ನಾಳೆ ಮೊಬೈಲ್ ಜಗತ್ತಿಗೆ ಸೇರ್ಪಡೆಯಾಗುತ್ತಿದೆ ಮತ್ತೊಂದು ಹೊಸ ಮೊಬೈಲ್ ಕಂಪನಿ

ಇದೇ ಜುಲೈ ತಿಂಗಳಿನಲ್ಲಿ ಮೊಬೈಲ್ ಮಾರುಕಟ್ಟೆಗೆ ಹೊಸದೊಂದು ಫೋನ್ ಲಾಂಚ್ ಆಗುತ್ತಿದೆ. ಈ ಫೋನ್ ಖರೀದಿ ಮಾಡಲು ಆನ್ಲೈನ್ ದಿಗ್ಗಜ ಸಂಸ್ಥೆಗಳಲ್ಲಿ ಒಂದಾಗಿರುವ ಫ್ಲಿಪ್ ಕಾರ್ಟ್ ನಿಂದ ವಿಶೇಷ ಕೊಡುಗೆ ಸಿಗುತ್ತಿದೆ. ಹೌದು ಇನ್ನೇನು ಕೆಲವೇ ದಿನಗಳಲ್ಲಿ ನಾಡಿನಲ್ಲಿ ಹಬ್ಬಗಳು ಸಾಲು ಸಾಲಾಗಿ ಬರಲಿವೆ. ಈ ಹಿನ್ನೆಲೆಯಲ್ಲಿ ಅನೇಕ ಮೊಬೈಲ್ ಕಂಪನಿಗಳು ತಮ್ಮ ಸಂಸ್ಥೆಯಿಂದ ಅಡ್ವಾನ್ಸ್ಡ್ ಫೀಚರ್ ಹೊಂದಿರುವ ಮೊಬೈಲ್ ಗಳನ್ನ ಮಾರುಕಟ್ಟೆಗೆ ತರಲು ಸಜ್ಜಾಗಿ ತುದಿಗಾಲಲ್ಲಿ ನಿಂತಿವೆ. ಅದರಂತೆ ಇದೀಗ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಹೊಸದೊಂದು ಮೊಬೈಲ್ ಇದೇ ಜುಲೈ ತಿಂಗಳಿನಲ್ಲಿ ಲಾಂಚ್ ಆಗಲಿದೆ. ಅದರ ಹೆಸರು ನಥಿಂಗ್ ಫೋನ್ ಒನ್. ಈ ನಥಿಂಗ್ ಫೋನ್ ಒನ್ ಎಂಬ ಸ್ಮಾರ್ಟ್ ಫೋನ್ ಟೀಸರ್ ರಿಲೀಸ್ ಆದಾಗ ಇದೊಂದು ವಿಶಿಷ್ಟ ಮಾದರಿಯ ಅಡ್ವಾನ್ಸ್ಡ್ಎಪ್ಲಸ್ ಶ್ರೇಣಿಯ ಐ ಫೋನ್ ಎಂದು ನಿರೀಕ್ಷೆ ಮಾಡಲಾಗಿತ್ತು.

ಆದರೆ ಈ ಫೋನ್ ಬಿಡುಗಡೆಗೊಂಡ ನಂತರ ಇದೊಂದು ಮಧ್ಯಮ ಶ್ರೇಣಿಯ ಫೋನ್ ಎಂದು ತಿಳಿದು ಬಂದಿದೆ. ಹಾಗಂತ ಈ ಫೋನ್ ಅನ್ನ ಕೇವಲವಾಗಿ ಕಾಣುವಂತಿಲ್ಲ. ಹೀಗಿರುವ ಐ ಫೋನ್ ಗಳಿಗಿಂತ ಈ ನಥಿಂಗ್ ಫೋನ್ ಒನ್ ವಿಭಿನ್ನ ಮತ್ತು ಅತ್ಯಾಕರ್ಷಕ ಅತ್ಯಾಧುನಿಕ ಲಕ್ಷಣಗಳನ್ನ ಹೊಂದಿದೆ. ಈ ನಥಿಂಗ್ ಫೋನ್ ಒನ್ 8 ಜಿಬಿ ರ್ಯಾಮ್ ಜೊತೆಗೆ 128 ಜಿಬಿ ಸಂಗ್ರಹ ಸಾಮರ್ಥ್ಯವಿರುವ ಫೋನ್ ಬೆಲೆಯು 32,000 ಇರುತ್ತದೆ. ಇದೇ ರೀತಿ 12ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹ ಸಾಮರ್ಥ್ಯ ಇರುವ ನಥಿಂಗ್ ಫೋನ್ ಒನ್ ಬೆಲೆಯು 36,000 ಮೌಲ್ಯದ್ದಾಗಿರುತ್ತದೆ. ಇನ್ನು ಈ ಫೋನಿನ ಫೀಚರ್ ಗಮನಿಸುವುದಾದರೆ ಸ್ನಾಪ್ಡ್ರಾಗನ್ 778+ ಪ್ರೊಸೆಸರ್ ಇದ್ದು, 6.55 ಇಂಚಿನ ಅಮೋಲೆಡ್ ಡಿಸ್ ಪ್ಲೇ ಹೊಂದಿದೆ. ಇನ್ ಡಿಸ್ ಪ್ಲೇ ಫಿಂಗರ್ ಫ್ರಿಂಟ್ ಸೆನ್ಸಾರ್ ಕೂಡ ಈ ನಥಿಂಗ್ ಫೋನ್ ಒನ್ ನಲ್ಲಿದೆ.

ಇನ್ನು ನಥಿಂಗ್ ಫೋನ್ ಒನ್ ಫೋನಿನ ಬ್ಯಾಟರಿ ವಿಚಾರಕ್ಕೆ ಬರೋದಾದ್ರೆ 4500 ಎಂಎಎಚ್ ಆಗಿದ್ದು, 45 ಡಬ್ಲ್ಯೂ ಸ್ಪೀಡ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿದೆ. ಇನ್ನು ಫ್ಲಿಪ್ ಕಾರ್ಟ್ ಕೊಡುಗೆ ತಿಳಿಯುವುದಾದರೆ ಈ ನಥಿಂಗ್ ಫೋನ್ ಒನ್ ಫೋನನ್ನ ಫ್ಲಿಪ್ ಕಾರ್ಟ್ನಲ್ಲಿ ಖರೀದಿ ಮಾಡಲು ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಇನ್ನೂರು ರೂ.ಗಳವರೆಗೆ ಆರ್ಡರ್ ಪಾಸ್ ಇರಲಿದೆ. ಈ ಪಾಸ್ ವ್ಯಾಲ್ಯುವನ್ನ ಮೊಬೈಲ್ ಬೆಲೆಯಲ್ಲಿ ಕಡಿತ ಗೊಳಿಸಲಾಗುತ್ತದೆ. ಇನ್ನು ಎಚ್.ಡಿ.ಎಫ್.ಸಿ ಕ್ರೆಡಿಟ್ ಕಾರ್ಡ್ ಮೂಲಕ ಈ ನಥಿಂಗ್ ಫೋನ್ ಒನ್ ಮೊಬೈಲ್ ಖರೀದಿ ಮಾಡಿದರೆ ಎರಡು ಸಾವಿರ ರೂಗಳವರೆಗೆ ಡಿಸ್ಕೌಂಟ್ ಸಿಗಲಿದೆ. ಒಟ್ಟಾರೆಯಾಗಿ ಮೊಬೈಲ್ ಪ್ರಿಯರಿಗೆ ಇದೀಗ ನಥಿಂಗ್ ಫೋನ್ ಒನ್ ಮೊಬೈಲ್ ಸಖತ್ ಅಟ್ರಾಕ್ಟ್ ಮಾಡುತ್ತಿದೆ.

%d bloggers like this: