ಬೀರತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದರಲ್ಲೂ ನಾಳೆ ಚಂದ್ರಗ್ರಹಣ ಈ ರಾಹುಗ್ರಸ್ತ ಚಂದ್ರಗ್ರಹಣದಲ್ಲಿ ರಾಹುವು ಚಂದ್ರನನ್ನು ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗೆ ಈ ಚಂದ್ರಗ್ರಹಣ ಗೋಚರಿಸುವ ಸಮಯ ಮಧ್ಯಾಹ್ನ 1:2 ನಿಮಿಷ ಸ್ಪರ್ಷ ಆಗಲಿದೆ. ತದನಂತರದಲ್ಲಿ 3:12ರ ಸಮಯಕ್ಕೆ ಮಧ್ಯಕಾಲವಾಗಿ ಅಂತಿಮವಾಗಿ ಸಂಜೆ 5:20 ರ ಸಮಯಕ್ಕೆ ಗ್ರಹಣದ ಮೋಕ್ಷವಾಗಲಿದೆ. ಆದ್ದರಿಂದ ಈ ರಾಶಿ ಫಲಾಫಲಗಳಲ್ಲಿ ನಂಬಿಕೆ ಇರುವವರು ಆದಷ್ಟು ಕೆಲವು ರಾಶಿಯವರು ಎಚ್ಚರಿಕೆಯಿಂದರಿಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಈ ಜ್ಯೋತಿಷಿಗಳನ್ನು ಹೊರತು ಪಡಿಸಿ ವಿಜ್ಞಾನಿಗಳು ಈ ಗ್ರಹಣದ ವಿಚಾರವಾಗಿ ಗ್ರಹಣ ಎಂಬುವುದು ಸೌರಮಂಡಲದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಅದಕ್ಕೆ ಭಯ ಪಡಬೇಕಾದ ಅವಶ್ಯಕತೆಯಿಲ್ಲ ಎಂದು ತಿಳಿಸುವರು. ನಾಳೆ ಈ ಚಂದ್ರಗ್ರಹಣ ನಡೆಯುವುದು ಭಾರತದಲ್ಲಿ ಅಲ್ಲ ಇದು ಗೋಚರಿಸುವುದು ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಈ ಚಂದ್ರಗ್ರಹಣ ಗೋಚರಿಸುತ್ತದೆ ಎಂದು ಮೂಲಗಳು ತಿಳಿಸಿವೆ.