ನೀರಜ್ ಚೋಪ್ರಾ ಅವರಿಗೆ ನಾನು ಮನಸೋಲುತ್ತೇನೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ, ನಟಿಯ ಹೇಳಿಕೆ

ಟೋಕಿಯೋ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನನ್ನೆದುರಿಗೆ ಸಿಕ್ಕರೆ ನಾನು ಏನು ಮಾಡುತ್ತೇನೋ ನನಗೆ ತಿಳಿಯೊಲ್ಲ ಎಂದ ಬಾಲಿವುಡ್ ಮಾಡೆಲ್ ಕಮ್ ನಟಿ! ಟೊಕಿಯೋ ಒಲಂಪಿಕ್ ನಲ್ಲಿ ಪುರುಷ ವಿಭಾಗದ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಅವರ ಸಾಧನೆಗೆ ಇಡೀ ದೇಶವೇ ಗೌರವ ಸಲ್ಲಿಸಿದೆ. ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ ನಲ್ಲಿ ಪುರುಷ ವಿಭಾಗದ ಜಾವಲಿನ್ ಥ್ರೋ ಕ್ರೀಡೆಯಲ್ಲಿ ಬರೋಬ್ಬರಿ 87.03 ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದು ನೀರಜ್ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಇದಾದ ಬಳಿಕ ರಾತ್ರೋ ರಾತ್ರಿ ನೀರಜ್ ಚೋಪ್ರಾ ಅವರಿಗೆ ಇಡೀ ಭಾರತ ದೇಶ ಮೆಚ್ಚಿ ಭಾರತಾಂಭೆಯ ಹೆಮ್ಮೆಯ ಪುತ್ರನಿಗೆ ಅಭಿನಂದನೆಗಳ ಮಹಾಪೂರವನ್ನೇ ತಿಳಿಸಿದರು. ಇತ್ತ ಇನ್ನು ಚಿನ್ನದ ಹುಡುಗನಿಗೆ ಚಿನ್ನದಂತ ವ್ಯಕ್ತಿತ್ವಕ್ಕೆ ಅವರ ಸೌಂಧರ್ಯಕ್ಕೆ ಸೋಲದ ಹುಡುಗಿಯರೇ ಇಲ್ಲ.

ಅವರ ಮೇಲೆ ಕ್ರಶ್ ಆದ ಅದೆಷ್ಟೋ ಹುಡುಗಿಯರು ಅವರ ಫೋಟೋಗಳನ್ನು ತಮ್ಮ ಡಿಪಿ, ಎಫ್ ಬಿ, ಇನ್ಸ್ಟಾವಾಲ್ ಗಳಲ್ಲಿ ಹಾಕಿಕೊಂಡಿದ್ದರು. ಅಂತೆಯೇ ಇದೀಗ ಬಾಲಿವುಡ್ ನ ಮಾಡೆಲ್ ಕಮ್ ನಟಿ ಜೋಯಿತಾ ಚಟರ್ಜಿ ಅವರಿಗೆ ನೀರಜ್ ಜೋಪ್ರಾ ಅವರ ಮೇಲೆ ಕ್ರಶ್ ಆಗಿದ್ಯಂತೆ. ಈ ಕ್ರಶ್ ಆಗಿರೋದು ಅವರು ಮಾಡಿದ ಸಾಧನೆಗಿಂತ ಅನ್ನುವುದಕ್ಕಿಂತ ಅವರ ಸರಳ ವ್ಯಕ್ತಿತ್ವಕ್ಕಂತೆ. ಹೌದು ನೀರಜ್ ಚೋಪ್ರಾ ಅವರು ಟೋಕೀಯೋ ಒಲಂಪಿಕ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದ ನಂತರ ಅವರ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಂಡ ನಟಿ ಜೋಯಿತಾ ಚಟರ್ಜಿ ಅವರಿಗೆ ನೀರಜ್ ಶೇರ್ ಮಾಡಿದ್ದ ಒಂದಷ್ಟು ವೀಡಿಯೋಗಳು, ಅವರು ಎಲ್ಲರೊಂದಿಗೂ ಬೆರೆಯುವ ರೀತಿ ಸರಳ ವ್ಯಕ್ತಿತ್ವದ ನಡೆ ಜೋಯಿತಾ ಅವರನ್ನ ಸೆಳೆದಿದೆಯಂತೆ.

ಅವರು ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿದರು ಕೂಡ ಅವರಲ್ಲಿ ಅಹಂ ಭಾವನೆ ಇಲ್ಲ. ಅವರ ಬಹುತೇಕ ಸಂದರ್ಶನದ ವೀಡಿಯೊಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಅವರ ಮಾತನಾಡುವ ಶೈಲಿ, ಸರಳತೆಯ ವ್ಯಕ್ತಿತ್ವ ನನ್ನನ್ನ ಇಂಪ್ರೆಸ್ ಮಾಡಿದೆ. ನೀರಜ್ ಚೋಪ್ರಾ ಅವರಿಗೆ ನಾನು ಮನಸೋಲುತ್ತೇನೆ ಎಂದು ನಾನು ಊಹೆ ಕೂಡ ಮಾಡರಲಿಲ್ಲ. ನೀರಜ್ ನನಗೆ ಸಿಕ್ಕರೆ ನನ್ನಷ್ಟು ಭಾಗ್ಯಶಾಲಿ ಮತ್ತೊಬ್ಬರಿಲ್ಲ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮಾಡೆಲ್ ಕಮ್ ನಟಿ ಜೋಯಿತಾ ಚಟರ್ಜಿ ಅವರು ವಿಕಾಸ್ ಗುಪ್ತಾ ನಿರ್ದೇಶನದ ಕ್ಲಾಸ್ ಆಫ್2020 ಎಂಬ ವೆಬ್ ಸೀರೀಸ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಅನೇಕ ಟೆಲಿವಿಶನ್ ಮತ್ತು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ.

%d bloggers like this: