ನಟನೆಯಿಂದ ಹಿಡಿದು ಚಿತ್ರ‌ ನಿರ್ಮಾಣದತ್ತ ಡಾಲಿ, ನಾನೂ ಕೂಡಾ ಒಬ್ಬ ಉದ್ಯಮಿ ಎಂದ ಡಾಲಿ ಧನಂಜಯ ಅವರು

ಬಿಜಿನೆಸ್ ಐಕಾನ್ ಪ್ರಶಸ್ತಿ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಜನಪ್ರಿಯ ನಟ ಡಾಲಿ ಧನಂಜಯ್, ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟರು ತಮ್ಮ ಆರಂಭದ ದಿನಗಳಲ್ಲಿ ಅನೇಕ ಏಳು- ಬೀಳುಗಳನ್ನು ಅನುಭವಿಸಿ ತದ ನಂತರ ತಮ್ಮ ಪ್ರತಿಭೆ ಮತ್ತು ಶ್ರಮದ ಪ್ರತಿಫಲವಾಗಿ ಇಂದು ಯಶಸ್ಸಿನ ಉತ್ತುಂಗದಲ್ಲಿ ಸ್ಥಾನ ಕಲ್ಪಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ನಟ ಧನಂಜಯ್ ಕೂಡ ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಅನೇಕ ಸೋಲು ಅವಮಾನಗಳನ್ನು ಅನುಭವಿಸಿ ಧೃತಿಗೆಡದೆ ಅವುಗಳನ್ನೆಲ್ಲಾ ಮೆಟ್ಟಿ ನಿಂತು ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕಿ ಇಂದು ಜನಪ್ರಿಯ ನಟರಾಗಿ ಹೊರ ಹೊಮ್ಮಿ ಕನ್ನಡ ಚಿತ್ರರಂಗ ಮಾತ್ರ ಅಲ್ಲದೆ ಪರಭಾಷೆಯ ಸಿನಿ ರಂಗದಲ್ಲಿಯೂ ಕೂಡ ಬೇಡಿಕೆ ನಟರಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ನಟ ಧನಂಜಯ್ ಅವರಿಗೆ ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಅವರ ಸಿನಿ ಜೀವನಕ್ಕೆ ಹೊಸ ತಿರುವು ಪಡೆದುಕೊಂಡಿತು‌. ಇನ್ನು ಇತ್ತೀಚೆಗಷ್ಟೇ ನಟ ಡಾಲಿ ಧನಂಜಯ್ ಅವರು ನಟಿಸುವುದರ ಜೊತೆಗೆ ತಾವೇ ಸ್ವತಃ ಚಿತ್ರ ನಿರ್ಮಾಣ ಮಾಡಿದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗಿ ಅಪಾರ ಜನಮೆಚ್ಚುಗೆ ಪಡೆದುಕೊಂಡು ಯಶಸ್ವಿಯಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಕೂಡ ಉತ್ತಮ ಕೆಲೆಕ್ಷನ್ ಮಾಡಿದೆ ಬಡವ ರಾಸ್ಕಲ್ ಚಿತ್ರ. ಈ ಬಡವ ರಾಸ್ಕಲ್ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಡಾಲಿ ಧನಂಜಯ್ ಅವರ ನಟರಾಗಿದ್ದವರು ಇದೀಗ ನಿರ್ಮಾಪಕರಾಗಿ ಬಡ್ತಿ ಪಡೆದುಕೊಂಡು ಬಿಜಿನೆಸ್ ಮ್ಯಾನ್ ಆಗಿದ್ದಾರೆ.

ಇತ್ತೀಚೆಗಷ್ಟೇ ರೇಡಿಯೋ ಸಿಟಿ 91.1 ಸಂಸ್ಥೆ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ ಬಿಜಿ಼ನೆಸ್ ಐಕಾನ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಜನಪ್ರಿಯ ರೇಡಿಯೋ ಸಂಸ್ಥೆಯಾದ ರೇಡಿಯೋ ಸಿಟಿ 91.1 ಸಂಸ್ಥೆಯು ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಸಹ ತಮ್ಮ ವ್ಯವಹಾರ ವ್ಯಾಪಾರಗಳನ್ನು ನಿಲ್ಲಿಸದೆ ಸಮರ್ಥವಾಗಿ ನಿಭಾಯಿಸಿಕೊಂಡು ಯಶಸ್ವಿಯಾಗಿ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಬಿಜಿ಼ನೆಸ್ ಐಕಾನ್ ಅವಾರ್ಡ್ ಗಳನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಭಾಗವಹಿಸಿ ನಟನಾಗಿದ್ದ ನಾನು ಈಗ ನಿರ್ಮಾಪಕನಾಗಿ ಸಿನಿಮಾ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದೇನೆ ಹೀಗಾಗಿ ನಾನು ಕೂಡ ಒಬ್ಬ ಉದ್ಯಮಿ ಆಗಿದ್ದೇನೆ.

ರೇಡಿಯೋ ಸಿಟಿ ಸಂಸ್ಥೆಯು ಉದ್ಯಮಿಗಳ ಕೆಲಸ ಕಾರ್ಯ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಬಿಜಿ಼ನೆಸ್ ಐಕಾನ್ ಅವಾರ್ಡ್ ನೀಡುತ್ತಿರುವುದು ಶ್ಲಾಘನೀಯವಾದ ಅಭಿನಂದನಾರ್ಹವಾದ ವಿಚಾರ ಎಂದು ಮಾತನಾಡಿದ್ದಾರೆ. ಇನ್ನು ಈ ಬಿಜಿ಼ನೆಸ್ ಐಕಾನ್ ಅವಾರ್ಡ್ ಅನ್ನು 20ಕ್ಕೂ ಹೆಚ್ಚು ಉದ್ಯಮಿಗಳು ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ಧನಂಜಯ್, ನಟಿ ಅಮೃತಾ ಅಯ್ಯಂಗಾರ್, ಹಿರಿಯ ನಟಿ ಸುಧಾರಾಣಿ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಕನ್ನಡದ ಸಾಮಾಜಿಕ ಜಾಲತಾಣವಾಗಿರುವ ಕೂ ಸಂಸ್ಥೆಯ ಮುಖ್ಯ ನಿರ್ವಾಹಕರಾದ ಅಪ್ರಮೇಯ ರಾಧಾಕೃಷ್ಣ ಅವರು ಪಾಲ್ಗೊಂಡಿದ್ದರು.

%d bloggers like this: