ನಟ ಅನಂತ್ ನಾಗ್ ಅವರು ಇನ್ಮುಂದೆ ‘ಡಾಕ್ಟರ್ ಅನಂತ್ ನಾಗ್’

ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಗೆ ವಿವಿಧ ವಿಶ್ವ ವಿಧ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತದೆ. ಅದರಂತೆ ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು ಐದು ದಶಕಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುವ ನಟ ಅನಂತ್ ನಾಗ್ ಅವರಿಗೆ ಇದೀಗ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಹೌದು ನಟ ಅನಂತ್ ನಾಗ್ ಅವರು 1973 ರಿಂದ ಬಣ್ಣದ ಲೋಕದಲ್ಲಿ ಸಕ್ರೀಯವಾಗಿ ನಾಟಕ ಮತ್ತು ಸಿನಿಮಾಗಳಲ್ಲಿ ನಟನೆ ಮಾಡುತ್ತಾ ತಮ್ಮ ಅಪಾರವಾದ ಕೊಡುಗೆ ನೀಡಿದ್ದಾರೆ‌. ಅನಂತ್ ನಾಗ್ ಅವರು ನಾಯಕ ನಟರಾಗಿ ಮಾತ್ರ ಅಲ್ಲದೆ ತಮ್ಮಸಮಕಾಲೀನ ನಟರಾದಂತಹ ಡಾ.ರಾಜ್ ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಶಂಕರ್ ನಾಗ್ ಅವರಿಂದ ಇತ್ತೀಚಿಗಿನ ಎಲ್ಲಾ ಯುವ ನಟರೊಂದಿಗೆ ನಟಿಸಿ ತಮಗೆ ಬಂದ ಪೋಷಕ ಪಾತ್ರಗಳನ್ನು ಕೂಡ ಉತ್ತಮವಾಗಿ ನಿರ್ವಹಿಸಿ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಮ್ಮ ಸಹಜ ನಟನೆಯ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ನಟ ಅನಂತ್ ನಾಗ್ ಅವರು ಇದುವರೆಗೆ ಕನ್ನಡದಲ್ಲಿ ಇನ್ನೂರು ಚಿತ್ರ ಸೇರಿದಂತೆ ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್ ಭಾಷೆ ಸೇರಿದಂತೆ ಒಟ್ಟು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಅನಂತ್ ನಾಗ್ ಅವರ ಕಲಾ ಸೇವೆ ಪರಿಗಣಿಸಿ ಬೆಂಗಳೂರು ಉತ್ತರ ವಿಶ್ವ ವಿಧ್ಯಾಲಯ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ. ಇಂದು ಅಂದರೆ ಜುಲೈ 15ರಂದು ಶುಕ್ರವಾರ ಉತ್ತರ ವಿವಿಯ ಎರಡನೇ ಘಟಿಕೋತ್ಸವದಲ್ಲಿ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಅನಂತ್ ನಾಗ್ ಅವರ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸೇವೆ ಪರಿಗಣಿಸಿ ಭಾರತ ರತ್ನ ಬಿಸ್ಮಿಲ್ಲಾ ಖಾನ್ ಅವರ ಪರಮ ಶಿಷ್ಯ ಹಿರಿಯ ಶೆಹನಾಯಿ ವಾದಕರಾದ ಪದ್ಮಶ್ರೀ ಎಸ್.ಬಲ್ಲೇಶ್ ಭಜಂತ್ರಿ ಅವರಿಗೆ ಡಾಕ್ಟರೇಟ್ ಪದವಿ ಗೌರವ ನೀಡಲಿದೆ. ಬಲ್ಲೇಶ್ ಭಜಂತ್ರಿ ಅವರು ಸರಿ ಸುಮಾರು ನಲವತ್ತು ವರ್ಷಗಳ ಕಾಲ ಬಿಸ್ಮಿಲ್ಲಾ ಖಾನ್ ಅವರ ಜೊತೆ ಶೆಹನಾಯಿ ನುಡಿಸಿದ್ದಾರೆ. ಇವರ ಜೊತೆಗೆ ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆಗಾಗಿ ಬೆಂಗಳೂರಿನ ಶರದ್ ಶರ್ಮಾ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಿದೆ. ಒಟ್ಟಾರೆಯಾಗಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ನೀಡಿದ್ದು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

%d bloggers like this: