ನಟ ಪ್ರಭಾಸ್ ಬಳಿ ಇರುವ ದುಬಾರಿ ಕಾರುಗಳು ಇವು

ಇತ್ತೀಚೆಗೆ ಭಾರತೀಯ ಚಿತ್ರರಂಗದ ಸಿನಿಮಾ ತಾರೆಯರು ಸಿನಿಮಾಗಳ ಮೂಲಕ ಸುದ್ದಿಯಾಗುವುದಕ್ಕಿಂತ ಹೆಚ್ಚಾಗಿ ಹೊಸ ಹೊಸ ಐಷಾರಾಮಿ ದುಬಾರಿ ಕಾರ್ ಕೊಂಡುಕೊಳ್ಳುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ತೆಲುಗು ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಬಾಹುಬಲಿ ಚಿತ್ರದ ನಂತರ ಟಾಲಿವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಆಗುವುದರ ಜೊತೆಗೆ ಬಹು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಲಾರ್ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡಿರುವ ಪ್ರಭಾಸ್ ಸದ್ಯಕ್ಕೆ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಪೌರಾಣಿಕ ಸಿನಿಮಾ ಆದಿಪುರುಷ್ ಮತ್ತು ರಾಧೆ ಶ್ಯಾಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಪ್ರಭಾಸ್ ಅವರು ಮತ್ತೊಮ್ಮೆ ಸುದ್ದಿಯಾಗಿರುವುದು ಅವರ ಬರೋಬ್ಬರಿ ಒಂಭತ್ತು ಕೋಟಿ ಮೌಲ್ಯದ ರೋಲ್ಸ್ ರಾಯ್ ಫ್ಯಾಂಟಮ್ ಕಾರಿನ ಮೂಲಕ. ಹೌದು ನಟ ಪ್ರಭಾಸ್ ಅವರಿಗೆ ಕಾರ್ ಕ್ರೇಜ಼್ ಸಖತ್ತಾಗೇ ಇದೆ. ಈಗಾಗಲೇ ಅವರ ಬಳಿ ಆರು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರ್ ಕೂಡ ಇದೆ.

ಅವರ ಬಳಿ ಇರುವ ಕಾರುಗಳಲ್ಲಿ ರೋಲ್ಸ್ ರೊಯ್ಸ್ ಫ್ಯಾಂಟಮ್ ಬಹಳ ದುಬಾರಿ ಕಾರ್ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ನಟ ಪ್ರಭಾಸ್ ಅವರ ಕೈಯಲ್ಲಿ ಬಿಗ್ ಬಜೆಟ್ ಗಳು ಸಿನಿಮಾಗಳು ಇರುವ ಕಾರಣ ಅವರು ಸಖತ್ ಬಿಝಿ಼ ಆಗಿದ್ದಾರೆ. ಇನ್ನು ಅವರ ಜನಪ್ರಿಯತೆ ಭಾರತ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿಯೂ ಕೂಡ ಇರುವುದರಿಂದ ನಟ ಪ್ರಭಾಸ್ ಅವರ ಸಂಭಾವನೆ ಕೂಡ ಭಾರಿ ಜೋರಾಗಿದೆ. ಇನ್ನು ಇತ್ತೀಚೆಗಷ್ಟೆ ಬಾಲಿವುಡ್ ಖ್ಯಾತ ಗಾಯಕ ಸೋನುನಿಗಮ್ ಕೂಡ ಕಿಯಾ ಕಾರ್ನಿವಲ್ ಕಾರ್ ಖರೀದಿಸಿ ಸುದ್ದಿಯಾಗಿದ್ದರು.

%d bloggers like this: