ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮತ್ತೋರ್ವ ಹೊಸ ನಟಿ ಎಂಟ್ರಿ

ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಸೀರಿಯಲ್. 2019ರಿಂದ ತನ್ನ ಪ್ರಸಾರವನ್ನು ಶುರುಮಾಡಿದ ಈ ಸೀರಿಯಲ್ಗೆ ಆರಂಭದಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತುಂಬು ಕುಟುಂಬದ ಕಥೆ ಹೊಂದಿದ ಈ ಸೀರಿಯಲ್ ನಲ್ಲಿ ಅನಿಕೇತ್ ಮತ್ತು ಮೀರಾ, ಸಾಕೇತ್ ಮತ್ತು ಅಹಲ್ಯ ಎಲ್ಲರ ಅಚ್ಚುಮೆಚ್ಚಿನ ಜೋಡಿಯಾಗಿತ್ತು. ಆದರೆ ಈಗ ಅನಿಕೇತ್ ಮತ್ತು ಮೀರಾ ಪಾತ್ರಗಳು ಅಂತ್ಯವಾಗಿವೆ. ಈ ಎರಡು ಪಾತ್ರಗಳು ಅಂತ್ಯವಾದರೆ, ಈ ಸೀರಿಯಲ್ ಇರಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಆದರೆ ಹಾಗಾಗಲಿಲ್ಲ, ಅನಿಕೇತ್ ಹಾಗೂ ಮೀರಾ ಅವರ ಜಾಗದಲ್ಲಿ ಹೊಸ ಪಾತ್ರವೊಂದನ್ನು ಸೃಷ್ಟಿ ಮಾಡಿ ಅವರಿಬ್ಬರ ಜಾಗಕ್ಕೆ ಹೊಸ ಪಾತ್ರಗಳನ್ನು ನಮ್ಮನೆ ಯುವರಾಣಿ ಸೀರಿಯಲ್ ತಂಡ ತಂದಿದೆ. ನಮ್ಮನೆ ಯುವರಾಣಿ ಸೀರಿಯಲ್ ಕಥೆ ಏಳು ವರ್ಷ ಮುಂದಕ್ಕೆ ಹೋಗಿದೆ.

ಮೀರಾ ಮತ್ತು ಅನಿಕೇತ್ ಕಣ್ಮರೆಯಾಗಿದ್ದಾರೆ ಹಾಗೂ ಅವರಿಬ್ಬರ ಜಾಗಕ್ಕೆ ಹೊಸಬರು ಎಂಟ್ರಿಕೊಟ್ಟಿದ್ದಾರೆ. ಅನಿಕೇತ್ ಬದಲಾಗಿ ಬಂದಿರುವ ಹೊಸ ಪಾತ್ರಧಾರಿಯೇ ಪ್ರಣವ್ ರಾಜಗುರು. ಪ್ರಣವ್ ರಾಜಗುರು ಈಗ ನಮ್ಮನೆ ಯುವರಾಣಿ ಸೀರಿಯಲ್ನ ಲೀಡ್ ರೋಲ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಮೀರಾ ಜಾಗಕ್ಕೆ ಗಂಗಾ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಹಲವು ಬದಲಾವನೆಗಳನ್ನು ಈ ಸೀರಿಯಲ್ ನಲ್ಲಿ ತರಲಾಗಿದೆ. ಕಥೆಯ ಬದಲಾವಣೆಗೆ ತಕ್ಕಂತೆ ಹೊಸ ಪಾತ್ರಗಳು ಹುಟ್ಟಿಕೊಂಡು, ಬೇರೆ ನಟರು ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಪ್ರಣಮ್ ಪಾತ್ರದಲ್ಲಿ ಸ್ನೇಹಿತ ಗೌಡ, ಗಂಗಾ ಪಾತ್ರದಲ್ಲಿ ಖುಷಿ ಶಿವು, ನಮ್ರತಾ ಪಾತ್ರದಲ್ಲಿ ನಟಿ ಲತಾ, ಹೀಗೆ ಹಲವರು ಸೇರ್ಪಡೆಯಾಗಿದ್ದಾರೆ. ಈಗಾಗಲೇ ರಾಜಗುರು ಮನೆತನವನ್ನು ಹಾಳುಮಾಡಲು ದ್ವೇಷದಿಂದ ಮತ್ತೆ ಕಲ್ಪನಾ ಬಂದಿದ್ದಾಳೆ.

ಇವಳ ಜೊತೆಗೆ ಹೊಸ ವಿಲನ್ ಪಾತ್ರವೊಂದು ಹುಟ್ಟಿಕೊಂಡಿದೆ. ಈ ಹೊಸ ಪಾತ್ರದ ಹೆಸರು ನವ್ಯ. ಪ್ರೀತಿಸಿ ವಿವಾಹವಾದ ನಮ್ರತಾಳ ನಾದಿನಿ ನವ್ಯ ಆಗಿದ್ದು, ಪ್ರಣಮ್ ನ ಫ್ರೆಂಡ್ ಕೂಡ ಹೌದು. ಕುತಂತ್ರದ ಬುದ್ಧಿಯನ್ನು ಹೊಂದಿರುವ ನವ್ಯ ನಮ್ರತಾಳಿಗೆ ಮುಳ್ಳಾಗಿರುತ್ತಾಳೆ ಮತ್ತು ಪ್ರಣಮ್ ಮೇಲೆ ಕಣ್ಣಿಟ್ಟಿರುತ್ತಾಳೆ. ಸದ್ಯ ಪ್ರಣಮ್ ಮತ್ತು ಗಂಗಾ ನಡುವೆ ವಿಲನ್ ಆಗಿ ನವ್ಯ ಎಂಟ್ರಿ ಕೊಡಲಿದ್ದಾಳೆ. ನವ್ಯ ಪಾತ್ರಧಾರಿಯಾಗಿ ಕಿನ್ನರಿ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರೋಶಿನಿ ತೆಳ್ಕರ್ ಈ ವಿಲನ್ ಪಾತ್ರ ಮಾಡಲಿದ್ದಾರೆ. ಕಿನ್ನರಿ ಧಾರಾವಾಹಿಯಲ್ಲೂ ಕೂಡ ವಿಲನ್ ಆಗಿ ನಟಿಸಿದ್ದ ರೋಷಿಣಿ ಈಗ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹೀಗೆ ಸಾಕಷ್ಟು ಬದಲಾವಣೆಗಳ ಮೂಲಕ ಮುನ್ನುಗ್ಗುತ್ತಿರುವ ನಮ್ಮನೆ ಯುವರಾಣಿ ಸೀರಿಯಲ್ ಇನ್ನು ಹೊಸ ಪಾತ್ರಧಾರಿಗಳೊಂದಿಗೆ ಹೇಗೆ ಮೂಡಿಬರಲಿದೆ ಎಂಬುದು ಕಾದುನೋಡಬೇಕಿದೆ.

%d bloggers like this: