ಇತ್ತೀಚೆಗೆ ಕೆಲವು ತಿಂಗಳಿನಿಂದ ಭಾರತೀಯ ಕ್ರಿಕೆಟ್ ಲೋಕದಲ್ಲಿ ಭಾರಿ ಸುದ್ದಿ ಆಗುತ್ತಿರುವ ಕ್ರೀಡಾ ವ್ಯಕ್ತಿ ಅಂದರೆ ಅದು ಒನ್ ಅಂಡ್ ಓನ್ಲೀ ಟೀಮ್ ವಿರಾಟ್ ಕೊಹ್ಲಿ. ಕ್ರಿಕೆಟ್ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಸುದ್ದಿ ಆಗುತ್ತಿದ್ದುದ್ದು ದಾಖಲೆ ಮಾಡುವ ಮೂಲಕ. ಅಥವಾ ವಿವಿಧ ಜಾಹೀರಾತುಗಳ ಮೂಲಕ ಕೋಟಿ ಕೋಟಿ ಆದಾಯ ಗಳಿಸುವ ಮುಖಾಂತರ, ಅಂಬಾಸಿಡರ್ ಆಗಿ ಭಾರಿ ಸಂಭಾವನೆ ಪಡೆಯುವ ಮೂಲಕ ಸುದ್ದಿ ಆಗುತ್ತಿದ್ದರು. ಇತ್ತೀಚೆಗೆ ಎರಡು ತಿಂಗಳೀಂದೀಚೆಗೆ ವಿರಾಟ್ ಕೊಹ್ಲಿ ತಮ್ಮ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸುದ್ದಿ ಮಾಡಿದರು. ಅದೂ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಸಾರಥ್ಯ ವಹಿಸಿರುವ ಕೊಹ್ಲಿ ಸತತವಾಗಿ ಸೋಲನ್ನು ಕಾಣುತ್ತಿರುವಂತೆ.

ಐಪಿಎಲ್ 14ನೇ ಆವೃತ್ತಿಯ ಸೋಲಿನ ನಂತರ ವಿರಾಟ್ ಕೊಹ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಇದಾದ ಬಳಿಕ ವಿವಿಧ ಪಂದ್ಯಗಳ ಒತ್ತಡದಿಂದಾಗಿ ನನಗೆ ಉತ್ತಮವಾಗಿ ಪ್ರದರ್ಶನ ನೀಡಲು ಜವಬ್ದಾರಿ ನಿಭಾಯಿಸಲು ತೊಂದರೆ ಆಗುತ್ತಿದೆ ಎಂದು ಟಿಟ್ವೆಂಟಿ ಪಂದ್ಯ ಮತ್ತು ಏಕ ದಿನ ಪಂದ್ಯದ ನಾಯಕತ್ವಕ್ಕೂ ರಾಜೀನಾಮೆ ನೀಡಿದರು. ಇದರಿಂದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭಾರಿ ನಿರಾಸೆ ನೋವಾಯಿತು. ಹೇಗೋ ಟೆಸ್ಟ್ ಪಂದ್ಯಗಳಗಳಿಗೆ ನಾಯಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ತಿಳಿಸಿದ್ದಾರು ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಧಿಡೀರ್ ಆಗಿ ಏಕಾಏಕಿ ಟೆಸ್ಟ್ ಪಂದ್ಯದ ಕ್ಯಾಪ್ಟನ್ಸಿ ಜವಬ್ದಾರಿಯಿಂದ ಕೆಳಗಿಳಿಸಲಾಯಿತು. ಇದರಿಂದ ವಿರಾಟ್ ಕೊಹ್ಲಿ ಅವರಿಗೆ ಭಾರಿ ಅಸಮಾಧಾನವಾಗಿದ್ದು ಮಾತ್ರ ನಿಜ.

ಇದಾದ ಬಳಿಕ ವಿರಾಟ್ ಕೊಹ್ಲಿ ಅವರು ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಈ ಗಾಳಿ ಸುದ್ದಿಗೆ ಬ್ರೇಕ್ ಹಾಕಿ ಸ್ವತಃ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಸ್ಪಷ್ಟನೆ ನೀಡಿ ತಾವು ಸೌತ್ ಆಫ್ರಿಕಾ ಟೆಸ್ಟ್ ಸರಣಿ ಪಂದ್ಯಗಳಲ್ಲಿ ಭಾಗವಹಿಸುವುದಾಗಿ ಸ್ಪಷ್ಟನೆ ನೀಡಿದರು. ಅಂತೆಯೇ ವಿರಾಟ್ ಕೊಹ್ಲಿ ಅವರು ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಪಂದ್ಯದಲ್ಲಿ ಆಟವಾಡಿದರು. ಇಲ್ಲಿ ಕೆಲವು ವಿವಾದಕ್ಕೀಡಾದರು. ಅದೇನಪ್ಪಾ ಅಂದರೆ ಸೌತ್ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೆಂಬಾ ಬವುಮಾ ಜೊತೆ ಮೈದಾನದಲ್ಲಿಯೇ ಮಾತಿನ ಚಕಮಕಿ ಮಾಡಿಕೊಂಡರು. ಟೆಂಬಾ ಸ್ಟಂಪ್ ಬಿಟ್ಟು ಮುಂದೆ ಬಂದ ಕಾರಣ ವಿರಾಟ್ ಕೊಹ್ಲಿ ಅವರು ತಮ್ಮ ಕೈಲಿದ್ದ ಚೆಂಡನ್ನ ಸ್ಟಂಪ್ ನತ್ತ ಎಸೆದರು. ಇದು ಟೆಂಬಾ ಅವರಿಗೆ ಕೋಪ ಬರುವಂತಾಯಿತು.

ಆಗ ಕೊಹ್ಲಿ ಅವರು ನಾನೀಗ ಕ್ಯಾಪ್ಟನ್ ಅಲ್ಲ ನಾನು ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಅವಾಜ್ ಹಾಕಿದರು. ವಿರಾಟ್ ಕೊಹ್ಲಿ ಅವರ ಈ ಆಕ್ರೋಶದ ನಡವಳಿಕೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು. ಇದರ ನಡುವೆ ವಿರಾಟ್ ಕೊಹ್ಲಿ ಅವರ ಕ್ರೇಜ಼್ ಎಷ್ಟರ ಮಟ್ಟಿಗೆ ಇದೆ ಎಂಬುದನ್ನ ಅವರ ಅಭಿಮಾನಿಗಳು ವಿಭಿನ್ನ ಕೆಲಸ ಮಾಡುವ ಮೂಲಕ ಅದರ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಖತ್ ವೈರಲ್ ಮಾಡುತ್ತಿದ್ದಾರೆ. ಹೌದು 2022ರ ವಿಶ್ವಕಪ್ ಪಂದ್ಯ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಆಸ್ಟ್ರೇಲಿಯಾದ ಸಿಡ್ನಿಯ ಮುಖ್ಯ ರಸ್ತೆಗಳಲ್ಲಿ ವಿರಾಟ್ ಕೊಹ್ಲಿ ಅವರ ಭಾವ ಚಿತ್ರದ ಬ್ಯಾನರ್ ಹಾಕಿ ಸಂಭ್ರಮ ಪಡುತ್ತಿದ್ದಾರೆ. ಇನ್ನು ಕ್ರಿಕೆಟ್ನ ಎಲ್ಲಾ ಪಂದ್ಯಗಳಿಗೆ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದ ಕೊಹ್ಲಿ ಅವರ ಅಭಿಮಾನಿಗಳಿಗೆ ಭಾರಿ ಬೇಸರವಾಗಿದೆ.