ನಾಳೆ ಸಾವಿರಾರು ಟ್ರ್ಯಾಕ್ಟರ್ ಗಳಲ್ಲಿ ರೈತರ ಬೃಹತ್ ಪ್ರತಿಭಟನೆ, ರಸ್ತೆಗಿಳಿಯುವ ಮುನ್ನ ಯೋಚಿಸಿ

ನಮ್ಮ ದೇಶದ ಬೆನ್ನೆಲಬು ಮತ್ತು ದೇಶದ ಪ್ರತಿಯೊಬ್ಬ ಜನರಿಗೂ ಅನ್ನ ನೀಡುವ ಓರ್ವ ವ್ಯಕ್ತಿ ಎಂದರೆ ಅದು ರೈತ. ಹೌದು ರೈತ ಇರದೇ ಹೋದರೆ ಕೋಟಿ ಕೋಟಿ ಹಣವಿದ್ದರೂ ಸಹ ತಿನ್ನಲು ಅನ್ನ ಇರುವುದಿಲ್ಲ. ಇಂತಹ ರೈತರ ಜೀವನ ಕಾಲ ಕಳೆದಂತೆ ಕಷ್ಟವಾಗುತ್ತ ಸಾಗುತ್ತಿದೆ. ಹೀಗಾಗಿಯೇ ಕೃಷಿಕರ ಸಂಖ್ಯೆಯೂ ಸಹ ಕಡಿಮೆಯಾಗುತ್ತಾ ಸಾಗುತ್ತಿದೆ. ಇಂತಹ ಬೃಹತ್ ಭಾರತ ದೇಶದ ಬೆನ್ನೆಲುಬು ಆಗಿರುವ ರೈತನಿಗೆ ಈಗ ಮತ್ತೊಂದು ಕಷ್ಟ ಎದುರಾಗಿದೆ. ಹೌದು ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಕೃಷಿ ಮಸೂದೆ ರೈತರನ್ನು ಕೆರಳಿಸಿದೆ.

ಕೆಲವರು ದಿನಗಳ ಹಿಂದೆ ದೆಹಲಿ ಸೇರಿದಂತೆ ಇಡೀ ದೇಶಾದ್ಯಂತ ಈ ಮಸೂದೆ ವಿರುದ್ಧ ಕೋರೋಣ ಮಹಮರಿಯನ್ನು ಸಹ ಲೆಕ್ಕಿಸದೆ ಬೃಹತ್ ಪ್ರತಿಭಟನೆಗಳು ನಡೆದವು. ಇಷ್ಟಾದರೂ ಸರಕಾರ ಮಸುದೆಯನ್ನು ಹಿಂದಕ್ಕೆ ಪಡೆಯಲಿಲ್ಲ. ಹೀಗಾಗಿ ರೈತರು ಮತ್ತೊಮ್ಮೆ ಬೀದಿಗಿಳಿದಿದ್ದಾರೆ. ಅದರಲ್ಲಿ ಈಗ ನಮ್ಮ ರಾಜ್ಯದ ಸಾವಿರಾರು ರೈತರು ನಾಳೆ ಬೃಹತ್ ಪರೇಡ್ ಮಾಡಲಿದ್ದಾರೆ. ಕೇಂದ್ರ ಸರಕಾರ ಹೊರಡಿಸಿದ ಕೃಷಿ ಮಸೂದೆ ವಿರುದ್ಧದ ಅನ್ನದಾತನ ಕೂಗು ಈಗ ಮತ್ತೆ ಘರ್ಜಿಸಲು ಸಜ್ಜಾಗಿದೆ.

ರೈತ ಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ ಮತ್ತು ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಾಳೆ ಬೆಂಗಳೂರಿನಾದ್ಯಂತ ಬೃಹತ್ ಮಟ್ಟದಲ್ಲಿ ಪರೇಡ್ ಒಂದು ನಡೆಯಲು ಸಜ್ಜಾಗಿದೆ. ಈ ರೈತರ ಪ್ರತಿಭಟನೆಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಸಾಥ್ ನೀಡಲಿದ್ದು ಪ್ರತಿಭಟನೆಗೆ ಮತ್ತಷ್ಟು ಬಲ ಸಿಗಲಿದೆ. ನಾಳೆ ಗಣರಾಜ್ಯೋತ್ಸವದ ಮುಖ್ಯ ಮಂತ್ರಿಗಳ ಭಾಷಣ ಮುಗಿದ ಕೂಡಲೇ ಪರೇಡ್ ಆರಂಭವಾಗುತ್ತದೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ನಡೆದ ಮಾದರಿಯಲ್ಲಿಯೇ ಟ್ರಾಕ್ಟರ್ ರ್ಯಾಲಿ ಬೃಹತ್ ಮಟ್ಟದಲ್ಲಿ ನಡೆಯಲಿದೆ. ರೈತರ ಈ ಘರ್ಜನೆ ಜೋರಾಗಿಯೇ ಇರುವುದುದರಿಂದ ಬೆಂಗಳೂರಿನ ಜನ ನಾಳೆ ರೋಡಿಗಿಳಿಯುವ ಮುನ್ನ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ. ರೈತರ ನೋವಿಗೆ ಸಂಪೂರ್ಣ ಬೆಂಗಳೂರು ಲಾಕ್ ಆಗಲಿದೆ. ಮಾಹಿತಿಗಳ ಪ್ರಕಾರ 25 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್ ಗಳ ರ್ಯಾಲಿ ನಡೆಯಲಿದೆ. ಹೀಗಾಗಿ ರ್ಯಾಲಿ ವೇಳೆ ಸಾರ್ವಜನಿಕರು ಒಡಾಡದಂತೆ ರೈತ ಮುಖಂಡರು ಮನವಿ ಮಾಡಿದ್ದಾರ

%d bloggers like this: