ಇತ್ತೀಚಿನ ದಿನಮಾನಗಳಲ್ಲಿ ಬಹುಶಃ ಮೊಬೈಲ್ ಇಲ್ಲದ ವ್ಯಕ್ತಿ ಸಿಗುವುದು ಅತಿ ವಿರಳ ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಮಾನವ ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಬಹುತೇಕ ಕೆಲಸಗಳ ಸಲುವಾಗಿ ಮೋಬೈಲ್ ಮೇಲೆ ಅವಲಂಬಿತ ಆಗಿದ್ದಾನೆ. ಅದರಲ್ಲೂ ಜಿಯೋ ನಮ್ಮ ದೇಶಕ್ಕೆ ಕಾಲಿಟ್ಟಾಗಿನಿಂದ ದೇಶದ ಮೊಬೈಲ್ ಮಾರುಕಟ್ಟೆ ಊಹಿಸಲಾರದ ಮಟ್ಟದಲ್ಲಿ ಏರಿಕೆ ಕಂಡಿದ್ದು ಈಗ ಇತಿಹಾಸ. ಅದರಲ್ಲೂ ಭಾರತದಂಥ ಬೃಹತ್ ದೇಶವನ್ನೆ ಮೊಬೈಲ್ ತಯರಕರು ಮುಖ್ಯ ಮಾರುಕಟ್ಟೆ ಆಗಿಸಿಕೊಂಡು ಮೋಬೈಲ್ ಫೋನುಗಳನ್ನು ತಯಾರಿಸುತ್ತಾರೆ.

ಹೀಗಾಗಿಯೇ ತಿಂಗಳಿಗೆ ಒಂದು ಹೊಸ ಅವತರಣಿಕೆಯಂತೆ ನಮ್ಮ ದೇಶದಲ್ಲಿ ಬಿಡುಗಡೆಯಾಗುತ್ತಿರುತ್ತದೆ. ಇದೀಗ ಒಂದು ಫೋನ್ ದೇಶಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸುಲಭವಾಗಿ ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಇರುವ ಈ ಮೊಬೈಲ್ ಅನ್ನು ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ಫೋನ್ ಅಂತೀರಾ ಅದೆ ಪೋಕೊ ಕಂಪೆನಿಯ M2 ಅವತರಣಿಕೆ. ಹೌದು ನಾಲ್ಕು ದಿನಗಳ ಕಾಲ ಫ್ಲಿಪ್ ಕಾರ್ಟ್ ಆಪಿನಲ್ಲಿ ಭರ್ಜರಿ ಆಫರ್ ಗಳನ್ನು ನೀಡಲಾಗಿತ್ತು.

ಅದರಲ್ಲಿ ಈ ಮೊಬೈಲ್ ಫೋನಿನ ಬೆಲೆಯನ್ನು 10000 ದಂತೆ ನಿಗದಿ ಮಾಡಲಾಗಿತ್ತು. ಸಿಕ್ಕಾಪಟ್ಟೆ ಒಳ್ಳೆಯ ಫೀಚರ್ ಗಳನ್ನು ಹೊಂದಿರುವ ಈ m2 ಫೋನ್ ಹಾಟ್ ಕೇಕ್ ತರಹ ಸೆಲ್ ಆಗಿ ಹೋದವು. ಬರೋಬ್ಬರಿ ಒಂದು ಮಿಲಿಯನ್ ಗೂ ಅಧಿಕ ಮೊಬೈಲ್ ಗಳು ಮಾರಾಟವಾಗಿದ್ದು ಬೆಸ್ಟ್ ಸೆಲ್ಲರ್ ಎಂದು ಹೆಸರುವಾಸಿ ಕೂಡ ಆಗಿದೆ ಎಂದರೆ ನೀವು ನಂಬಲೇಬೇಕು. ಈ ಫೋನ್ 6 gb ರಾಮ್ ಅನ್ನು ಹೊಂದಿದ್ದು 64 gb ಮತ್ತು 128 gb ರೋಮ್ ಗಳಲ್ಲಿ ಲಭ್ಯ ಇದೆ.

ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಬ್ಯಾಟರಿ ಚಾರ್ಜ್ ಕೂಡ ಈ ಫೋನಿನಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಪೋಕೋ ಕಂಪೆನಿಯ ಬಹುತೇಕ ಮೊಬೈಲ್ ಗಳು ಉತ್ತಮ ಗುಣಮಟ್ಟಡಲ್ಲಿ ಸಿಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ದಿನಮಾನಗಳಲ್ಲಿ ಪೋಕೋ ತಯಾರಕರು ಫೀಚರ್ ಗಳೊಂದಿಗೆ ಮೊಬೈಲ್ ತಯಾರಿಸುವ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.