ನಾವು ಸ್ನಾನದ ನಂತರ ಪ್ರತಿನಿತ್ಯ ಮನೆಯಲ್ಲಿ ಪೂಜೆ ಮುಗಿಸಿ ದೇವರ ಕೋಣೆಯಲ್ಲಿ ಕರ್ಪೂರ ಬೆಳಗುತ್ತಿರುವುದನ್ನ ನೋಡುತ್ತಿದ್ದರೆ ಮನಸಿನಲ್ಲಿ ಏನೋ ಆನಂದಮಯ. ಕರ್ಪೂರದಲ್ಲಿ ಹತ್ತು ಹಲವು ಬಗೆಯ ಕರ್ಪೂರಗಳಿವೆ ಅದರಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವುದು ಎರಡೇ ಅದು ಪಚ್ಚಕರ್ಪೂರ ಮತ್ತು ಆರತಿ ಕರ್ಪೂರ ಇನ್ನು ಎಲ್ಲಾ ಶುಭ ಮಂಗಳ ಕಾರ್ಯದಲ್ಲೂ ಈ ಕರ್ಪೂರವನ್ನು ಬಳಸುತ್ತಾರೆ. ಈ ಕರ್ಪೂರವು ಪೂಜಾ ಕೈಂಕರ್ಯದಲ್ಲಿ ಬಳಸುವ ಸುಗಂಧ ದ್ರವ್ಯವು ಹೌದು ಅಷ್ಟೇಅಲ್ಲದೇ ಇದರಲ್ಲಿ ಅನೇಕ ಔಷಧ ಗುಣಗಳನ್ನೂ ಕೂಡ ಹೊಂದಿದೆ.

ಪ್ರತಿನಿತ್ಯ ಮನೆಯಲ್ಲಿ ಕರ್ಪೂರವನ್ನು ಬೆಳಗಿಸಿದರೆ ಮನೆಯ ವಾತಾವರಣ ತಿಳಿಗೊಳಿಸಿ,ಸ್ವಚ್ಛಗೊಳಿಸಿ,ಪಾವಿತ್ರತೆಯನ್ನು ನೀಡುತ್ತದೆ ಎಂದು ಹೇಳುತ್ತಾರೆ ಶಾಸ್ತ್ರಜ್ಞರು.ಹಾಗೆಯೇ ಸೋಂಕು ರೋಗಗಳು ತಗಲದಂತೆ ನಮ್ಮನ್ನು ರಕ್ಷಿಸುತ್ತದೆ.ಬಿ.ಪಿ.ಹೆಚ್ಚಿರುವವರು ಪಚ್ಚಕರ್ಪೂರವನ್ನು ಚಿಟಿಕಿಯಷ್ಟು ಸೇವಿಸಿದರೆ ಬಿಪಿಯನ್ನು ನಿಯಂತ್ರಣದಲ್ಲಿಡಬಹುದು. ಚಿಟಿಕಿಯಷ್ಟು ಗಂಧದೊಂದಿಗೆ ಚಿಟಿಕಿಯಷ್ಟು ಪಚ್ಚಕರ್ಪೂರವನ್ನು ಸೇವಿಸುತ್ತಾ ಬಂದರೆ ಮೂತ್ರಸಂಬಂಧಿ ಕಾಯಿಲೆಗಳಿಂದ ದೂರವಿಡಬಹುದು.



ನಮ್ಮ ಶರೀರದಲ್ಲಿ ಸೂಕ್ಷ್ಮಾಣುಜೀವಿಗಳು ಜೀವಿಸುತ್ತಿರುತ್ತಿವೆ ಸ್ನಾನಮಾಡುವಾಗ ನೀರಿನಲ್ಲಿ ಸ್ವಲ್ಪಕರ್ಪೂರವನ್ನು ಸೇರಿಸಿ ಸ್ನಾನ ಮಾಡಿದರೆ ಶರೀರದಲ್ಲಿರುವ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತವೆ. ಇನ್ನು ರಾತ್ರಿ ಹೊತ್ತು ಮಲಗುವ ವೇಳೆಯಲ್ಲಿ ಒಂದಷ್ಟು ಕರ್ಪೂರವನ್ನು ಮೂಟೆಯಂತೆ ಕಟ್ಟಿ ಪಕ್ಕದಲ್ಲಿ ಇರಿಸಿಕೊಂಡರೆ ರಕ್ತ ಪ್ರಸರಣೆ ಸರಾಗವಾಗಿ ನಡೆಯುತ್ತದೆ. ಇದು ಶರೀರದಲ್ಲಿ ಜೀರ್ಣಕ್ರಿಯಶಕ್ತಿಯನ್ನು ಉತ್ತಮಗೊಳಿಸುತ್ತದೆ.ಪಚ್ಚಕರ್ಪೂರವನ್ನು ಪ್ರತಿಯೊಂದು ಅಡುಗೆ ಗೆ,ಪಾನಿಯಗೂ ಸ್ವಲ್ಪ ಮಟ್ಟಿಗೆ ಬೆರಸಿದರೆ ಸುವಾಸನೆಯಿಂದ ಕೂಡಿರುತ್ತದೆ.



ಇದು ಪಾವಿತ್ರತೆಯ ಮಹತ್ವವನ್ನು ಸೂಚಿಸುತ್ತದೆ ಇದನ್ನು ಪೂರ್ವಿಕರು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಪಚ್ಚ ಕರ್ಪೂರದ ಬಿಲ್ಲೆಗಳನ್ನು ಒಂದು ಲೋಟ ನೀರಿನೊಂದಿಗೆ ಮಂಚದ ಕೆಳಗಡೆ ಇಟ್ಟರೆ ಸೊಳ್ಳೆಗಳಿಂದ ಮುಕ್ತಿಪಡೆಯಬಹುದು. ದಂತ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಪ್ರತಿನಿತ್ಯ ಬಳಸುವ ಟೂತ್ಪೇಸ್ಟ್ ನೊಂದಿಗೆ ಕರ್ಪೂರದ ಪುಡಿಯೊಂದಿಗೆ ಮಿಶ್ರಣಮಾಡಿ ಹಲ್ಲು ಉಜ್ಜಿದರೇ ಬಾಯಿಯ ಸುವಾಸನೆಯನ್ನು ಕಾಪಾಡುತ್ತದೆ.



ಹಾಗೆಯೆ ಚಿಟುಕಿಯಷ್ಟು ಕರ್ಪೂರ ಮತ್ತು ಚಿಟಕಿಯಷ್ಟು ಬೆಲ್ಲವನ್ನು ಮಿಶ್ರಣಮಾಡಿ ಸೇವಿಸಿದರೆ ಉಬ್ಬಸ ಮತ್ತು ಅಸ್ತಮಾ ದಿಂದ ಬಳಲುತ್ತಿರುವವರು ಸೇವಿಸಿದರೆ ಮುಕ್ತಿಪಡೆಯಬಹುದಾಗಿದೆ.ಕ್ರಿಮಿಕೀಟಗಳ ಹಾವಳಿ,ನೊಣಗಳ ಹಾವಳಿ ನಿವಾರಣೆ ಮಾಡಬಹುದು ಹೇಗೆಂದರೆ ಬಿಸಿನೀರಿನೊಂದಿಗೆ ಬೇವಿನ ಎಲೆಯನ್ನು ,ಕರ್ಪೂರವನ್ನು ಮಿಶ್ರಣಮಾಡಿ ಮನೆಯಗೆಲ್ಲಾ ಸಿಂಪಡಿಸಿದರೆ ಮನೆಯು ಸುಗಂಧ ವಾಸನೆಯಿಂದ ಕೂಡಿರುತ್ತದೆ.



ಇನ್ನು ಕರ್ಪೂರವನ್ನು ಕೊಬ್ಬರಿ ಎಣ್ಣೆಯೊಂದಿಗೆ ಹಚ್ಚಿದರೆ ತಲೆಯ ಹೊಟ್ಟು ನಿವಾರಿಸಬಹುದು ಮತ್ತು ಗಂಡಸರಲ್ಲಿ ವೀರ್ಯವನ್ನು ಹೆಚ್ಚಿಸುತ್ತದೆ ಈ ಕರ್ಪೂರ.ತಲೆ ಮತ್ತು ಚರ್ಮಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆಉಪಶಮನ ವಾಗುತ್ತದೆ ಈ ಕರ್ಪೂರವನ್ನು ಬಿಸಿ ಕೊಬ್ಬರಿಎಣ್ಣೆಯೊಂದಿಗೆ ಕರ್ಪೂರ ಹಾಕಿ ಕರಗಿಸಿ ಅದನ್ನು ಸಮಸ್ಯೆಯ ಜಾಗಕ್ಕೆ ಮಸಾಜ್ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ.ಇನ್ನು ಪಾದಗಳು ಸೀಳು ಬಿಟ್ಟಿದರೆ ಪಾದಗಳನ್ನು ಬೆಚ್ಚಗಿನ ನೀರಿನೊಂದಿಗೆ ಕರ್ಪೂರವನ್ನು ಹಾಕಿ ನೆನಸಿದರೆ ಪರಿಹಾರ ಕಂಡುಕೊಳ್ಳಬಹುದು.