ಕನ್ನಡ ಕಿರುತೆರೆಯ ಪ್ರಸಿದ್ದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. ಹೌದು ಯಾವುದೇ ಧಾರಾವಾಹಿಯಲ್ಲಿ ಕಥೆ ಬೆಳೆಯುತ್ತಿದ್ದಂತೆ ಹೊಸ ಹೊಸ ಸಂಧರ್ಭ ಸನ್ನಿವೇಶಗಳು ತಿರುವು ಪಡೆದುಕೊಳ್ಳುತ್ತಾ ಹೋದಂತೆ ಕಥೆಯ ಪಾತ್ರಗಳು ಕೂಡ ಬದಲಾವಣೆ ಆಗಿ ಹೊಸ ಪಾತ್ರಗಳು ಪರಿಚಯವಾಗುತ್ತವೆ. ಆದರೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಪ್ರಮುಖವಾಗಿದ್ದ ಎರಡು ಪಾತ್ರಗಳು ಅಂತ್ಯ ಕಂಡಿವೆ. ಕಿರುತೆರೆಯಲ್ಲಿ ಮುದ್ದಾದ ಜೋಡಿಗಳಲ್ಲಿ ಒಂದಾಗಿದ್ದ ಅನಿಕೇತ್ ಮತ್ತು ಮೀರಾ ಪಾತ್ರಧಾರಿಗಳಾದ ನಟಿ ಅಂಕಿತಾ ಮತ್ತು ನಟ ರಾಘವೇಂದ್ರ ತಮ್ಮ ಪಾತ್ರಗಳಿಂದ ಹೊರ ಬಂದಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ಪಡಿಸಿದ್ದಾರೆ.

ನಟಿ ಅಂಕಿತಾ ಅವರು ಅನಿಕೇತ್ ಮತ್ತು ಮೀರಾ ಪಾತ್ರಧಾರಿ ಜೋಡಿಗಳಾದ ನಮ್ಮನ್ನ ನೀವು ತುಂಬಾ ಇಷ್ಟಪಟ್ಟಿದ್ದಿರಿ. ನಾವು ಹೋದ ಕಡೆಯಲೆಲ್ಲಾ ನಮ್ಮೊಂದಿಗೆ ನೀವು ಪ್ರೀತಿ ವಿಶ್ವಾಸದಿಂದ ಪೋಟೋ ಕೇಳುತ್ತಿದ್ದದ್ದು, ನೀವು ತೋರುತ್ತಿದ್ದ ಪ್ರೀತಿಗೆ ನಾವು ಚಿರುಋಣಿ. ಇಷ್ಟು ದಿನಗಳ ಕಾಲ ನಮ್ಮನ್ನು ನೀವು ಬೆಂಬಲಿಸಿ ಪ್ರೋತ್ಸಾಹ ನೀಡಿದ್ದೀರಿ. ಇದೀಗ ನಮಗೆ ದೊಡ್ಡ ಬಾಗಿಲು ಸ್ವಾಗತ ಮಾಡಿದೆ. ಬದಲಾವಣೆ ಜಗದ ನಿಯಮ. ಅದರಂತೆ ಇದೀಗ ನಾವು ಬದಲಾವಣೆ ಬಯಸಿ ಬೇರೆ ದಾರಿಯತ್ತ ಕಾಲಿಡುತ್ತಿದ್ದೇವೆ. ಮುಂದೆಯು ಕೂಡ ನಮ್ಮ ಮೇಲೆ ಅದೇ ಪ್ರೀತಿ ವಿಶ್ವಾಸ ಇರಲಿ. ಇದುವರೆಗೆ ನಮ್ಮ ಎಲ್ಲಾ ಫ್ಯಾನ್ ಪೇಜಸ್ ಗಳು ಅದರಲ್ಲಿಯೂ ಕಣ್ಮಣಿ ಪೇಜ್ ಗಳಿಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಅದೇ ರೀತಿಯಾಗಿ ಅನಿಕೇತ್ ಪಾತ್ರಧಾರಿ ನಟ ರಾಘವೇಂದ್ರ ಕೂಡ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ನಮ್ಮನೆ ಯುವರಾಣಿ ಧಾರಾವಾಹಿಯ ಎಲ್ಲಾ ವೀಕ್ಷಕರಿಗೆ ನಮಸ್ಕಾರ.

ನಮಗೆ ಗೊತ್ತಿದೆ ನಿಮಗೆ ಬೇಜಾರಾಗಿದೆ ಎಂದು ಆದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ನಮ್ಮನೆ ಯುವರಾಣಿ ಧಾರಾವಾಹಿಯ ಕಥೆ ಏನೇ ಬದಲಾದರೂ ಸಹ ಮೀರಾ ಕಥೆಯಲ್ಲಿ ಅನಿಕೇತ್ ಎಂದಿಗೂ ಕೂಡ ಜೀವಂತವಾಗಿರುತ್ತಾನೆ. ಈಗಾಗಲೇ ನಮಗೆ ನೀವು ಸಾಕಷ್ಟು ಪ್ರೀತಿ ನೀಡಿದ್ದೀರಿ. ಅಂತೆಯೇ ಇನ್ಮುಂದೆ ಕೂಡ ಹೊಸ ರೂಪದಲ್ಲಿ ಬರುವ ನಮ್ಮನೆ ಯುವರಾಣಿ ಧಾರಾವಾಹಿಗೆ ನಿಮ್ಮ ಪ್ರೋತ್ಸಾಹ ಬೆಂಬಲ ಇರಲಿ ಎಂದು ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
2019ರ ನವೆಂಬರ್ ತಿಂಗಳಲ್ಲಿ ಆರಂಭಗೊಂಡ ನಮ್ಮನೆ ಯುವರಾಣಿ ಧಾರಾವಾಹಿ ಉತ್ತಮವಾಗಿ ಪ್ರಸಾರವಾಗುತ್ತಿದೆ. ರಘು ಎನ್, ಕಾವ್ಯ ಮಹಾದೇವ್, ದೀಪಕ್ ಗೌಡ, ಅಂಕಿತಾ ಅಮರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.