ನಟನೆ ಜೊತೆಗೆ ನಿರ್ದೇಶನಕ್ಕೆ ಕೈ ಹಾಕುತ್ತಿದ್ದಾರೆ ಕನ್ನಡ ನಟ

2003ರಲ್ಲಿ ಎಕ್ಸ್ ಕ್ಯೂಸ್ ಮೀ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ನಟ ಅಜಯ್ ರಾವ್. ಮೊದಲ ಚಿತ್ರದಿಂದಲೇ ಯಶಸ್ಸು ಕಂಡ ಈ ನಟನಿಗೆ ಸಾಕಷ್ಟು ಆಫರ್ ಗಳು ಹುಡುಕಿಕೊಂಡು ಬಂದವು. ಆದರೆ ಎಕ್ಸ್ ಕ್ಯೂಸ್ ಮೀ ಚಿತ್ರದ ನಂತರ ಅಜಯ್ ರಾವ್ ಅವರಿಗೆ, ಅವರ ಸಿನಿಮಾ ಕೆರಿಯರ್ ನಲ್ಲಿ ಮತ್ತೊಂದು ದೊಡ್ಡ ಬ್ರೇಕ್ ನೀಡಿದ ಸಿನಿಮಾ ಎಂದರೆ ಕೃಷ್ಣನ್ ಲವ್ ಸ್ಟೋರಿ. ಇದಾದ ಬಳಿಕ ಅಜಯ್ ಅವರಿಗೆ ಎಲ್ಲರೂ ಅಜಯ್ ಕೃಷ್ಣ ಎಂದೇ ಕರೆಯತೊಡಗಿದರು. ಇದೇ ಹೆಸರಿನಿಂದ ಎಲ್ಲರ ಮನೆಮಾತಾಗಿರುವ ಅಜಯ್ ಅವರು ಸದ್ಯಕ್ಕೆ ಹಲವಾರು ಪ್ರಾಜೆಕ್ಟ್ ಗಳನ್ನು ಮಾಡುತ್ತಿದ್ದಾರೆ.

ಸದ್ಯಕ್ಕೆ ನಟ ಅಜಯ್ ರಾವ್ ಮತ್ತು ನಟಿ ರಚಿತಾ ರಾಮ್ ಅಭಿನಯದ ಲವ್ ಯು ರಚ್ಚು ಸಿನಿಮಾ ತೆರೆಕಂಡಿದೆ. ಇದಾದ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ನಟ ಅಜಯ್ ರಾವ್ ಅವರು ಮಂಜು ಸ್ವರಾಜ್ ಅವರು ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು. ಇದೊಂದು ಕಾದಂಬರಿ ಆಧಾರಿತ ಸಿನಿಮಾ ಆಗಿದ್ದು, ರೆಟ್ರೋ ಲವ್ ಸ್ಟೋರಿ ಆಗಿದೆ ಎಂದು ಹೇಳಿದರು. ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ನಟ ಅಜಯ್ ರಾವ್ ಅವರು ಇದರ ಜೊತೆಗೆ ಒಳ್ಳೆಯ ಸ್ಕ್ರಿಪ್ಟ್ ಗಳಿಗಾಗಿ ಹುಡುಕುತ್ತಿದ್ದೇನೆ ಎಂದು ಹೇಳಿದರು.

ಒಳ್ಳೆಯ ಸ್ಕ್ರಿಪ್ಟ್ ಗಳಿಗಾಗಿ ನನ್ನ ಟೀಮ್ ಸಹ ಸಾಕಷ್ಟು ಕೆಲಸಮಾಡುತ್ತಿದೆ. ಮಂಜು ಅವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಮುಗಿದ ತಕ್ಷಣ ಹೊಸ ಸಿನಿಮಾಗಳ ಕೆಲಸ ಶುರು ಮಾಡುವ ಯೋಜನೆ ಇದೆ. ಈ ಎರಡೂ ಸಿನಿಮಾಗಳ ಕೆಲಸಗಳು ಮುಗಿದ ನಂತರ ನಿರ್ದೇಶಕನಾಗಿ ಹೊಸ ಪ್ರಯಾಣವನ್ನು ಆರಂಭಿಸುವ ತವಕದಲ್ಲಿದ್ದೇನೆ ಎಂದು ಅಜಯ್ ರಾವ್ ಹೇಳಿದರು. ಹೌದು ನಟನಾಗಿ ತನ್ನ ಬದುಕನ್ನು ಕಟ್ಟಿಕೊಂಡಿದ್ದ ನಟ ಅಜಯ್ ರಾವ್ ಅವರು ನಿರ್ದೇಶಕನಾಗಿ ಬೆಳೆಯುವ ಕನಸನ್ನು ಹೊತ್ತುಕೊಂಡಿದ್ದಾರೆ. ಇವರ ಕನಸು ಆದಷ್ಟು ಬೇಗ ನನಸಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

%d bloggers like this: