ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ತಮ್ಮ ಸಿನಿಪಯಣಕ್ಕೆ ಕೊಂಚ ಬ್ರೇಕ್ ನೀಡಿ, ಸಾಮಾಜಿಕ ಸೇವೆ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯಾವುದೇ ಲಾಭೋಪೇಕ್ಷಯಿಲ್ಲದೇ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದು ಚೇತನ್ ಅವರ ಉದ್ದೇಶ. ಇವರು ಹಲವು ಬಾರಿ ಜನರ ಪರವಾಗಿ ಸರ್ಕಾರದ ವಿರುದ್ಧ ದ್ವನಿ ಎತ್ತಿರುವುದು ಉಂಟು. ಅದೇ ರೀತಿ ಈಗ ಹಿಜಬ್ ಕುರಿತಾಗಿ ಜಸ್ಟಿಸ್ ಕೃಷ್ಣ ದೀಕ್ಷಿತ್, ಹಿಜಬ್ ಬೇಕಾ ಬೇಡವಾ ಎಂಬುದರ ಬಗ್ಗೆ ನಿರ್ಧರಿಸುತ್ತಿರುವ ಬೆನ್ನಲ್ಲಿ, ನಟ ಚೇತನ್ ಅವರು ಕರ್ನಾಟಕ ಹೈಕೋರ್ಟ್ನ ಡಿಸಿಷನ್ ಬಗ್ಗೆ ಪ್ರಶ್ನಿಸಿದ್ದಾರೆ. ಈ ಹಿಂದೆ ಒಂದು ಅತ್ಯಾಚಾರದ ಕೇಸ್ ನಲ್ಲಿ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರು ಡಿಸ್ಟರ್ಬ್ಯಿಂಗ್ ಕಾಮೆಂಟ್ ಗಳನ್ನು ನೀಡಿದ್ದರು. ಈಗ ಹೇಗೆ ಹಿಜಬ್ ಬೇಕಾ ಬೇಡವಾ ಎಂದು ನಿರ್ಧಾರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದರು.

ಇದೀಗ ನಟ ಚೇತನ್ ಮಾಡಿರುವ ಟ್ವೀಟ್ ಎಲ್ಲೆಡೆ ವಿವಾದವನ್ನುಂಟು ಮಾಡಿದೆ. ನ್ಯಾಯಮೂರ್ತಿಗಳಿಗೆ ಅಗೌರವ ತೋರುವಂತಹ ಟ್ವೀಟ್ ಮಾಡಿದ ಕಾರಣಕ್ಕಾಗಿ ನಟ ಚೇತನ್ ಅವರನ್ನು ಬಂಧಿಸಲಾಗಿದೆ. ಹೌದು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳು ಚೇತನ್ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಚೇತನ್ ಅವರ ಕುಟುಂಬಕ್ಕೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಚೇತನ್ ಅವರ ಪತ್ನಿ ಮೇಘಾ ಫೇಸ್ಬುಕ್ ನಲ್ಲಿ ತಮ್ಮ ಪತಿ ಕಿಡ್ನಾಪ್ ಆಗಿದ್ದಾರೆ ಎಂದು ಹೇಳಿಕೊಂಡಿದ್ದರು. ಇದಷ್ಟೇ ಅಲ್ಲದೆ ಶೇಷಾದ್ರಿಪುರಂ ಪೊಲೀಸ್ ಠಾಣೆಗೂ ನನ್ನ ಪತಿ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದರು. ಮೇಘಾ ಅವರ ಫೇಸ್ ಬುಕ್ ಲೈವ್ ನ್ನು ವೀಕ್ಷಿಸಿದ ಚೇತನ್ ಅವರ ಅಭಿಮಾನಿಗಳು. ಶೇಷಾದ್ರಿಪುರಂ ಪೊಲೀಸ್ ಠಾಣೆಯ ಎದುರು ಜಮಾಯಿಸಿದಾಗ ಚೇತನ್ ಅವರು ಅದೇ ಪೊಲೀಸ್ ಠಾಣೆಯಲ್ಲಿ ಇರುವುದು ಗೊತ್ತಾಯಿತು.

ಚೇತನ್ ಅವರನ್ನು 8ನೇ ಎಸಿಎಂಎಂ ಕೋರ್ಟಿಗೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನಟ ಚೇತನ್ ಅವರ ಬಂಧನದ ಕುರಿತು ಸ್ಯಾಂಡಲ್ವುಡ್ ಮೌನವಹಿಸಿದೆ. ಈ ಸಂದರ್ಭದಲ್ಲಿ ನಟಿ ರಮ್ಯಾ ಅವರು ಚೇತನ್ ಅವರಿಗೆ ಸಾಥ್ ನೀಡಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್ ಪರ ಬ್ಯಾಟ್ ಬೀಸಿರುವ ರಮ್ಯಾ, ಚೇತನ್ ಮಾಡಿರುವ ಟ್ವೀಟ್ ನಲ್ಲಿ ಏನು ದೋಷವಿದೆ ಎಂದು ಕೇಳಿದ್ದಾರೆ. ಇದರ ಬಗ್ಗೆ ನಟಿ ರಮ್ಯಾ ಅವರು ಕೂಡ ಟ್ವೀಟ್ ಮಾಡಿದ್ದು, ಚೇತನ್ ಅವರು ಯಾವ ರೀತಿಯಲ್ಲಿ ಅಪರಾಧ ಮಾಡಿದ್ದಾರೆ. ಯಾಕೆ ಪೋಲಿಸ್ ಅವರನ್ನು ಬಂಧಿಸಿದ್ದಾರೆ ಎನ್ನುವ ಅರ್ಥದಲ್ಲಿ ಟ್ವಿಟ್ ಮಾಡಿದ್ದಾರೆ. ಸದ್ಯಕ್ಕೆ ನಟಿ ರಮ್ಯಾ ಮಾಡಿರುವ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ.