ಈ ನವಿಲುಗರಿ ಅಂದಾಕ್ಷಣ ನಮಗೆ ನೆನಪಿಗೆ ಬರುವುದು ಬಾಲ್ಯದಲ್ಲಿ ನಾವು ಶಾಲಾ ದಿನಗಳಲ್ಲಿ ನೋಟ್ ಬುಕ್ ಮಧ್ಯೆಭಾಗದಲ್ಲಿ ಈ ನವಿಲು ಗರಿಯನ್ನು ಇಟ್ಟು ಮರಿಹಾಕುತ್ತವೆ ಎಂದು ನಂಬಿ ಇಡುತ್ತಿದ್ದದ್ದು ನೆನಪಿಗೆ ಬರುತ್ತದೆ. ಇದೀಗ ಎಲ್ಲೆಂದರಲ್ಲಿ ನವಿಲುಗರಿಯ ಮಾರಾಟ ಕಂಡುಬರುತ್ತದೆ, ಅಷ್ಟಕ್ಕೂ ಈ ನವಿಲುಗರಿಯಿಂದ ಆಗುವ ಲಾಭವೇನು? ಅದನ್ನು ಯಾಕೆ ಮನೆಯಲ್ಲಿ ಇಡುತ್ತಾರೆ ಅಂದರೆ ಇದು ಮನೆಯಲ್ಲಿ ಸಕರಾತ್ಮಕ ವಾತಾವರಣ ಸೃಷ್ಠಿ ಮಾಡಬಲ್ಲದು ಎಂದು ಹಿರಿಯರು ಹೇಳುತ್ತಾರೆ. ಇದು ಕೇವಲ ಆಕರ್ಷಕವಾಗಿ ಕಾಣುವುದಕ್ಕೆ ಮನೆಯಲ್ಲಿ ಬಳಸುವುದಿಲ್ಲ ಇದರ ಹಿಂದೆ ಇರುವ ವಿಚಾರವೇ ಬೇರೆ ಅದು ಏನು ಗೊತ್ತಾ? ಹೌದು ಈ ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯ ಅಂದ ಹೆಚ್ಚಾಗುವುದರ ಜೊತೆಗೆ ಮನೆಯ ರೂಪುರೇಖೆಗಳು ಬದಲಾಗುತ್ತವೆ.

ಇದು ಶುಭಲಾಭವಾಗಿರುತ್ತದೆ, ಮನೆಗಳಲ್ಲಿ ಆರ್ಥಿಕವಾಗಿ ನಷ್ಟವೊಂದಿದ್ದರೆ ಇದನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಹಣದ ಕೊರತೆ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ನೀವು ನಿಮ್ಮ ಬೆಡ್ರೂಂ ನಲ್ಲಿ ಇಟ್ಟರೆ ಇನ್ನೂ ಹೆಚ್ಚು ಉತ್ತಮವಾಗಿ ಶುಭವಾಗುತ್ತದೆ ಎಂದು ಹೇಳುವುದುಂಟು. ಇದಲ್ಲದೆ ಮಳೆಗಾಲದಲ್ಲಿ ಮನೆಗೆ ಕ್ರಿಮಿಕೀಟಗಳು ಸೇರುವುದು ಸಹಜ ಈ ನವಿಲುಗರಿ ಇಂತಹ ಸಮಸ್ಯೆಗಳಿಗೂ ಕೂಡ ಪರಿಹಾರವಾಗಿ ಕಾಣುತ್ತದೆ ಒಟ್ಟಾರೆಯಾಗಿ ಈ ನವಿಲುಗರಿಯನ್ನು ಮನೆಯಲ್ಲಿಟ್ಟರೆ ಆಹ್ಲಾದಕರ ವಾತಾವರಣವುಂಟಾಗಿ ಆದಷ್ಟು ನಮ್ಮ ಆಲೋಚನೆಗಳು ಧನಾತ್ಮಕ ಚಿಂತನೆಗಳಿಗೆ ಕೂಡಿರುತ್ತದೆ ಎಂದು ಹೇಳುತ್ತಾರೆ.