ನಲವತ್ತು ಕೋಟಿ ಮೌಲ್ಯದ ಉಡುಗೆ ತೊಟ್ಟು ಅರಬ್ ಫ್ಯಾಷನ್ ಲೋಕದಲ್ಲಿ ಮಿಂಚಿದ ಐರಾವತ ಬೆಡಗಿ

ಫ್ಯಾಷನ್ ಲೋಕ ಅಂದಾಕ್ಷಣ ಸುಂದರ ಚೆಲುವೆಯರು ಹಾಗೇ ಕಣ್ಮುಂದೆ ಹಾದು ಹೋಗುತ್ತಾರೆ. ಅವರು ಕೇವಲ ಸುಂದರಿಯರು ಮಾತ್ರ ಆಗಿರುವುದಿಲ್ಲ. ದೇವಲೋಕದಿಂದ ಇಳಿದು ಬಂದಂತಹ ಅಪ್ಸರೆಯರೇ ಏನೋ ಎಂಬಂತೆ ಅವರ ವೇಷ ಭೂಷಣ, ಕೇಶ ವಿನ್ಯಾಸ, ಐಷಾರಾಮಿ ಕಣ್ಣು ಕೋರೈಸುವ ಉಡುಗೆ ತೊಡುಗೆಗಳು, ಕಣ್ಮನ ಸೆಳೆಯುವ ಅವರ ಸೌಂದರ್ಯ ನೋಟಗಳು ಹೀಗೆ ಇಡೀ ಫ್ಯಾಷನ್ ಲೋಕದಲ್ಲಿ ಮನ ಸೋಲದವರೇ ಇಲ್ಲ ಎಂಬಂತಿರುತ್ತದೆ. ಅಂತೆಯೇ ಇದೀಗ ಎಲ್ಲರ ಕಣ್ಮನ ಸೆಳೆದು ನಿಬ್ಬೆರಗಾಗಿಸಿರುವುದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲಿ ನಟಿಸಿದ್ದ ನಟಿ ಊರ್ವಶಿ ರೌಟೆಲ್ಲಾ. ಮಾಡೆಲ್ ಕಮ್ ನಟಿಯಾಗಿರುವ ಈ ಬಾಲಿವುಡ್ ಬೆಡಗಿ ತನ್ನ ಚಿತ್ರಗಳಿಗಿಂತ ಹೆಚ್ಚಾಗಿ ತನ್ನ ಐಷಾರಾಮಿ ಜೀವನ ಶೈಲಿ, ಭಿನ್ನ ವಿಭಿನ್ನ ಫೋಟೋ ಶೂಟ್ ಗಳು, ತನ್ನ ಆಕರ್ಷಕ ಉಡುಗೆ ತೊಡಗೆಗಳ ಮೂಲಕವೇ ಭಾರಿ ಸುದ್ದಿಯಲ್ಲಿರುತ್ತಾರೆ ನಟಿ ಊರ್ವಶಿ.

ಇದೀಗ ಸುದ್ದಿಯಾಗಿರುವುದು ಅಂದದೆ ಅರಬ್ ಫ್ಯಾಷನ್ ವೀಕ್ ನಲ್ಲಿ ಬರೋಬ್ಬರಿ ನಲವತ್ತು ಕೋಟಿ ಮೌಲ್ಯದ ಗೌನ ಧರಿಸುವ ಮೂಲಕ ಇಡೀ ಫ್ಯಾಷನ್ ಲೋಕವನ್ನೇ ದಂಗಾಗಿಸಿದ್ದಾರೆ. ಈ ಅಚ್ಚರಿಯ ಸುದ್ದಿ ತಿಳಿದುಕೊಳ್ಳುವ ಮೊದಲು ನಟಿ ಊರ್ವಶಿ ಅವರ ಹಿನ್ನೆಲೆ ತಿಳಿಯುವುದಾದರೆ ನಟಿ ಊರ್ವಶಿ ಅವರ ತಂದೆ ತಾಯಿಗಳಾದ ಮನ್ವರ್ ಸಿಂಗ್ ಮತ್ತು ಮೀರಾ ಸಿಂಗ್ ಇಬ್ಬರು ಕೂಡ ಪ್ರಸಿದ್ದ ಉದ್ಯಮಿಗಳಾಗಿದ್ದಾರೆ. ಇವರಿಗೆ ಒಬ್ಬ ಸೋದರ ಕೂಡ ಇದ್ದಾರೆ ಅವರ ಹೆಸರು ಯಶ್ ರಾಜ್ ರೌಟೆಲ್ಲಾ. ಸಾವಿರಾರು ಕೋಟಿಯ ಒಡೆಯ ರಾಗಿರುವ ಊರ್ವಶಿ ರೌಟೆಲ್ಲಾ ಅವರಿಗೆ ಕಾಲೇಜು ದಿನಗಳಿಂದಾನೂ ಬಣ್ಣದ ಲೋಕದ ಮೇಲೆ ಅತೀವ ಆಸಕ್ತಿ ಇರುತ್ತದೆ. ಹಾಗಾಗಿಯೇ ಫ್ಯಾಷನ್ ಲೋಕದತ್ತ ಮುಖ ಮಾಡುತ್ತಾರೆ. ಇದಾದ ಬಳಿಕ ಈ ಸೌಂದರ್ಯವತಿಗೆ ಬಾಲಿವುಡ್ ನಲ್ಲಿಯೂ ಕೂಡ ಅವಕಾಶ ಸಿಗುತ್ತದೆ.

ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ4, ಪಾಗಲ್ ಪಂಥಿ ಅಂತಹ ಒಂದಷ್ಪು ಸಿನಿಮಾಗಳಲ್ಲಿ ನಟಿಸುತ್ತಾರೆ. ಆದರೆ ನಟಿ ಊರ್ವಶಿ ಅವರಿಗೆ ಸಿನಿಮಾಗಳಲ್ಲಿ ನಿರೀಕ್ಷೆ ಮಟ್ಟದ ಯಶಸ್ಸು ಸಿಗುವುದಿಲ್ಲ. ಆದರೆ ಮಾಡೆಲ್ ಕ್ಷೇತ್ರದಲ್ಲಿ ಊರ್ವಶಿ ಅವರಿಗೆ ಅಪಾರ ಜನಪ್ರಿಯತೆ, ಯಶಸ್ಸು ದೊರೆಯುತ್ತದೆ. ಅದರಂತೆ ಊರ್ವಶಿ ರೌಟೆಲ್ಲಾ 2015ರ ಮಿಸ್ ದಿವಾ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಾರೆ. ಜೊತೆಗೆ 2015ರಲ್ಲಿ ನಟಿ ಊರ್ವಶಿ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರದ್ದು ವಿಶೇಷ ಸಾಧನೆ ಅಂದರೆ ಇತ್ತೀಚೆಗೆ ಕಳೆದ ವರ್ಷ 2021ರ ಮಿಸ್ ಯುನಿವರ್ಸ್ ಮಿಸ್ ಯುನಿವರ್ಸ್ ಸ್ಪರ್ಧೆಯ ಅತ್ಯಂತ ಕಿರಿಯ ತೀರ್ಪುಗಾರರು ಎಂದು ಕೀರ್ತಿಗೆ ಪಾತ್ರರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಮಾಡೆಲ್ ಕಮ್ ನಟಿ ಊರ್ವಶಿ ರೌಟೆಲ್ಲಾ ಅವರು ವಿಧವಿಧವಾದ ಆಕರ್ಷಕ ಶೈಲಿಯ ಉಡುಗೆ ತೊಡುಗೆಗಳನ್ನ ತೊಟ್ಟು ಒಂದಷ್ಟು ಫೋಟೋ ಶೂಟ್ ಗಳನ್ನ ಮಾಡಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಂತೆಯೇ ಇದೀಗ ಇತ್ತೀಚೆಗೆ ನಡೆದ ಅರಬ್ ಫ್ಯಾಷನ್ ವೀಕ್ ನಲ್ಲಿ ಬರೋಬ್ಬರಿ ನಲವತ್ತು ಕೋಟಿ ಬೆಲೆಯ ಡ್ರೆಸ್ ಧರಿಸಿ ಎಲ್ಲರ ಕಣ್ಣು ಕೋರೈಸುವಂತೆ ಕ್ಯಾಕ್ ವಾಕ್ ಮಾಡಿದ್ದಾರೆ ನಟಿ ಊರ್ವಶಿ ರೌಟೆಲ್ಲಾ. ಹೌದು ಫ್ಯಾಷನ್ ಜಗತ್ತಿನಲ್ಲಿ ಪ್ರತಿಷ್ಟಿತ ಫ್ಯಾಷನ್ ಶೋ ಆಗಿರುವ ಈ ಅರಬ್ ಫ್ಯಾಷನ್ ವೀಕ್ ನಲ್ಲಿ ಜಗತ್ತಿನ ಅನೇಕ ಸುಪ್ರಸಿದ್ದ ರೂಪದರ್ಶಿಯರು ಭಾಗವಹಿಸುತ್ತಾರೆ. ಅರಬ್ ಫ್ಯಾಷನ್ ಶೋನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಜಗತ್ತಿನ ಎಷ್ಟೋ ಮಾಡೆಲ್ ಗಳು ಕನಸು ಹೊಂದಿರುತ್ತಾರೆ. ಈ ಅರಬ್ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಜಗತ್ತಿನ ಅತ್ಯಂತ ಸುಪ್ರಸಿದ್ದ ಮಾಡೆಲ್ ಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಸಿಗುತ್ತದೆ.

ಅಂತಹ ಪ್ರಸಿದ್ದ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಭಾರತ ದೇಶದಿಂದ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೆಲ್ಲಾ ಅವರಿಗೆ ಅವಕಾಶ ಸಿಗುತ್ತದೆ. ಅದರಂತೆ ಬಂದ ಅವಕಾಶವನ್ನು ಸದುಪಯೋಗ ಮಾಡಿಕೊಂಡ ನಟಿ ಊರ್ವಶಿ ಅವರು ತನ್ನ ಅತ್ಯದ್ಭುತ ವಸ್ತ್ರ, ಕೇಶ ವಿನ್ಯಾಸ, ತನ್ನ ಸೌಂದರ್ಯದ ಮೂಲಕ ಇಡೀ ಫ್ಯಾಷನ್ ಲೋಕವನ್ನೇ ತನ್ನತ್ತ ಸೆಳೆದುಕೊಂಡಿದ್ದಾರೆ. ಈ ಅರಬ್ ಫ್ಯಾಷನ್ ಶೋನಲ್ಲಿ ಎಲ್ಲರ ಗಮನ ಸೆಳೆದದ್ದು ಅಂದರೆ ಮಾಡೆಲ್ ಆಗಿ ಎಂಟ್ರಿ ಕೊಟ್ಟ ಊರ್ವಶಿ ರೌಟೆಲ್ಲಾ ಧರಿಸಿದ್ದ ಗೌನ್. ಈ ಗೌನ್ ವಜ್ರದಿಂದ ಮಾಡಲಾಗಿತ್ತಂತೆ. ಇದರ ಬೆಲೆ ಬರೋಬ್ಬರಿ ನಲವತ್ತು ಕೋಟಿ ಮೌಲ್ಯದ್ದಾಗಿದ್ದು, ಎಲ್ಲರನ್ನ ಆಕರ್ಷಣೆಗೆ ಒಳಪಡಿಸಿದೆ. ಈ ಹಿಂದೆ ಊರ್ವಶಿ ಅವರು ಮಿಸ್ ಯೂನಿವರ್ಸ್ ಅವಾರ್ಡ್ ಫಂಕ್ಷನ್ನಲ್ಲಿಯೂ ಕೂಡ ನಲವತ್ತು ಲಕ್ಷ ಮೌಲ್ಯದ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದ್ದರು.

%d bloggers like this: