ನೀವು ಎಷ್ಟೇ ಕಪ್ಪು ಬಣ್ಣದವರಾಗಿದ್ದರೂ ಇದನ್ನು ಹಚ್ಚಿದರೆ ಮುಖ ಕಾಂತಿ ಬರುತ್ತದೆ

ಈ ಸೌಂದರ್ಯಪ್ರಜ್ಞೆ ಅನ್ನುವುದು ಎಲ್ಲರಿಗೂ ಇರುವುದಿಲ್ಲ ಇದ್ದರೂ ಸಹ ಆ ಸೌಂದರ್ಯತೆಯನ್ನು ನಿರ್ವಹಣೆ ಮಾಡುವ ಕಲೆ ತಿಳಿದಿರುವದಿಲ್ಲ. ಕೆಲವರಿಗೆ ತಮ್ಮ ಮುಖದ ಬಣ್ಣಕಪ್ಪು ಎಂದು ಕೀಳರಿಮೆ ಇರುತ್ತದೆ, ಇದರಿಂದಾಗಿ ಇವರು ತಮ್ಮ ಸ್ನೇಹಿತರ, ಬಂಧುಬಳಗದವರ ಶುಭಕಾರ್ಯಗಳಿಗೆ ಇನ್ಯಾವುದೇ ಸಮಾರಂಭಗಳಿಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಇಂತಹ ಸಮಸ್ಯೆ ಹೆಣ್ಣುಮಕ್ಕಳಿಗೆ ಕಾಡುವುದು ಹೆಚ್ಚಾಗಿರುತ್ತದೆ, ಕೆಲವರು ನಮ್ಮ ಮುಖ ಕಪ್ಪು ಎಂದು ಮಾರುಕಟ್ಟೆಯಲ್ಲಿ ಸಿಗುವಂತಹ ವಿವಿಧ ಕ್ರೀಂಗಳಸಿ ಮುಖ ಹಾಳು ಮಾಡಿಕೊಳ್ಳುತ್ತಾರೆ. ಕೆಲವೊಂದು ಕ್ರೀಂಗಳನ್ನು ಬಳಸುವುದರಿಂದ ಮೊಡವೆ ಗಳಾಗೆ ಮುಖ ಹದಗೆಡುವ ಸಾಧ್ಯತೆಯಿರುತ್ತದೆ. ಇದರ ಬದಲು ಮನೆಯಲ್ಲೆ ಒಂದಷ್ಟು ಪಧಾರ್ಥ ಬಳಸಿ ಮುಖ ಕಾಂತಿಯುತವಾಗಿ ಹೊಳೆಯುವ ಹಾಗೇ ಮಾಡಬಹುದು.

ಒಂದು ಬಟ್ಟಲಿಗೆ ಒಂದು ಚಮಚದಷ್ಟು ಕಾಫಿ ಪುಡಿ, ಒಂದು ಚಮಚದಷ್ಟು ಅಕ್ಕಿ ಹಿಟ್ಟು, ಮೊಸರು ಅಥವಾ ನಿಂಬೆರಸ, ರೋಸ್ ವಾಟರ್ ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ಚಮಚದಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಮೃದುವಾಗಲು ಬಿಡಬಾರದು ಆದಷ್ಟು ಗಟ್ಟಿಯಾಗಿರುವಂತೆ ಇಪ್ಪತ್ತು ನಿಮಿಷಗಳ ಕಾಲ ಬಿಡಬೇಕು. ತದನಂತರ ಬಿಸಿನೀರಿನಲ್ಲಿ ಕಾಟನ್ ಬಟ್ಟೆ ಹದ್ದಿ ಆ ಬಟ್ಟೆಯಿಂದ ನಿಮ್ಮ ಮುಖವನ್ನು ಸ್ವಚ್ಚಗೊಳಿಸಬೇಕು. ಇದಾದ ಬಳಿಕ ಆ ಮಿಶ್ರಣಮಾಡಿದನ್ನು ಮುಖಕ್ಕೆ ಬಳಸಿದರೆ ನಿಮ್ಮ ಮುಖ ಕಾಂತಿಯುತವಾದ ಹೊಳಪನ್ನು ಪಡೆಯುತ್ತದೆ. ಈ ಕಾಫಿಪುಡಿಯಲ್ಲಿ ಮೊಡವೆ ನಿವಾರಣೆ ಮಾಡುವಂತಹ ಗುಣವಿರುತ್ತದೆ, ಅಕ್ಕಿಹಿಟ್ಟು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಆದ್ದರಿಂದ ಈ ಮೂರು ಪಧಾರ್ಥಗಳನ್ನು ಬಳಸಿ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸುತ್ತಾರೆ.

%d bloggers like this: