ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ದಶಕಗಳ ಕಾಲ ಮೆರೆದು ನಂತರ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರು ಈಗ ಸದ್ಯಕ್ಕೆ ಅದರಿಂದಲೂ ಕೂಡ ದೂರವಾಗಿದ್ದಾರೆ. ಎಲ್ಲವನ್ನು ಬಿಟ್ಟು ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ತಮ್ಮ ಖಾಸಗಿ ಕ್ಷಣದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಜೊತೆಗೆ ಚಿತ್ರರಂಗದ ತಮ್ಮ ಸ್ನೇಹಿತರ ಫೋಟೋಗಳಿಗೆ ಕಾಮೆಂಟ್ ನೀಡುತ್ತಾ ಟೈಮ್ ಪಾಸ್ ಮಾಡುತ್ತಿದ್ದಾರೆ. ಆದರೆ ಇಲ್ಲಿಯೂ ಕೂಡ ರಮ್ಯಾ ಅವರಿಗೆ ಕೆಲವು ಸೈಬರ್ ಕಿಡಿಗೇಡಿಗಳು ಕಿರಿಕಿರಿ ಮಾಡುತ್ತಿದ್ದಾರೆ. ಹೌದು ಎಲ್ಲವನ್ನು ತೊರೆದು ಸಧ್ಯ ಆರಾಮಾಗಿರುವ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕೆಲವು ಕಿಡಿಗೇಡಿಗಳು ಕಿರುಕುಳ ಮಾಡುತ್ತಿದ್ದಾರೆ.
ರಮ್ಯಾ ಅವರು ಇಲ್ಲಿಯವರೆಗೆ ಹಂಚಿಕೊಂಡ ಫೋಟೋಗಳೆಲ್ಲಾ ಕಣ್ಮರೆಯಾಗಿವೆ ಮತ್ತು ಎಷ್ಟೇ ಪ್ರಯತ್ನಪಟ್ಟರೂ ಕೂಡ ಮರಳಿ ಬರುತ್ತಿಲ್ಲ. ಕೆಲವು ಸೈಬರ್ ಕಿಡಿಗೇಡಿಗಳು ಮಾಡಿದ ಅವಾಂತರದಿಂದ ಇಷ್ಟೆಲ್ಲಾ ಆಗುತ್ತಿದೆ. ಇದರ ಬಗ್ಗೆ ಸ್ವತಃ ರಮ್ಯಾ ಅವರೇ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ. ಇದಕ್ಕೆ ರಮ್ಯಾ ಅವರ ಖಾತೆ ಹ್ಯಾಕ್ ಆಗಿರಬಹುದೇ ಎಂಬ ಅನುಮಾನಗಳು ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಖ್ಯಾತನಾಮರ ಅಕೌಂಟ್ ಗಳು ಹ್ಯಾಕ್ ಆಗುವುದು ವಿಪರೀತವಾಗಿ ಬಿಟ್ಟಿದೆ.