ಇದೇ ಡಿಸೆಂಬರ್ 26ರಿಂದ ನಡೆಯಲಿರುವ ಸೌತ್ ಸರಣಿ ಟೆಸ್ಟ್ ಕ್ರಿಕೆಟ್ಗೆ ಅಜಿಂಕ್ಯಾ ರಹಾನೆ ಅವರ ಬದಲು ಉಪನಾಯಕನ್ನಾಗಿ ರೋಹಿತ್ ಶರ್ಮಾ ಅವರನ್ನ ಬಿಸಿಸಿಐ ಆಯ್ಕೆ ಮಾಡಿ ಘೋಷಣೆ ಮಾಡಿತ್ತು. ಅದರ ಜೊತೆಗೆ ವಿರಾಟ್ ಕೊಹ್ಲಿ ಅವರನ್ನು ಏಕ ದಿನ ಪಂದ್ಯದ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನೇ ಕ್ಯಾಪ್ಟನ್ ನನ್ನಾಗಿ ಮಾಡಿತ್ತು. ಇನ್ನು ಇದೇ ಸೌತ್ ಆಫ್ರಿಕಾ ಸರಣಿ ಟೆಸ್ಟ್ ಪಂದ್ಯದ ಹಿನ್ನೆಲೆ ಭಾನುವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದ್ದರು ರೋಹಿತ್ ಶರ್ಮಾ. ಈ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ಎಡ ಭಾಗದ ಮಂಡಿನೋವು ಕಾಣಿಸಿಕೊಂಡಿದೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ಅವರಿಗೆ ರಾಘವೇಂದ್ರ ಅವರಿಂದ ಥ್ರೋ ಡೌನ್ ಪಡೆಯುವ ಸಂಧರ್ಭದಲ್ಲಿ ಕೈಗೆ ಪೆಟ್ಟಾಗಿತ್ತು.

ಇದೀಗ ಇದರ ಜೊತೆಗೆ ಮಂಡಿನೋವು ಕೂಡ ಕಾಣಿಸಿಕೊಂಡಿರುವುದರಿಂದ ರೋಹಿತ್ ಶರ್ಮಾ ಅವರನ್ನ ಈ ಸೌತ್ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ. ಇನ್ನು ಭಾರತ ತಂಡದ ಉಪ ನಾಯಕರಾಗಿದ್ದ ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಇದೀಗ ಪ್ರಿಯಾಂಕ್ ಪಾಂಚಾಲ್ ಅವರನ್ನ ಕರೆತರಲಾಗುತ್ತಿದೆ. ಪ್ರಿಯಾಂಕ್ ಪಾಂಚಾಲ್ ಅವರು ದೇಶೀಯ ಕ್ರಿಕೆಟಿನ ಗುಜರಾತ್ ತಂಡವನ್ನು ಪ್ರತನಿಧಿಸುತ್ತಾರೆ. ಇವರು ದಕ್ಷಿಣ ಆಫ್ರಿಕಾದಲ್ಲಿ ಮೂರು ಟೆಸ್ಟ್ ಗಳನ್ನು ಆಡಿದ್ದು, ಭಾರತ ‘ಎ’ ತಂಡದ ಪರ ಎರಡು ಪಂದ್ಯಗಳಲ್ಲಿ ಕ್ಯಾಪ್ಟನ್ ಆಗುವುದರ ಜೊತೆಗೆ ಸರಣಿಯಲ್ಲಿ 120 ರನ್ ಕಲೆ ಹಾಕಿ ಗಮನ ಸೆಳೆದಿದ್ದರು.

ಇನ್ನು ಇದೀಗ ಈ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅವರ ತಂಡದಲ್ಲಿ ಬ್ಯಾಟಿಂಗ್ ನಲ್ಲಿ ಫಾರ್ಮ್ ಇರುವವರು ಅಂದರೆ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ವೃದ್ದಿಮಾನ್ ಸಾಹಾ. ಇನ್ನು ದಕ್ಷಿಣ ಆಫ್ರಿಕಾದ ತಂಡವನ್ನು ಡೀನ್ ಎಲ್ಗರ್ ಮುನ್ನೆಡೆಸಲಿದ್ದು ತೆಂಬಾ ಬವುಮಾ ಉಪನಾಯಕನಾಗಿ ಜವಾಬ್ದಾರಿ ಹೊರಲಿದ್ದಾರೆ. ತಂಡದಲ್ಲಿ ಕಗಿಸೊರಬಾಡ, ಕ್ವಿಂಟನ್ ಡಿ ಕಾಕ್, ಲುಂಗಿ ಎನ್ ಗಿಡಿ, ವ್ಯಾನ್ ಡೆರ್ ಡುಸ್ಸೇನ್, ಕೀಗನ್ ಪೀಟರ್ಸನ್, ವಿಯಾನ್ ಮುಲ್ಡರ್, ಪ್ರೆನಲನ್ ಸುಬ್ರಯೆನ್, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್ ಮತ್ತು ಡುನೆ ಒಲಿವರ್ ಇರಲಿದ್ದಾರೆ.